2ನೇ ಮದ್ವೆನಾ? ಬಿಟ್ಟಿ ಊಟಕ್ಕೆ ಬಂದಿದ್ದೀರಾ ಎಂದು ಗೆಸ್ಟ್‌ ಬಳಿ ಕೇಳಿದ ಗಿಲ್ಲಿ – ಕಾಮಿಡಿ ಕಿಂಗ್‌ಗೆ ಮಾತೇ ಮುಳುವಾಗುತ್ತಾ?  

2ನೇ ಮದ್ವೆನಾ? ಬಿಟ್ಟಿ ಊಟಕ್ಕೆ ಬಂದಿದ್ದೀರಾ ಎಂದು ಗೆಸ್ಟ್‌ ಬಳಿ ಕೇಳಿದ ಗಿಲ್ಲಿ – ಕಾಮಿಡಿ ಕಿಂಗ್‌ಗೆ ಮಾತೇ ಮುಳುವಾಗುತ್ತಾ?  

ಬಿಗ್‌ ಬಾಸ್‌ ಮನೆಯ ಆಟ ರೋಚಕತೆಯಿಂದ ಕೂಡಿದೆ. ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡಲಾಗ್ತಿದೆ. ಈ ವಾರ ಬಿಗ್‌ಬಾಸ್‌ ಮನೆ ಬಿಗ್‌ ಬಾಸ್‌ ಪ್ಯಾಲೆಸ್‌ ಆಗಿದೆ. ಗೆಸ್ಟ್‌ ಆಗಿ ದೊಡ್ಮನೆಗೆ ಸೀಸನ್‌ 11 ರ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಆದ್ರೀಗ ಗಿಲ್ಲಿನಟ ಗೆಸ್ಟ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಸಂಬದ್ಧ ಪ್ರಶ್ನೆಗಳನ್ನ ಕೇಳಿ ಪೇಚಿಗೆ ಸಿಲುಕಿದ್ದಾರೆ.

ಇದನ್ನೂ ಓದಿ: ರಜತ್‌ ಕಾವು ಅಂದ್ರೆ ಗಿಲ್ಲಿಗೆ ವಿಲವಿಲ! – ರಜತ್‌ ಮುಂದೆ‌ ಸೈಲೆಂಟ್ ಆದ ಅಶ್ವಿನಿ ಗೌಡ!‌

ಗಿಲ್ಲಿನಟ ದೊಡ್ಮನೆಯಲ್ಲಿ ಕಾಮಿಡಿ ಹೆಸರಿನಲ್ಲಿ ಬೇರೆಯವರಿಗೆ ನೋವು ಉಂಟುಮಾಡ್ತಿದ್ದಾರೆ ಎಂಬ ಆರೋಪ ಪದೇ ಪದೆ ಕೇಳಿಬರ್ತಿದೆ. ಈ ಬಗ್ಗೆ ಕಿಚ್ಚನ ಪಂಚಾಯಿತಿಯಲ್ಲಿ ಕೂಡ ಚರ್ಚೆಯಾಗಿತ್ತು. ಆದ್ರೂ ಗಿಲ್ಲಿಗೆ ತನ್ನ ತಪ್ಪಿನ ಅರಿವಾಗುತ್ತಿಲ್ಲ. ಇದೀಗ ಮತ್ತೊಮ್ಮೆ ಗಿಲ್ಲಿನಟ ಕಾಮಿಡಿ ಮಾಡಲು ಹೋಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಜತ್‌, ಮಂಜು ಗಿಲ್ಲಿನಟನಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದರ ಪ್ರೋಮೋ ರಿಲೀಸ್‌ ಆಗಿದೆ.

ಬಿಗ್‌ಬಾಸ್‌ ಉಗ್ರಂ ಮಂಜುಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇಂದು ಬ್ಯಾಚುಲರ್‌ ಪಾರ್ಟ್‌ ನಡೆಯಲಿದೆ ಎಂದು ಹೇಳಿದ್ದಾರೆ. ಈ ವೇಳೆ ಎಲ್ಲರೂ  ಮಂಜುಗೆ ಕಂಗ್ರಾಜುಲೇಷನ್ ಎಂದು ಹೇಳಿದ್ರೆ ಗಿಲ್ಲಿನಟ ಮಾತ್ರ ಎಷ್ಟನೆಯದ್ದು? ಎರಡನೇಯದ್ದಾ, ಮೂರನೆಯದ್ದಾ ಎಂದು ಪ್ರಶ್ನೆ ಮಾಡಿದ್ದಾರೆ. ಇದ್ರಿಂದಾಗಿ ಉಗ್ರಂ ಮಂಜು ಸಿಟ್ಟಾಗಿದ್ದಾರೆ. ಗಿಲ್ಲಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಮತ್ತೊಂದ್ಕಡೆ ಗಿಲ್ಲಿ ಮೋಕ್ಷಿತಾ ಮನಸ್ಸು ಕೂಡ ನೋಯಿಸಿದ್ದಾರೆ. ಮೋಕ್ಷಿತಾ ಅಣ್ಣನ ಬ್ಯಾಚುಲರ್‌ ಪಾರ್ಟಿಗೆ ಬಂದಿದ್ದೀವಿ ಎಂದು ಹೇಳಿದ್ದಕ್ಕೆ, ಗಿಲ್ಲಿ ಬಿಟ್ಟಿ ಊಟ ಮಾಡಲು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಗಿಲ್ಲಿ ಮಾತಿನಿಂದ ಮೋಕ್ಷಿತಾ ಬೇಜಾರು ಮಾಡಿಕೊಂಡ್ರೆ, ರಜತ್‌ ಪಿತ್ತ ನೆತ್ತಿಗೇರಿದೆ. ಗಿಲ್ಲಿ ಮೇಲೆ ಜೋರಾಗಿ ಕೂಗಾಡಿದ್ದಾರೆ. ನೀನು ಬಿಟ್ಟಿ ಊಟ ಕೊಡ್ತಿದ್ದೀಯಾ? ನೀನು ನನ್ನತ್ರ ಇದೆಲ್ಲಾ ಮಾತಾಡ್ಬೇಡ ಅಂತಾ ರಜತ್‌ ಹೇಳಿದ್ದಾರೆ. ಬಳಿಕ ಗಿಲ್ಲಿ ಕ್ಷಮೆ ಕೇಳಿದ್ದಾರೆ.

Shwetha M