CMS ಸಿಬ್ಬಂದಿಗೆ 7 ಕೋಟಿ ರೂಪಾಯಿಗಿಂತ ಊಟವೇ ಮುಖ್ಯ ಆಯ್ತಾ? – ಬಗೆದಷ್ಟು ಬಯಲಾಗುತ್ತಿದೆ ದರೋಡೆ ರಹಸ್ಯ!

CMS ಸಿಬ್ಬಂದಿಗೆ 7 ಕೋಟಿ ರೂಪಾಯಿಗಿಂತ ಊಟವೇ ಮುಖ್ಯ ಆಯ್ತಾ? – ಬಗೆದಷ್ಟು ಬಯಲಾಗುತ್ತಿದೆ ದರೋಡೆ ರಹಸ್ಯ!

ಬೆಂಗಳೂರಿನಲ್ಲಿ ನಡೆದ ಮಹಾ ದರೋಡೆ ಪ್ರಕರಣದ ತನಿಖೆ ವೇಗವಾಗಿ ಸಾಗ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ವಿಚಾರ ರಿವೀಲ್‌ ಆಗ್ತಿದೆ. ಇದೀಗ ಈ ಪ್ರಕರಣದಲ್ಲಿ CMS ವಾಹನ ಸಿಬ್ಬಂದಿ ಮೇಲೆ ಸಾಕಷ್ಟು ಅನುಮಾನ ಹುಟ್ಟಿಕೊಳ್ಳುತ್ತಿದೆ. ಹಣ ದರೋಡೆ ಆದ್ರೂ ವಾಹನ ಸಿಬ್ಬಂದಿಗೆ ಊಟದ್ದೇ ಚಿಂತೆಯಾ ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ವಿದೇಶಗಳಲ್ಲೂ ನಂದಿನಿ ತುಪ್ಪಕ್ಕೆ ಡಿಮ್ಯಾಂಡ್!‌ – ಮೂರು ದೇಶಗಳಿಗೆ ರಫ್ತು ಆಗಲಿದೆ ನಂದಿನಿ ತುಪ್ಪ!

ಬೆಂಗಳೂರಿನಲ್ಲಿ ಇತ್ತೀಚೆಗೆ  7 ಕೋಟಿ 11 ಲಕ್ಷ ರೂ. ದರೋಡೆ ಆಗಿತ್ತು. ಈ  ಪ್ರಕರಣವನ್ನು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ತನಿಖೆ ನಡೆಸಿ, ಈವರೆಗೆ 7.01 ಕೋಟಿ ರೂ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ 9 ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಈ ಮಧ್ಯೆ ಇತ್ತ ಸಿದ್ದಾಪುರ ಠಾಣೆ ಪೊಲೀಸರು CMS ವಾಹನ ಸಿಬ್ಬಂದಿ ವಿಚಾರಣೆ ವೇಳೆ ಮತ್ತಷ್ಟು ಸಂಗತಿಗಳು ಬೆಳಕಿಗೆ ಬಂದಿವೆ. ಅಷ್ಟು ದೊಡ್ಡ ದರೋಡೆ ನಡೆದಿದ್ದರೂ ಸಿಬ್ಬಂದಿಗೆ ಊಟವೇ ಮುಖ್ಯವಾಗಿತ್ತು.

ನ.19ರಂದು CMS ವಾಹನ ಅಡ್ಡಗಟ್ಟಿ 7.11 ಕೋಟಿ ರೂ ದರೋಡೆ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಕಸ್ಟೋಡಿಯನ್, ಗನ್​ಮ್ಯಾನ್ ಕರೆದೊಯ್ದಿದ್ದರು. ಮಾರ್ಗಮಧ್ಯೆ ಕಸ್ಟೋಡಿಯನ್, ಗನ್​ಮ್ಯಾನ್ ಇಳಿಸಿ ಗ್ಯಾಂಗ್ ತೆರಳಿತ್ತು. ದರೋಡೆಕೋರರು ಇಳಿಸಿದ್ದ ಸ್ಥಳದಿಂದ ಠಾಣೆಗೆ ಕೂಗಳತೆ ದೂರದಲ್ಲಿದ್ದರು ಈ ಬಗ್ಗೆ CMS ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ ಹೇಳಿದ್ದಾರೆ.

ದರೋಡೆ ನಡೆದು 2 ಗಂಟೆ ನಂತರ ಪೊಲೀಸರಿಗೆ ವಿಚಾರ ಗೊತ್ತಾಗಿತ್ತು. ಇಷ್ಟೊತ್ತು ಏನು ಮಾಡುತ್ತಿದ್ರಿ ಎಂದು ಪೊಲೀಸರು ವಿಚಾರಣೆ ಮಾಡಿದ್ದಾರೆ. ಊಟದ ಸಮಯ ಆಗಿತ್ತು, ಆದ್ದರಿಂದ ಊಟಕ್ಕೆ ಹೋಗಿದ್ದೆವು ಎಂದಿದ್ದಾರೆ. ಹೀಗಾಗಿ ಸಿಎಂಎಸ್ ವಾಹನ ಸಿಬ್ಬಂದಿ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿದೆ ಎಂದಿದ್ದಾರೆ.

ಸದ್ಯ ಸಿದ್ದಾಪುರ ಠಾಣೆಯಲ್ಲೇ ಪೊಲೀಸರಿಂದ ಸಿಎಂಎಸ್ ವಾಹನದ ಕಸ್ಟೋಡಿಯನ್, ಗನ್​ಮ್ಯಾನ್​ಗಳ ವಿಚಾರಣೆ ಮುಂದುವರಿದಿದೆ. ದರೋಡೆ ಪ್ರಕರಣದಲ್ಲಿ ಸಿಬ್ಬಂದಿ ಭಾಗಿಯಾದ ಬಗ್ಗೆ ಮಾಹಿತಿ ಇಲ್ಲ ಎಂದು  ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇನ್ನು ಚೆನ್ನೈ, ಆಂಧ್ರ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ರೂ. ಬಹುಮಾನ ನೀಡುತ್ತಿದ್ದೇವೆ.9 ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

Shwetha M