ನಂ.3 ನಲ್ಲಿ ನಿಲ್ಲದ Experiment – 12 ತಿಂಗಳಲ್ಲೇ 7 ಬ್ಯಾಟರ್ಸ್ ಚೇಂಜ್
ಗಂಭೀರ್ ಆಟ.. ಭಾರತಕ್ಕೆ ಪ್ರಾಣಸಂಕಟ

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಪಾಸಿಟಿವ್ ಗಿಂತ ನೆಗೆಟಿವ್ ಆಗಿಯೇ ಸದ್ದು ಮಾಡ್ತಿದ್ದಾರೆ. ಅವ್ರು ತೆಗೆದುಕೊಳ್ಳೋ ಡಿಸಿಷನ್ಸ್ ಕೂಡ ಸಾಕಷ್ಟು ಟೀಕೆಗೆ ಗುರಿಯಾಗ್ತಿದೆ. ಅದ್ರಲ್ಲೂ ಬ್ಯಾಟಿಂಗ್ ಆರ್ಡರ್ ಬದಲಾವಣೆ ತಂಡಕ್ಕೆ ದೊಡ್ಡ ಹೊಡೆತ ಕೊಡ್ತಿದೆ. ಗಂಭೀರ್ ಹೆಡ್ಕೋಚ್ ಆದ್ಮೇಲೆ ನಂಬರ್ 3 ಸ್ಲಾಟ್ನಲ್ಲಿ ಸಾಕಷ್ಟು ಎಕ್ಸ್ಪೆರಿಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಬೆಂಕಿಯಲ್ಲಿ ಅರಳಿದ ಹೂ ರಕ್ಷಿತಾ.. ಕುಡ್ಲದ ಹುಡ್ಗಿ ತಾಕತ್ತು ಅಶ್ವಿನಿಗೇನು ಗೊತ್ತು? – ರೆಬಲ್ ರಕ್ಷಿತಾ.. ಈ ಸಲ ಕಪ್ ಇವಳದ್ದೇ!?
ಗೌತಮ್ ಗಂಭೀರ್ ಹೆಡ್ ಕೋಚ್ ಆದ್ಮೇಲೆ ವೈಟ್ ಬಾಲ್ ಸಿರೀಸ್ನಲ್ಲಿ ತಂಡವನ್ನ ಎರಡು ಪ್ರಶಸ್ತಿಗಳಿಗೆ ಮುನ್ನಡೆಸಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೇ ಏಷ್ಯಾಕಪ್ ಚಾಂಪಿಯನ್ಸ್. ಬಟ್ ಟೆಸ್ಟ್ ಕ್ರಿಕೆಟ್ ಅಂತಾ ಬಂದಾಗ ನ್ಯೂಜಿಲೆಂಡ್ ವಿರುದ್ಧ ವೈಟ್ ವಾಶ್ ಆಗ್ತಾರೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸೋಲ್ತಾರೆ. ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮಿಸ್ ಮಾಡಿಕೊಳ್ತಾರೆ. ಈಗ ಸೌತ್ ಆಫ್ರಿಕಾ ವಿರುದ್ಧ ಸೋಲು. ಹೀಗೆ ರೆಡ್ ಬಾಲ್ ಫಾರ್ಮೆಟ್ನಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅದ್ರಲ್ಲೂ ಭಾರತ ತಂಡ ಕಳೆದ 13 ತಿಂಗಳಲ್ಲಿ ತವರಿನಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಸೋತಿದೆ. ಇದು ಅತ್ಯಂತ ಕೆಟ್ಟ ದಾಖಲೆಯಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ನಂಬರ್ 3 ಸ್ಲಾಟ್ನಲ್ಲಿ ಗಂಭೀರ್ ಮಾಡ್ತಿರೋ ಎಕ್ಸ್ಪೆರಿಮೆಂಟ್ ಅಂತೂ ಇನ್ನೂ ನಿಂತೇ ಇಲ್ಲ. ಸೌತ್ ಆಫ್ರಿಕಾ ವಿರುದ್ಧದ ಸಿರೀಸ್ನಲ್ಲೂ ಕಂಟಿನ್ಯೂ ಆಗಿದೆ.
ಟೆಸ್ಟ್ ತಂಡದ ನಂ. 3 ಸ್ಲಾಟ್ ಗೆ ಅಚ್ಚರಿಯ ಆಟಗಾರರು ಎಂಟ್ರಿ!
ಇತ್ತೀಚಿನ ದಿನಗಳಲ್ಲಿ ಟೆಸ್ಟ್ ತಂಡದ ನಂಬರ್ 3 ಸ್ಲಾಟ್ನಲ್ಲಿ ಬ್ಯಾಟರ್ಗಳು ಪದೇಪದೆ ಬದ್ಲಾಗ್ತಿದ್ದಾರೆ. ಕಂಟಿನ್ಯೂಯಸ್ ಆಗಿ ಯಾರನ್ನೂ ಆಡಿಸ್ತಿಲ್ಲ. ಗಂಭಿರ್ ಕೋಚ್ ಆದ್ಮೇಲೆ ಕಳೆದ ಒಂದೂವರೆ ವರ್ಷದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಒನ್-ಡೌನ್ ಸ್ಥಾನದಲ್ಲಿ ಆಡಿದ ಏಳನೇ ಬ್ಯಾಟ್ಸ್‌ಮನ್ ವಾಷಿಂಗ್ಟನ್ ಸುಂದರ್. ಅಂದ್ರೆ ಏಳು ವಿಭಿನ್ನ ಬ್ಯಾಟ್ಸ್‌ಮನ್‌ಗಳು 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
3ನೇ ಕ್ರಮಾಂಕದಲ್ಲಿ ಬ್ಯಾಟರ್ಸ್!
ಗಂಭೀರ್ ಕೋಚ್ ಆದಾಗ ಶುಭ್ ಮನ್ ಗಿಲ್ ಬ್ಯಾಟಿಂಗ್
ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಲಾ ಒಂದು ಪಂದ್ಯ
ದೇವದತ್ ಪಡಿಕ್ಕಲ್ 1 ಪಂದ್ಯ, ಕರುಣ್ ನಾಯರ್ ಗೆ ಅವಕಾಶ
ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸುದರ್ಶನ್ ಕೂಡ ಇದೇ ಕ್ರಮಾಂಕ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ವಾಷಿಂಗ್ಟನ್ ಸುಂದರ್
ಟೀಂ ಇಂಡಿಯಾದಲ್ಲಿ ಅದೂ ಟೆಸ್ಟ್ ಕ್ರಿಕೆಟ್ ಅಂತಾ ಬಂದಾಗ ಲೆಜೆಂಡರಿ ಪ್ಲೇಯರ್ಗಳೆಲ್ಲಾ ನಂಬರ್ 3ನಲ್ಲೇ ಜಾಸ್ತಿ ಆಡಿದ್ದಾರೆ. ಕಳೆದ 25 ವರ್ಷಗಳಿಂದ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಅವರೊಂದಿಗೆ 3 ನೇ ಮತ್ತು 4 ನೇ ಸ್ಥಾನದಲ್ಲಿ ಆಡುತ್ತಿದ್ದರು. ಈ ದಿಗ್ಗಜರ ಬಳಿಕ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಈ ಜವಾಬ್ದಾರಿಯನ್ನು ವಹಿಸಿಕೊಂಡರು. ಸದ್ಯಕ್ಕೆ ಗಿಲ್ 4ನೇ ಸ್ಥಾನಕ್ಕೆ ಫಿಕ್ಸ್ ಅನ್ನಿಸಿದ್ರೂ ಕೂಡ 3ನೇ ಸ್ಥಾನವು ಇನ್ನೂ ನಿರ್ಧಾರವಾಗಿಲ್ಲ. ಜೊತೆಗೆ ನಿರಂತರವಾಗಿ ಪ್ರಯೋಗ ಮಾಡ್ತಾನೇ ಇರೋದ್ರಿಂದ ಒಬ್ರನ್ನ ಫೈನಲ್ ಮಾಡೋದು ತುಂಬಾನೇ ಕಷ್ಟ ಆಗ್ತಿದೆ.

ನೋಡಿರಿ

