ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ವಂಶದ ಕುಡಿ! – ಅಶ್ವಿನಿ ಡಮ್ಮಿ, ಫೇಕ್ ಎಂದು ಅಬ್ಬರಿಸಿದ ಧ್ರುವಂತ್

ಬಿಗ್ ಬಾಸ್ ಸೀಸನ್ 12 ಬರೀ ಜಗಳದಿಂದಲೇ ಸದ್ದು ಮಾಡ್ತಿದೆ. ಇಂದಿನ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಈ ವೇಳೆ ದೊಡ್ಮನೆಯ ಜಗಳ ಬೇರೆ ಲೆವೆಲ್ಗೆ ಹೋಗಿದೆ. ಇದೀಗ ಕ್ಲೋಸ್ ಫ್ರೆಂಡ್ಸ್ ಅಂದುಕೊಂಡವರೇ ಶತ್ರಗಳಾದ್ರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.
ಇದನ್ನೂ ಓದಿ: ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ – ಮುಹೂರ್ತದ ದಿನವೇ ನಿಂತ ಸ್ಮೃತಿ ಮಂಧಾನ ಮದುವೆ
ಈ ವಾರ ಬಿಗ್ ಬಾಸ್ ರಣರಂಗವಾಗಿದೆ. ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಅದರಲ್ಲೂ ಗಿಲ್ಲಿ ಅವರನ್ನೇ ರಕ್ಷಿತಾ ಅವರು ನಾಮಿನೇಟ್ ಮಾಡಿದ್ದಾರೆ. ಗ್ರೂಪಿಸಮ್ ಮಾಡ್ಕೊಂಡು ಇದ್ದ ಅಶ್ವಿನಿ, ಧ್ರುವಂತ್, ಜಾಹ್ನವಿ ಮಧ್ಯೆ ಬಿರುಕು ಮೂಡಿದೆ. ಅಶ್ವಿನಿ ಹಾಗೂ ಜಾಹ್ನವಿ ಮೇಲೆ ಕಿರುಚಾಡಿದ್ದಾರೆ ಧ್ರುವಂತ್.
ಸದಸ್ಯರ ಬಟ್ಟೆಯನ್ನು ಕಲ್ಲಿಗೆ ಹೊಡೆಯುತ್ತ, ಕೊಳೆಯನ್ನು ತೆಗೆಯುತ್ತ ನಾಮಿನೇಟ್ ಮಾಡಬೇಕು. ಅದರಲ್ಲಿ ಮೊದಲು ರಕ್ಷಿತಾ ಅವರು ಗಿಲ್ಲಿಯ ಹೆಸೆರನ್ನು ಹೇಳಿದ್ದಾರೆ. ಧ್ರುವಂತ್ ಕೂಡ ಅಶ್ವಿನಿ ಅವರ ಹೆಸರನ್ನು ಸೂಚಿಸಿ, ಫೇಕ್ ಮುಖವಾಡ ಹಾಕಿಕೊಂಡಿರೋದು ಅಶ್ವಿನಿ ಗೌಡ ಅವರು. ಈ ಮನೆಯನ್ನು ಜಾಹ್ನವಿ ಹಾಗೂ ಅಶ್ವಿನಿ ಅಷ್ಟು ಮಿಸ್ ಲೀಡ್ ಮಾಡಿರೋದು ಯಾರೂ ಇಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡ ಅಶ್ವಿನಿ, ಧ್ರುವಂತ್ ಅವರೇ ಫೇಕ್. ನನ್ನ ಜಾಹ್ನವಿ ಅವರನ್ನು ಅವರ ತೆಕ್ಕೆಗೆ ತೆಗೆದುಕೊಳ್ಳಲು ನೋಡಿದರು ಆದರೆ ಅದು ಆಗಿಲ್ಲ. ಮಲ್ಲಮ್ಮ ಥರ ಅಲ್ಲ ನಾವು ನಿಮ್ಮ ತೆಕ್ಕೆಗೆ ಬೀಳೋಕೆʼ ಎಂದು ಅಬ್ಬರಿಸಿದ್ದಾರೆ. ಫೇಕ್ ಅಲ್ಲಿ ಮಾತಾಡೋ ನಿಮಗೆ ಇಷ್ಟು ಇರಬೇಕಾದರೆ, ತಾಕತ್ ತೋರಿಸೋ ನನಗೆ ಎಷ್ಟು ಇರಬೇಡ ಎಂದು ಕೂಗಾಡಿದ್ದಾರೆ ಅಶ್ವಿನಿ.
ಅಶ್ವಿನಿ ಪ್ರತಿ ವಾರ ಒಂದಲ್ಲ ಒಂದು ತಪ್ಪು ಮಾಡಿ ಟೀಕೆಗೆ ಗುರಿಯಾಗುತ್ತಾರೆ. ಕಳೆದ ವಾರ ಅವರು ಸುದೀಪ್ ಕಡೆಯಿಂದ ಪಾಠ ಹೇಳಿಸಿಕೊಳ್ಳಬೇಕಾಯಿತು. ಈಗ ಈ ವಾರ ಮತ್ತೆ ರೋಷದೊಂದಿಗೆ ಆರಂಭಿಸಿದ್ದಾರೆ. ನಾಮಿನೇಟ್ ಮಾಡಿದ ಧ್ರುವಂತ್ ವಿರುದ್ಧ ಅಶ್ವಿನಿ ಸಿಟ್ಟಾಗಿದ್ದಾರೆ. ಇದೀಗ ಈ ಜಗಳ ಯಾವ ಹಂತಕ್ಕೆ ತಲುಪುತ್ತೆ ಎಂದು ಕಾದುನೋಡ್ಬೇಕು.

ನೋಡಿರಿ

