ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ – ಮುಹೂರ್ತದ ದಿನವೇ ನಿಂತ ಸ್ಮೃತಿ ಮಂಧಾನ ಮದುವೆ

ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ – ಮುಹೂರ್ತದ ದಿನವೇ ನಿಂತ ಸ್ಮೃತಿ ಮಂಧಾನ ಮದುವೆ

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ಮದುವೆ ಮುಂದೂಡಿಕೆಯಾಗಿದೆ. ಭಾನುವಾರ (ನವೆಂಬರ್ 23) ಸ್ಮೃತಿ ಮದುವೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಮುಹೂರ್ತದ ಸಮಯ ಸಂಜೆ ಇತ್ತು. ಆದರೆ, ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತವಾಗಿದೆ. ಹೀಗಾಗಿ ಸ್ಟಾರ್ ಕ್ರಿಕೆಟರ್ ಸ್ಮೃತಿ ಮದುವೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ:SA ಅಗ್ನಿಪರೀಕ್ಷೆ ಗೆಲ್ತಾರಾ ಗಂಭೀರ್ – 2ನೇ ಟೆಸ್ಟ್ ಗೆಲ್ಲದಿದ್ರೆ ತಲೆದಂಡ ಫಿಕ್ಸ್?

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸ್ಟಾರ್ ಜೋಡಿಯಾದ ಸ್ಮೃತಿ ಮಂಧಾನಾ ಹಾಗೂ ಪಲಾಶ್ ಮುಚ್ಚಲ್  ಅದ್ಧೂರಿ ಮದುವೆಗೆ ವೇದಿಕೆ ಸಜ್ಜಾಗಿತ್ತು. ಸಾಂಗ್ಲಿಯ ಫಾರ್ಮ್ ಹೌಸ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮೂಹೂರ್ತ ಇಂದು ಸಂಜೆ 4:30ಕ್ಕೆ ನಿಗದಿ ಪಡಿಸಲಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆ ನಡುವೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದೆ. ಬೆಳಗ್ಗೆ ತಿಂಡಿ ತಿಂದ ಕೆಲವೇ ಸಮಯದಲ್ಲಿ ಶ್ರೀನಿವಾಸ್ ಅವರು ಅಸ್ವಸ್ಥಗೊಂಡರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸ್ ಮಂಧಾನ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ವೈದ್ಯರು ನಿಗಾ ವಹಿಸಿದ್ದಾರೆ. ಈ ಘಟನೆಯಿಂದಾಗಿ ಮದುವೆ ಮಂಟಪದಲ್ಲಿನ ಎಲ್ಲಾ ಕೆಲಸ ಕಾರ್ಯಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸ್ಮೃತಿ ಮಂಧಾನ ಕುಟುಂಬದಲ್ಲಿ ಆತಂಕ ಮನೆ ಮಾಡಿದ್ದು, ಸದ್ಯಕ್ಕೆ ಮದುವೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಕುಟುಂಬದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದಾಗ ವಿವಾಹವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಸ್ಮೃತಿ ಮಂಧಾನಾ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಮದುವೆ ಯಾವಾಗ ಎಂದು ಸದ್ಯದಲ್ಲೇ ತಿಳಿಸುತ್ತೇವೆ ಎಂದು ಸ್ಮೃತಿ ಹೇಳಿದ್ದಾರೆ.

Sulekha