ವಿದೇಶಗಳಲ್ಲೂ ನಂದಿನಿ ತುಪ್ಪಕ್ಕೆ ಡಿಮ್ಯಾಂಡ್!‌ – ಮೂರು ದೇಶಗಳಿಗೆ ರಫ್ತು ಆಗಲಿದೆ ನಂದಿನಿ ತುಪ್ಪ!

ವಿದೇಶಗಳಲ್ಲೂ ನಂದಿನಿ ತುಪ್ಪಕ್ಕೆ ಡಿಮ್ಯಾಂಡ್!‌ – ಮೂರು ದೇಶಗಳಿಗೆ ರಫ್ತು ಆಗಲಿದೆ ನಂದಿನಿ ತುಪ್ಪ!

ನಂದಿನಿ ತುಪ್ಪ ಕೇವಲ ಕರ್ನಾಟಕ ಮಾತ್ರವಲ್ಲ, ಆಂಧ್ರಪ್ರದೇಶ, ಬಿಹಾರಕ್ಕೂ ಇದೀಗ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಇದಕ್ಕೆ ತನ್ನ ಗುಣಮಟ್ಟವೇ ಕಾರಣವಾಗಿದೆ. ಅತ್ಯುತ್ತಮ ಗುಣಮಟ್ಟವನ್ನು ಕಳೆದ ಹತ್ತಾರು ವರ್ಷಗಳಿಂದ ಕಾಯ್ದುಕೊಂಡ ಬಂದ ಹಿನ್ನೆಲೆಯಲ್ಲಿ ಇದೀಗ ನಂದಿನಿ ತುಪ್ಪಕ್ಕೆ ವಿದೇಶಗಳಲ್ಲೂ ಡಿಮ್ಯಾಂಡ್‌ ಶುರುವಾಗಿದೆ. ಇದೀಗ ಮೂರು ದೇಶಗಳಿಗೆ ನಂದಿನಿ ತುಪ್ಪ ರಫ್ತು ಆಗಲಿದೆ.

ಇದನ್ನೂ ಓದಿ: 2ನೇ ಮದ್ವೆನಾ? ಬಿಟ್ಟಿ ಊಟಕ್ಕೆ ಬಂದಿದ್ದೀರಾ ಎಂದು ಗೆಸ್ಟ್‌ ಬಳಿ ಕೇಳಿದ ಗಿಲ್ಲಿ – ಕಾಮಿಡಿ ಕಿಂಗ್‌ಗೆ ಮಾತೇ ಮುಳುವಾಗುತ್ತಾ?  

ನಂದಿನಿ ತುಪ್ಪಕ್ಕೆ ಈಗ ದೇಶಾದ್ಯಂತ ಹೆಚ್ಚಿನ ಬೇಡಿಕೆ ಇದೆ. ಕಳೆದ ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ, ನಿರೀಕ್ಷೆಗಿಂತ ಹೆಚ್ಚು ತುಪ್ಪ ಮಾರಾಟವಾಗಿದ್ದು, ತಿರುಪತಿಯಂತಹ ಸ್ಥಳಗಳಿಂದಲೂ ಹೆಚ್ಚಿನ ತುಪ್ಪಕ್ಕಾಗಿ ಬೇಡಿಕೆ ಬಂದಿದೆ. ಇದೀಗ ವಿದೇಶಗಳಲ್ಲೂ ನಂದಿನಿ ತುಪ್ಪಕ್ಕೆ ಬೇಡಿಕೆ ಶುರುವಾಗಿದ್ದು, ಮೂರು ದೇಶಗಳಿಗೆ ತುಪ್ಪ ರಫ್ತು ಮಾಡಲಾಗ್ತಿದೆ. ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾಗೆ ನಂದಿನಿ ತುಪ್ಪ ರಫ್ತು ಮಾಡುವ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.

ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಕಾರ್ಯಕ್ರಮ ನಡೆದಿದ್ದು, ನಂದಿನಿ ತುಪ್ಪ ರಫ್ತು ಮಾಡುವ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ವೇಳೆ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಎಂಡಿ ಶಿವಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ವೇಳೆ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಸೌದಿ ಅರೇಬಿಯಾ ದೇಶಗಳಿಗೆ ಕರ್ನಾಟಕದ ನಂದಿನಿ ತುಪ್ಪವನ್ನು ರಫ್ತು ಮಾಡಲಾಗುತ್ತಿದೆ. ತುಪ್ಪದ ಬೇಡಿಕೆ ಹೆಚ್ಚಾಗುತ್ತಿದ್ದು, ದೇಶ ವಿದೇಶಗಳಲ್ಲಿಯೂ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Shwetha M