ಬಾಲಿವುಡ್ನ ದಂತಕತೆ ಧರ್ಮೇಂದ್ರ – ಚಿತ್ರರಂಗದಲ್ಲಿ 6 ದಶಕದ ಸೇವೆ.. ಹಿ ಮ್ಯಾನ್ ಸಿನಿ ಜರ್ನಿ ಹೇಗಿತ್ತು?

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (89) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಮುಂಬೈನ ನಿವಾಸದಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ವಂಶದ ಕುಡಿ! – ಅಶ್ವಿನಿ ಡಮ್ಮಿ, ಫೇಕ್ ಎಂದು ಅಬ್ಬರಿಸಿದ ಧ್ರುವಂತ್
ಹಿರಿಯ ನಟ ಧರ್ಮೇಂದ್ರ ಬಾಲಿವುಡ್ನಲ್ಲಿ ಹೀ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ರು. ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್ ಕ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್ಚಾರ್ಚ್ ಮಾಡಲಾಗಿತ್ತು. ಇದೀಗ ಹಿರಿಯ ನಟ ಮುಂಬೈನ ನಿವಾಸದಲ್ಲಿ ಮೃಪಟ್ಟಿದ್ದಾರೆ. ಧರ್ಮೇಂದ್ರ ಅವರ ಅಂತ್ಯಕ್ರಿಯೆಯನ್ನು ವಿಲೇ ಪಾರ್ಲೆಯ ಸ್ಮಶಾನದಲ್ಲಿ ನಡೆಸಲಾಗಿದೆ. ಅವರ ಹಿರಿಯ ಮಗ ಸನ್ನಿ ಡಿಯೋಲ್ ಅವರು ಅಂತ್ಯಕ್ರಿಯೆಯ ಚಿತೆಗೆ ಬೆಂಕಿ ಹಚ್ಚಿದ್ದಾರೆ.
ಪಂಜಾಬ್ನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಧರ್ಮೇಂದ್ರ ಅವರು ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಇತ್ತು. ಧರ್ಮೇಂದ್ರ ಅವರದ್ದು ಕೇವಲ್ ಕ್ರಿಶನ್ ಡಿಯೋಲ್ ಇವರ ಮೊದಲ ಹೆಸರಾಗಿದ್ದು ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಈ ಹೆಸರು ಧರ್ಮೇಂದ್ರ ಎಂದು ಫೇಮಸ್ ಆಗಿದೆ. 1960ರಿಂದಲೂ ಧರ್ಮೇಂದ್ರ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನು ಅಭಿಮಾನಿಗಳು ಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿ ಅನೇಕ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ʻಶೋಲೆʼ, ʻಚುಪ್ಕೆ ಚುಪ್ಕೆ, ʻಸೀತಾ ಔರ್ ಗೀತಾʼ ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಗೆ ಇವರದ್ದಾಗಿತ್ತು. ಹಿಂದಿ ಜತೆಗೆ ಪಂಜಾಬಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕೀಸ್’ ಚಿತ್ರದಲ್ಲಿ ಧರ್ಮೇಂದ್ರ ಅವರು ಕೊನೆಯದಾಗಿ ನಟಿಸಿದ್ದರು. ಇದು ಡಿಸೆಂಬರ್ 25ರಂದು ತೆರೆ ಕಾಣಬೇಕಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ನಟಿಸುತ್ತಿದ್ದಾರೆ. ‘ಇಕ್ಕೀಸ್’ ಚಿತ್ರದಲ್ಲಿ ಭಾರತದ ಅತಿ ಕಿರಿಯ ಪರಮ ವೀರ ಚಕ್ರ ಪ್ರಶಸ್ತಿ ವಿಜೇತ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಪಾತ್ರದಲ್ಲಿ ಅಗಸ್ತ್ಯ ನಂದ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅರುಣ್ ಅವರ ನಿಜ ಜೀವನದ ಕಥೆಯನ್ನು ಹೇಳಲಾಗುತ್ತಿದೆಯಂತೆ. 2023ರಲ್ಲಿ ತೆರೆಕಂಡ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ರಣವೀರ್ ಸಿಂಗ್, ಶಬಾನಾ ಅಜ್ಮಿ ಮತ್ತು ಆಲಿಯಾ ಭಟ್ ಅವರೊಂದಿಗೆ ಧರ್ಮೇಂದ್ರ ಅವರು ನಟಿಸಿದ್ದರು. 2024ರಲ್ಲಿ ‘ತೇರಿ ಬಾಟನ್ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಶಹೀದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ಧರ್ಮೇಂದ್ರ ಕಾಣಿಸಿಕೊಂಡಿದ್ದರು.
ನಟ ಧರ್ಮೇಂದ್ರ ಅವರ ಸಿನಿಮಾ ಸಾಧನೆಗೆ ಅನೇಕ ಪ್ರಶಸ್ತಿ ಲಭಿಸಿದೆ. ಆಯಿ ಮಿಲನ್ ಕಿಬೇಲಾ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮೇರಾ ಗಾಂವ್ ಮೇರಾ ದೇಶ್ ಸಿನಿಮಾಕ್ಕೆ ಅತ್ಯು ತ್ತಮ ನಟ ಪ್ರಶಸ್ತಿ, 1997ರಲ್ಲಿ ಜೀವ ಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಅನೇಕ ಪ್ರಶಸ್ತಿ ಸಿಕ್ಕಿದೆ. ಭಾರತ ಸರ್ಕಾರದಿಂದ 2012 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು.

ನೋಡಿರಿ

