ಬಾಲಿವುಡ್ ನಟ ಧರ್ಮೇಂದ್ರ ಇನ್ನಿಲ್ಲ – ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನು ನೆನಪು ಮಾತ್ರ

ಬಾಲಿವುಡ್ ನಟ ಧರ್ಮೇಂದ್ರ ಇನ್ನಿಲ್ಲ – ಹಿಂದಿ ಚಿತ್ರರಂಗದ ಹಿ ಮ್ಯಾನ್ ಇನ್ನು ನೆನಪು ಮಾತ್ರ

ಹಿಂದಿ ಚಿತ್ರರಂಗದ ದಿಗ್ಗಜ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‘ ಹಿರಿಯ ನಟ ವಿಧಿವಶರಾಗಿದ್ದಾರೆ. ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು – ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಣೆ

ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ಬಾಲಿವುಡ್ ಆಳಿದ್ದ ನಟ ಧರ್ಮೇಂದ್ರ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ. 89 ವರ್ಷ ವಯಸ್ಸಿನ ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಧರ್ಮೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು.

ಭಾರತೀಯ ಚಿತ್ರರಂಗದ ಮೇರು ನಟರಲ್ಲಿ ಧರ್ಮೇಂದ್ರ ಕೂಡಾ ಒಬ್ಬರು. ನಟನಾಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಅವರು 6 ದಶಕಗಳ ಕಾಲ ಸಕ್ರಿಯರಾಗಿದ್ದರು. ಇಳಿ ವಯಸ್ಸಿನಲ್ಲಿ ಕೂಡ ಅವರು ನಟಿಸುವುದು ನಿಲ್ಲಿಸಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸಹ ಅವರು ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಧರ್ಮೇಂದ್ರ ಅವರು ಯಶಸ್ಸು ಕಂಡಿದ್ದರು. 2004ರಿಂದ 2009ರ ತನಕ ಭಾರತೀಯ ಜನತಾ ಪಕ್ಷದಿಂದ ಅವರ ಸಂಸದನಾಗಿ ಕೆಲಸ ಮಾಡಿದ್ದರು. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿ ಕೂಡ ಅವರು ಕಾಣಿಸಿಕೊಂಡಿದ್ದರು.

ಧರ್ಮೇಂದ್ರ ಅವರ ಧರಮ್ ಸಿಂಗ್ ಡಿಯೋಲ್ ಆಗಿ 1935ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಪಂಜಾಬ್​ನ ಸಣ್ಣ ನಗರದಿಂದ ಬಂದ ಅವರು, ಚಿತ್ರರಂಗದ ಅತ್ಯಂತ ಪ್ರೀತಿಯ ಹೀರೋ ಆದರು. 1950ರ ಸಂದರ್ಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ತಲ್ಲಣಗಳು ಎದ್ದಿದ್ದವು. 1960ರ ವೇಳೆಗೆ ಚಿತ್ರರಂಗಕ್ಕೆ ಬಂದ ಅವರು, ಹೊಸ ಬದಲಾವಣೆಗೆ ಸಾಕ್ಷಿ ಆದರು.

ನಟ ಧರ್ಮೇಂದ್ರ ಅವರು ಪತ್ನಿ ಬಾಲಿವುಡ್ ನಟಿ ಹೇಮಮಾಲಿಯವರನ್ನು ಅಗಲಿದ್ದಾರೆ. ಜೊತೆಗೆ ಮಕ್ಕಳಾದ ಸನ್ನಿಡಿಯೋಲ್, ಬಾಬ್ಬಿಡಿಯೋಲ್, ಇಷಾ ಡಿಯೋಲ್ ಅವರನ್ನು ಅಗಲಿದ್ದಾರೆ.

Sulekha