ಅಮೆರಿಕ ಕನಸಿಗೆ ಕತ್ತರಿ ಹಾಕುತ್ತಾ ಬೈಡನ್ ಸರ್ಕಾರ? – ಹೆಚ್ – 1 ಬಿ ವೀಸಾ ಶುಲ್ಕ ದಿಢೀರ್ ಏರಿಕೆ
ಅಮೆರಿಕ ಕನಸು ಕಾಣುವವರಿಗೆ ಬೈಡನ್ ಸರ್ಕಾರ ನಿರಾಶಾದಾಯಕ ಸುದ್ದಿ ನೀಡಿದೆ. ಭಾರತೀಯರಿಂದ ಅತಿ ಹೆಚ್ಚು ಬೇಡಿಕೆಯಿರುವಂತಹ ಹೆಚ್ -1 ಬಿ ವೀಸಾ ಸೇರಿದಂತೆ ಹಲವು ವೀಸಾಗಳಿಗೆ ವಿಧಿಸುವ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಬೈಡನ್ ಸರ್ಕಾರ ನಿರ್ಧರಿಸಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಪ್ರಕಟಿಸಿರುವ ಪ್ರಸ್ತಾವಿತ ನಿಯಮದ ಪ್ರಕಾರ, ಎಚ್-1ಬಿ ವೀಸಾ ಅರ್ಜಿಗೆ 460 ಡಾಲರ್ (37,933 ರೂ.) ಆಗಿರುವ ಶುಲ್ಕ, ಸದ್ಯದಲ್ಲೇ 780 ಡಾಲರ್ (64,322 ರೂ.)ಗೆ ಏರಿಕೆಯಾಗಲಿದೆ. ಅದೇ ರೀತಿ, ಎಲ್-1 ವೀಸಾ ಅರ್ಜಿಗೆ ಈಗಿರುವ 37,933 ರೂ.(460 ಡಾಲರ್)ನಿಂದ 1.14 ಲಕ್ಷ ರೂ. (1,385 ಡಾಲರ್)ಗೆ, ಒ-1 ವೀಸಾಗಳಿಗೆ 37,933 ರೂ.(460 ಡಾಲರ್)ನಿಂದ 87,000 ರೂ.(1,055 ಡಾಲರ್)ಗೆ ಶುಲ್ಕ ಹೆಚ್ಚಳವಾಗಲಿದೆ ಎಂದು ಬಿಡೆನ್ ಸರ್ಕಾರ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಮತ್ತೊಂದು ಸಂಘಟನೆ ಬ್ಯಾನ್ – ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದ್ದೇಕೆ?
ಅಮೆರಿಕದ ತಂತ್ರಜ್ಞಾನ ಕಂಪನಿಗಳು ಪ್ರತಿ ವರ್ಷ ಭಾರತ ಮತ್ತು ಚೀನದಿಂದ ಸಾವಿರಾರು ಉದ್ಯೋಗಿಗಳನ್ನು ಇದೇ ವೀಸಾ ಮೂಲಕ ನೇಮಕ ಮಾಡಿಕೊಳ್ಳುತ್ತವೆ. ಕೌಶಲ್ಯಯುತ ಹಾಗೂ ತಾಂತ್ರಿಕ ಪರಿಣತಿಯ ಕೆಲಸಗಳಿಗೆ ವಿದೇಶಿ ನೌಕರರನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಕಂಪನಿಗಳು ಎಚ್-1ಬಿ ವೀಸಾವನ್ನು ಬಳಸಿಕೊಳ್ಳುತ್ತವೆ.