ರಜತ್ ಕಾವು ಅಂದ್ರೆ ಗಿಲ್ಲಿಗೆ ವಿಲವಿಲ! – ರಜತ್ ಮುಂದೆ ಸೈಲೆಂಟ್ ಆದ ಅಶ್ವಿನಿ ಗೌಡ!

ಬಿಗ್‌ಬಾಸ್ ಮನೆ ಈಗ ಬಿಗ್‌ಬಾಸ್ ಪ್ಯಾಲೆಸ್ ಆಗಿದೆ. ಇದೀಗ ದೊಡ್ಮನೆಗೆ ಸ್ಪೆಷಲ್ ಗೆಸ್ಟ್ ಎಂಟ್ರಿಕೊಟ್ಟಿದ್ದು, ಭರ್ಜರಿ ಪಾರ್ಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಆದ್ರೆ ಬಿಗ್‌ಬಾಸ್ ಇಲ್ಲೂ ಟ್ವಿಸ್ಟ್ ನೀಡಿದ್ದಾರೆ. ಸ್ಪರ್ಧಿಗಳು ಗೆಸ್ಟ್ ಜೊತೆ ಪಾರ್ಟಿ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಇದೀಗ ಬಿಗ್‌ಬಾಸ್ ಮನೆಗೆ ಸ್ಪೆಷಲ್ ಗೆಸ್ಟ್ ಎಂಟ್ರಿ ಕೊಟ್ಟಿರೋದು ಬಿಗ್‌ಬಾಸ್ ವೀಕ್ಷಕರಿಗೆ ಕಿಕ್ ಕೊಡಲಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಯುವಕನ ಮೇಲೆ ತಲ್ವಾರ್‌ನಿಂದ ದಾಳಿ! – ಓರ್ವ ವಶಕ್ಕೆ
ಬಿಗ್‌ಬಾಸ್‌ನ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋದಲ್ಲಿ ಬಿಗ್‌ಬಾಸ್ ಮನೆ ಅರಮನೆಯನ್ನ ಪಾರ್ಟಿಗೆ ಬೇಕಾದ ಹಾಗೆ ಸೆಟ್ ಮಾಡಲಾಗಿದೆ. ಬಳಿಕ ಬಿಗ್ ಬಾಸ್ ಮನೆಗೆ ಒಂದು ಕಾಲ್ ಬರುತ್ತೆ. ಅದನ್ನು ಸ್ಪಂದನಾ ರಿಸೀವ್ ಮಾಡ್ತಾರೆ. ಆ ಕಡೆಯಿಂದ, ಇದು ಬಿಗ್ ಬಾಸ್ ಪ್ಯಾಲೆಸಾ? ಅಂತ ಕೇಳ್ತಾರೆ. ‘ಹೌದು..’ ಅಂತ ಸ್ಪಂದನಾ ಪ್ರತಿಕ್ರಿಯಿಸುತ್ತಾರೆ. ಆ ಕಡೆಯಿಂದ ‘ರೂಮ್ ಬುಕ್ ಮಾಡಿದ್ವಲ್ಲ.. ಆನ್ ದಿ ವೇ ನಾವು ಬರ್ತಿದ್ದೇವೆ. ದೊಡ್ಡ ಪಾರ್ಟಿ ನಡೆಯುತ್ತೆ’ ಅಂತ ಹೇಳ್ತಾರೆ. ಹೀಗೆ ಲ್ಯಾಂಡ್‌ಲೈನ್ ಕರೆಯಲ್ಲಿ ಮಾತನಾಡುವಾಗ ಮುಖ ತೋರಿಸಲ್ಲ. ಆದರೆ, ಹಾಗೆ ಮಾತನಾಡೋದು ಉಗ್ರಂ ಮಂಜು.
ಮನೆಗೆ ಒಂದು ವಾಹನ ಎಂಟ್ರಾಗುತ್ತೆ. ಅದರಲ್ಲಿ ಮಾಜಿ ಸ್ಪರ್ಧಿಗಳಿರುತ್ತಾರೆ. ಅವರನ್ನು ಕಂಡ ತಕ್ಷಣ ಸ್ಪರ್ಧಿಗಳು ಫುಲ್ ಖುಷ್ ಆಗ್ತಾರೆ. ಅಷ್ಟೇ ಅಲ್ಲ ರಜತ್ ಅವರು ಗಿಲ್ಲಿ ಹಾಗೂ ಕಾವ್ಯ ಅವರ ಕಾಲೆಳಿದ್ದಾರೆ. ಕಾವು ಅಂತ ತಮಾಷೆ ಮಾಡಿದ್ದಾರೆ. ಅದಕ್ಕೆ ಗಿಲ್ಲಿ ಅವರು ಕಾವು ಅಂದರೆ ನೋವಾಗುತ್ತೆ ಎಂದಿದ್ದಾರೆ. ನೋವಾಗಲಿ ಅಂತಾನೇ ಅಲ್ವಾ ನಾವು ಬಂದಿರೋದು ಅಂತ ರಜತ್ ಹೇಳಿದ್ದಾರೆ.
ಇನ್ನು ಅಶ್ವಿನಿ ಅವರಿಗೆ ಹಳೆಯ ಸ್ಪರ್ಧಿಗಳು ಸ್ವಲ್ಪ ಗಟ್ಟಿಯಾಗಿ ಮಾತನಾಡಿ ಎಂದಿದ್ದಾರೆ. ಅದಕ್ಕೆ ಅಶ್ವಿನಿ ನನ್ನ ವಾಯ್ಸ್ ಕೇಳಿಸುತ್ತಿಲ್ವಾ? ಎಂದು ಹೇಳಿದ್ದಾರೆ. ಅದಕ್ಕೆ ಜೋರಾಗಿ ನಕ್ಕಿದ್ದಾರೆ ಮಾಜಿ ಸ್ಪರ್ಧಿಗಳು. ಇನ್ನು ರಜತ್ ಅಂತೂ ಗಿಲ್ಲಿ ಅವರನ್ನ ಬಿಟ್ಟಂತೆ ಕಾಣುತ್ತಿಲ್ಲ. ಗಿಲ್ಲಿ ನೀನು ರೋಧನೆ ಆದರೆ ನಾವು ಎಕ್ಸ್ ರೋಧನೆಗಳು ಎಂದು ಮಜವಾಗಿ ಮಾತನಾಡಿಸಿದ್ದಾರೆ. ಬಿಗ್ ಬಾಸ್ ಸದ್ಯ ಪ್ರೋಮೋ ಬಿಟ್ಟಿದ್ದು, ಮನೆಯಲ್ಲಿ ಪಾರ್ಟಿ ನಡೆಯುತ್ತೆ; ನೀವು ಕುತ್ಕೊಂಡು ನೋಡಬೇಕು ಅಷ್ಟೇ! ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.
ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್, ರಜತ್ ಬಿಗ್ ಬಾಸ್ ಪ್ಯಾಲೆಸ್‌ಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರಿಗೆ ಹಾಲಿ ಸ್ಪರ್ಧಿಗಳು ಪಾರ್ಟಿ ಅರೆಂಜ್ ಮಾಡಿ ಖುಷಿ ಪಡಿಸ್ತಿದ್ದಾರೆ. ಈ ಸಂಚಿಕೆ ವೀಕ್ಷಿಕರಿಗೆ ಮಜಾ ಕೊಡಲಿದೆ.

ನೋಡಿರಿ

