ಕ್ಯಾಪ್ಟನ್ KLಗೆ ಅಸಲಿ ಟಾಸ್ಕ್ – RO-KO ಪವರ್ ಸರಣಿ ಗೆಲ್ಲಿಸುತ್ತಾ?
ಟೆಸ್ಟ್ ಸೇಡು ODIನಲ್ಲಿ ತೀರುತ್ತಾ?

ಟೀಂ ಇಂಡಿಯಾದಲ್ಲಿ ಯಾರೇ ಇಂಜುರಿಯಾದ್ರೂ ಯಾರೇ ಡ್ರಾಪ್ ಆದ್ರೂ ಅಥವಾ ಫಾರ್ಮ್ ಕಳ್ಕೊಂಡ್ರೂ ಥಟ್ ಅಂತಾ ನೆನಪಾಗೋದೇ ಕೆಎಲ್ ರಾಹುಲ್. ಓಪನರ್, ಒನ್ ಡೌನ್, ಫಿನಿಶರ್, ವಿಕೆಟ್ ಕೀಪರ್ ಈಗ ಕ್ಯಾಪ್ಟನ್. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿ ಅನೌನ್ಸ್ ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಎಂಥದ್ದೇ ಸಿಚುಯೇಷನ್ನಲ್ಲೂ ಒಬ್ರ ಮೇಲೆ ನಂಬಿಕೆ ಇಡ್ಬೋದು ಅಂತಿದ್ರೆ ಅದು ಕೆಎಲ್ ರಾಹುಲ್ ಮೇಲೆ ಮಾತ್ರನೇ.
ಇದನ್ನೂ ಓದಿ : ಇಂದು 53ನೇ CJI ಆಗಿ ನ್ಯಾ.ಸೂರ್ಯಕಾಂತ್ ಪ್ರಮಾಣವಚನ ಸ್ವೀಕಾರ
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೀತಿದ್ದು ನವೆಂಬರ್ 30ರಿಂದ ಸೌತ್ ಆಫ್ರಿಕಾ ವಿರುದ್ಧ ಮೂರು ದಿನಗಳ ಏಕದಿನ ಸರಣಿ ಸ್ಟಾರ್ಟ್ ಆಗುತ್ತೆ. ಸದ್ಯ ಈ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಅನೌನ್ಸ್ ಆಗಿದ್ದು ಬಿಗ್ ಚೇಂಜಸ್ಗಳೇ ಆಗಿದೆ. ಅದೆಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಈ ಸರಣಿಗೆ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದಾರೆ. ಈ ನಾಯಕತ್ವ ರಾಹುಲ್ರಲ್ಲಿರೋ ಅರ್ಹತೆಗೆ ಫುಲ್ ಟೈಂ ಸಿಗ್ಬೇಕಿತ್ತು.
ಬಿದ್ದಷ್ಟೂ ಮೇಲೆದ್ದು ಬರುವ ಸಮರ್ಥ ಆಟಗಾರ ಕೆಎಲ್ ರಾಹುಲ್!
ಕೆಎಲ್ ರಾಹುಲ್. ಟೀಂ ಇಂಡಿಯಾ ಪಾಲಿನ ಆಪತ್ಬಾಂಧವ. ಆದ್ರೆ ರಾಹುಲ್ ಈ ಮಟ್ಟಕ್ಕೆ ನಿಲ್ಲೋದು ಈಸಿಯಾಗಿ ಇರಲೇಇಲ್ಲ. ಮೊದ್ಲೇ ಪಾಲಿಟಿಕ್ಸ್ ತುಂಬಿರೋ ಬಿಸಿಸಿಐನಲ್ಲಿ ತುಳಿಯೋರೇ ಜಾಸ್ತಿ. ಅದ್ರಲ್ಲೂ ರಾಹುಲ್ ವಿಚಾರದಲ್ಲಿ ಆತನಿಗೆ ಎಷ್ಟೇ ಅರ್ಹತೆ ಇದ್ರೂ ಸೈಡ್ಲೈನ್ ಮಾಡೋ ಪ್ರಯತ್ನ ನಡ್ಕೊಂಡು ಬಂದೇ ಇದೆ. ಸ್ಲಾಟ್ ಚೇಂಜ್ ಮಾಡ್ತಾರೆ, ಪ್ಲೇಯಿಂಗ್ 11ನಿಂದ ಹೊರಗಿಡ್ತಾರೆ. ನೆಕ್ಸ್ಟ್ ಲೆವೆಲ್ ನಲ್ಲಿ ಟ್ರೋಲ್ ಕೂಡ ಮಾಡ್ತಾರೆ. ಆದ್ರೆ ಮೈದಾನದ ಒಳಗಾಗ್ಲಿ ಅಥವಾ ಹೊರಗಾಗ್ಲಿ ಸಣ್ಣ ಅಸಮಾಧಾನವನ್ನೂ ತೋರಿಸಿಕೊಳ್ಳದೆ ತಾನಾಯ್ತು ಅಂತಾ ತನ್ನ ಆಟ ಆಯ್ತು ಅಂತಾ ಆಡಿದ ರಾಹುಲ್ ಈಗ ಬಿಸಿಸಿಐ ಪಾಲಿಗೆ ಆಪತ್ಬಾಂಧವನೇ ಆಗಿಬಿಟ್ಟಿದ್ದಾರೆ. ಸದ್ಯ ಗಿಲ್ ಆಬ್ಸೆನ್ಸ್ನಲ್ಲಿ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ರೋಹಿತ್ ಬಳಿಕ ಕ್ಯಾಪ್ಟನ್ ಆಗಬೇಕಿದ್ದ ರಾಹುಲ್!
ಌಕ್ಚುಲಿ ರಾಹುಲ್ಗಿರೋ ಅನುಭವ ಮತ್ತು ಆಟಕ್ಕೆ ಏಕದಿನ ಮಾದರಿಗೆ ಸಂಪೂರ್ಣ ನಾಯಕ ಆಗ್ಬೇಕಿತ್ತು. ಯಾಕಂದ್ರೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡಕ್ಕೆ ಕಾಲಿಟ್ಟು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪಳಗಿ, ರೋಹಿತ್ ಶರ್ಮಾ ಸಾರಥ್ಯದಲ್ಲಿ ಗ್ರೇಟ್ ಪ್ಲೇಯರ್ ಎನಿಸಿಕೊಂಡ ರಾಹುಲ್ರನ್ನ ನಾಯಕತ್ವಕ್ಕೆ ಕನ್ಸಿಡರ್ ಮಾಡ್ಲಿಲ್ಲ. ಯಾರದ್ದೋ ಕುಮ್ಮಕ್ಕು ಅಥವಾ ಒಳರಾಜಕೀಯದಿಂದ ಗಿಲ್ಗೆ ಪಟ್ಟ ಸಿಕ್ಕಿತ್ತು. ಆದ್ರೀಗ ಗಿಲ್ ಇಂಜುರಿ ನಡುವೆ ರಾಹುಲ್ ನಾಯಕನಾಗಿ ಪಟ್ಟಕ್ಕೇರಿದ್ದಾರೆ. ಹಾಗಂತ ಈ ಕ್ಯಾಪ್ಟನ್ಸಿ ತುಂಬಾ ಈಸಿ ಇಲ್ಲ. ಸವಾಲುಗಳ ಸರಮಾಲೆಯೇ ರಾಹುಲ್ ಮುಂದಿದೆ.
ರಾಹುಲ್ ಗೆ ಇರೋ ಸವಾಲು!
ಆಸ್ಟ್ರೇಲಿಯಾ ಏಕದಿನ ಸರಣಿ ಸೋತಿರೋ ಭಾರತ
ಟೆಸ್ಟ್ ಸರಣಿ ಸೋಲಿನ ಹಂತದಲ್ಲಿರೋ ಟೀಂ ಇಂಡಿಯಾ
ಫಾರ್ಮ್ ನಲ್ಲಿಲ್ಲದ ಗಿಲ್, ಪ್ರೂವ್ ಮಾಡ್ಬೇಕಿರೋ ರಾಹುಲ್
ರೋಹಿತ್ & ಕೊಹ್ಲಿ ನಡುವೆ ಪಳಗಿದ್ದು ಅನುಭವ
ಕ್ಯಾಪ್ಟನ್ಸಿ ಜೊತೆಗೆ ಬ್ಯಾಟಿಂಗ್ ನಲ್ಲೂ ಬಿಗ್ ಸ್ಕೋರ್
ಎಮರ್ಜಿಂಗ್ ಕ್ಯಾಪ್ಟನ್ ಆಗಿ ರಾಹುಲ್ ಗೆ ಅವಕಾಶ ಸಿಕ್ಕಿದ್ರೂ ತನ್ನನ್ನ ಕೈಬಿಟ್ಟವರಿಗೆ ತಿರುಗೇಟು ಕೊಡ್ಲೇಬೇಕು ಅಂದ್ರೆ ಈ ಅವಕಾಶವನ್ನ ಸಮರ್ಥವಾಗಿ ಬಳಸಿಕೊಳ್ಬೇಕಿದೆ. ಯಾರೆಲ್ಲಾ ತನ್ನನ್ನ ಇಗ್ನೋರ್ ಮಾಡಿದ್ರೋ ಅವ್ರಿಗೆಲ್ಲಾ ತಕ್ಕ ಪಾಠ ಕಲಿಸಬೇಕಿದೆ.

ನೋಡಿರಿ

