ಮನೆಗೆ ಇರುವೆ ಬಂದರೇ ಶುಭನಾ? ಅಶುಭನಾ?

ಮನೆಗೆ ಇರುವೆ ಬಂದರೇ ಶುಭನಾ? ಅಶುಭನಾ?

ಮನೆಯಲ್ಲಿ ಇರುವೆಗಳು ಸಾಮಾನ್ಯವಾಗಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ಇರುವೆಗಳು ಬಂದಾಗ ಕೆಲವೊಬ್ಬರು ಅದನ್ನು ಶುಭವೆಂದು ಹೇಳಿದರೆ, ಇನ್ನು ಕೆಲವೊಬ್ಬರು ಮನೆಯಲ್ಲಿ ಇರುವೆಗಳು ಬರುವುದನ್ನು ಅಶುಭವೆಂದು ಹೇಳುತ್ತಾರೆ. ಈ ನಂಬಿಕೆಗಳು ಯಾವಾಗಲೂ ಸ್ಥಳಗಳನ್ನು ಹಾಗೂ ಸಮುದಾಯಗಳನ್ನು ಅವಲಂಭಿಸಿರುತ್ತದೆ. ಅದಕ್ಕೆ ಅನುಗುಣವಾಗಿ ನಂಬಿಕೆಗಳು ಕೂಡ ಬದಲಾಗುತ್ತದೆ. ಕೆಲವೊಬ್ಬರು ಇರುವೆಗಳು ಮನೆಗೆ ಬಂದರೆ ಅದು ಸಂಪತ್ತಿನ ಅಭಿವೃದ್ಧಿಯ ಸಂಕೇತವೆಂದು ಹೇಳಿದರೆ, ಇನ್ನು ಕೆಲವೊಬ್ಬರು ಇದನ್ನು ನಕಾರಾತ್ಮಕ ಶಕ್ತಿಯ ಆಗಮನದ ಸಂಕೇತವೆಂದು ಪರಿಗಣಿಸುತ್ತಾರೆ. ಹಾಗಾಗಿ, ನಾವಿಂದು ಈ ಲೇಖನದಲ್ಲಿ ಇರುವೆಗಳು ಮನೆಗೆ ಅದು ಯಾವುದರ ಸಂಕೇತ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳೋಣ.

ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದಂತೆ ಇರುವೆಗಳು ಕಾಣಿಸಿಕೊಳ್ಳಲು ಪ್ರಾರಂಭವಾದರೆ ಅದು ನಿಮ್ಮ ಮನೆಗೆ ಬರಬಹುದಾದ ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ನಿಮ್ಮ ಮನೆಗೆ ಸಂಪತ್ತು ಮತ್ತು ಸಮೃದ್ಧಿಯ ಆಗಮನವಾಗುವುದು ಎಂಬುದನ್ನು ಇರುವೆಗಳ ಆಗಮನವು ಸೂಚಸುತ್ತದೆ. ಇದು ನಮಗೆ ಶುಭ ಸಂಕೇತವಾಗಿದೆ. ಇದು ಕುಟುಂಬದ ಸದಸ್ಯರಿಗೆ ಶುಭ ಸೂಚನೆಯನ್ನು ನೀಡುವಂತಹ ಘಟನೆಯಾಗಿದೆ.

ಇದನ್ನೂ ಓದಿ: ನಿಮ್ಗೆ ಕನಸಿನಲ್ಲಿ ಈ ವಸ್ತು ಕಂಡರೆ ಏನರ್ಥ? – ಸ್ವಪ್ನ ಶಾಸ್ತ್ರ ಏನ್ ಹೇಳುತ್ತೆ?

ಇರುವೆಗಳ ಆಗಮನವು ಮನೆಯೊಳಗಿನ ಅಸ್ಥಿರತೆ ಮತ್ತು ಸಮಸ್ಯೆಗಳ ಸಂಕೇತವಾಗಬಹುದು. ಈ ಕಾರಣಕ್ಕಾಗಿ ಅನೇಕರು ಇರುವೆಗಳು ಮನೆ ಬಂದಾಗ ಚಿಂತೆಯಲ್ಲಿ ಮುಳುಗುತ್ತಾರೆ. ಇದು ಆ ಕುಟುಂಬವು ಆರ್ಥಿಕವಾಗಿ ದುರ್ಬಲವಾಗುವುದು ಎಂಬುದನ್ನು ಸೂಚಿಸುತ್ತದೆ. ಇರುವೆಗಳು ಯಾವಾಗಲೂ ಗುಂಪಿನಲ್ಲಿ ಸಂಚರಿಸುವ ಜೀವಿಗಳು. ಇವುಗಳು ನಿಮ್ಮ ಮನೆಗೆ ಬಂದರೂ ಅದು ಗುಂಪು ಗುಂಪಾಗಿಯೇ ಬರುತ್ತದೆ. ಒಂದು ವೇಳೆ ಇರುವೆಗಳು ನಿಮ್ಮ ಮನೆಗೆ ಗುಂಪು ಗುಂಪಾಗಿ ಬಂದರೆ ಅದು ಕುಟುಂಬದ ಐಕ್ಯತೆಯನ್ನು ಸೂಚಿಸುತ್ತದೆ. ಇದು ಸಂಬಂಧಗಳ ಮಹತ್ವವನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಮತ್ತು ಶ್ರಮಿಸಲು ಪ್ರೇರೇಪಿಸುತ್ತದೆ.

ಅನೇಕ ಜನರು ಇರುವೆಗಳ ಆಗಮನವನ್ನು ಆರ್ಥಿಕ ಮತ್ತು ವೃತ್ತಿಪರ ಬಿಕ್ಕಟ್ಟಿನ ಸಂಕೇತವೆಂದು ಪರಿಗಣಿಸುತ್ತಾರೆ. ಮನೆಗೆ ಇರುವೆಗಳು ಬಂದರೆ ಅದು ನಿಮ್ಮ ಜೀವನದಲ್ಲಿ ನೀವು ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಕೂಡ ಸಂಕೇತಿಸುತ್ತದೆ. ಇದು ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂಬುದನ್ನು ಹೇಳುತ್ತದೆ.

Kishor KV