SUPER OVER ಸೋತ ಭಾರತ – ಸೂರ್ಯವಂಶಿ ಬಿಟ್ಟು ಕೆಟ್ಟ ಜಿತೇಶ್
PAK ವಿರುದ್ಧವೂ ತೀರದ ಸೇಡು

ಕಾನ್ಫಿಡೆನ್ಸ್ ಇರ್ಬೇಕು ಬಟ್ ಓವರ್ ಕಾನ್ಫಿಡೆನ್ಸ್ ಇರ್ಬಾರ್ದು ಅನ್ನೋದು ಜಿತೇಶ್ ಶರ್ಮಾ ಡಿಸಿಷನ್ ನೋಡಿದ್ರೇನೆ ಗೊತ್ತಾಗುತ್ತೆ. ಈಸಿಯಾಗಿ ಗೆಲ್ಲೋ ಟೈಮಲ್ಲಿ ಜಿತೇಶ್ ಮಾಡಿದ ಎಡವಟ್ಟು ಪಂದ್ಯವನ್ನೇ ಸೋಲಿಸಿದೆ. ಅದ್ರ ಜೊತೆಗೆ ಟ್ರೋಫಿ ಹೊಸ್ತಿಲಲ್ಲಿ ಭಾರತ ಟೂರ್ನಿಯಿಂದಲೇ ಹೊರಬಿದ್ದಿದೆ. ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಜಿತೇಶ್ ಶರ್ಮಾರದ್ದೇ ಪೋಸ್ಟ್ಗಳು. ಯಾಕಂದ್ರೆ ಅವ್ರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಭಾರತ ದುಬಾರಿ ಬೆಲೆ ತೆತ್ತಿದೆ. ಲಾಸ್ಟ್ ಓವರ್ನಲ್ಲಿ ರಣರೋಚಕ ರೀತಿಯಲ್ಲಿ ಮ್ಯಾಚ್ ಡ್ರಾ ಮಾಡಿಕೊಂಡವ್ರು ಕೊನೆಗೆ ಸೂಪರ್ ಓವರ್ನಲ್ಲಿ ಎಡವಿದ್ದಾರೆ. ಹಾಗಂತ ಟಫ್ ಫೈಟ್ ಏನೂ ಇರ್ಲಿಲ್ಲ. ಬಟ್ ಕರೆಕ್ಟ್ ಡಿಸಿಷನ್ ತಗೊಳ್ಳುವಲ್ಲಿ ಫೇಲ್ಯೂರ್ ಆದ್ರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ದೋಚಿದ 7.11 ಕೋಟಿದ 5.77 ಕೋಟಿ ರೂ. ವಶ – ಖಾಕಿ ಭರ್ಜರಿ ಕಾರ್ಯಾಚರಣೆ
ಕೊನೇ ಓವರ್ ನಲ್ಲಿ ರೋಚಕ ರೀತಿಯಲ್ಲಿ ಟೈ ಮಾಡಿಕೊಂಡ ಭಾರತ!
ಏಷ್ಯಾಕಪ್ ರೈಸಿಂಗ್ ಸ್ಟಾರ್ ಸೆಮಿಫೈನಲ್ನಲ್ಲಿ ಭಾರತ ಎ ತಂಡ ಮತ್ತು ಬಾಂಗ್ಲಾದೇಶ ಎ ತಂಡಗಳು ಮುಖಾಮುಖಿ ಆಗಿದ್ವು. ಈ ಮ್ಯಾಚ್ ಸಿನಿಮಾ ಥ್ರಿಲ್ಲರ್ ಗೂ ಕಮ್ಮಿ ಇರ್ಲಿಲ್ಲ. ಇದ್ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಎ ತಂಡ 20 ಓವರ್ಗಳಲ್ಲಿ 194 ರನ್ಗಳಿಸಿತ್ತು. 195 ರನ್ಗಳ ಟಾರ್ಗೆಟ್ನೊಂದಿಗೆ ಚೇಸಿಂಗ್ಗೆ ಇಳಿದ ಟೀಮ್ ಇಂಡಿಯಾ ಮೊದಲ ವಿಕೆಟ್ಗೆ ಕೇವಲ 3.4 ಓವರ್ಗಳಲ್ಲಿ 53 ರನ್ಗಳಿಗೆ ಭರ್ಜರಿ ಆರಂಭ ಪಡೆದಿತ್ತು.. ಅತ್ಯುತ್ತಮ ಫಾರ್ಮ್ನಲ್ಲಿದ್ದ ವೈಭವ್ ಸೂರ್ಯವಂಶಿ 15 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 38 ರನ್ಗಳಿಸಿ ಔಟ್ ಆದರು. ಪ್ರಿಯಾಂಶ್ ಆರ್ಯ 44 ರನ್ಗಳಿಸಿ ಔಟ್ ಆದರು. ಜಿತೇಶ್ 33 ರನ್ ಗಳಿಸಿದ್ರು. ಹೀಗೆ ಲಾಸ್ಟ್ ಓವರ್ನಲ್ಲಿ ಭಾರತದ ಗೆಲುವಿಗೆ 15 ರನ್ಗಳು ಬೇಕಿತ್ತು. ಈ ಟೈಮಲ್ಲಿ ಅಶುತೋಷ್ ರಾಣಾ ಒಂದು ಬೌಂಡರಿ, ಸಿಕ್ಸರ್ ಸಹಿತ 12 ರನ್ಗಳಿಸಿ 5ನೇ ಎಸೆತದಲ್ಲಿ ಔಟಾದ್ರು. ಈ ಟೈಮಲ್ಲಿ ಭಾರತ ಗೆಲ್ಲೋಕೆ 4 ರನ್ಸ್ ಬೇಕಿತ್ತು. ಕೊನೇ ಎಸೆತದಲ್ಲಿ ಹರ್ಷ್ ದುಬೆ ಲಾಂಗ್ ಆನ್ನತ್ತ ಬಾರಿಸಿದ್ರು. 2 ರನ್ಸ್ ಓಡಿದ್ರು. ಌಂಡ್ ಈ ಟೈಮಲ್ಲಿ ಬಾಂಗ್ಲಾ ವಿಕೆಟ್ ಕೀಪರ್ ಸ್ಟಂಪ್ ಮಿಸ್ ಮಾಡಿದ್ರು. ಹೀಗಾಗಿ ದುಬೆ ಹಾಗೂ ನೆಹಾಲ್ ಮತ್ತೆ ಒಂದು ರನ್ ಓಡಿ 3 ರನ್ ಮೂಲಕ ಪಂದ್ಯ ಟೈ ಮಾಡಿದ್ರು. ಸೋತೇ ಬಿಡ್ತೀವಿ ಅನ್ಕೊಂಡಿದ್ದ ಪಂದ್ಯವನ್ನ ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾದ್ರು.
ಸೂಪರ್ ಓವರ್ ನಲ್ಲಿ ಒಂದೂ ರನ್ ಗಳಿಸದೆ ಆಲೌಟ್!
ಹೀಗೆ ಪಂದ್ಯ ಟೈ ಆದಾಗ ಭಾರತ ಬ್ಯಾಟಿಂಗ್ಗೆ ಬರುತ್ತೆ. ಬಟ್ ಇಲ್ಲಿ ಭಾರತ ತಂಡದ ನಾಯಕ ಜಿತೇಶ್ ಶರ್ಮಾ ದೊಡ್ಡ ಬ್ಲಂಡರ್ನೇ ಮಾಡಿದ್ರು. ಪವರ್ ಹಿಟ್ಟರ್ ಬ್ಯಾಟರ್ಗಳಾದ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯರನ್ನ ಬಿಟ್ಟು ಬ್ಯಾಟಿಂಗ್ಗೆ ಬಂದ ಜಿತೇಶ್ ಶರ್ಮಾ ಫಸ್ಟ್ ಬಾಲಲ್ಲೇ ಬೌಲ್ಡ್ ಆದ್ರು. ಌಂಡ್ 2ನೇ ಎಸೆತದಲ್ಲಿ ಅಶುತೋಷ್ ಶರ್ಮಾ ದೊಡ್ಡ ಶಾಟ್ ಮಾಡುವ ಯತ್ನದಲ್ಲಿ ಕ್ಯಾಚ್ ಔಟ್ ಆದ್ರು. ಸೋ ಅಲ್ಲಿಗೆ ಭಾರತ ಸೂಪರ್ ಓವರ್ನಲ್ಲಿ ಒಂದೂ ರನ್ಸ್ ಬರದೆ ಎರಡೂ ವಿಕೆಟ್ ಕಳ್ಕೊಳ್ತು. ಬಾಂಗ್ಲಾದೇಶಕ್ಕೆ ಗೆಲ್ಲೋಕೆ 1 ರನ್ ಅಷ್ಟೇ ಬೇಕಿತ್ತು. ಭಾರತದ ಪರ ಸುಯಾಶ್ ಶರ್ಮಾ ಮೊದಲ ಎಸೆತದಲ್ಲಿ ಯಾಸಿರ್ ಅಲಿಯನ್ನ ಎಲ್ಬಿ ಬಲೆಗೆ ಬೀಳಿಸಿದರು. ಆದರೆ 2ನೇ ಎಸೆತದಲ್ಲಿ ವೈಡ್ ಎಸೆದಿದ್ದರಿಂದ ಬಾಂಗ್ಲಾದೇಶ ಯಾವುದೇ ಶ್ರಮವಿಲ್ಲದೆ ಗೆದ್ದು ಬೀಗಿತು. ನವೆಂಬರ್ 23 ರಂದು ನಡೆಯುವ ಫೈನಲ್ಗೆ ಕಾಲಿಟ್ಟಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಬಹುಶಃ ಭಾರತ ಈ ಮ್ಯಾಚ್ ಗೆದ್ದಿದ್ರೆ ಪಾಕಿಸ್ತಾನ ವಿರುದ್ಧ ಸೇಡು ತೀರಿಸಿಕೊಳ್ಳೋ ಅವಕಾಶ ಸಿಗ್ತಿತ್ತು. ಯಾಕಂದ್ರೆ ಇದೇ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯದ ವೇಳೆ ಪಾಕಿಸ್ತಾನ ವಿರುದ್ಧ ಭಾರತ 8 ವಿಕೆಟ್ಗಳಿಂದ ಸೋಲು ಕಂಡಿತ್ತು.
ಸೂರ್ಯವಂಶಿಯನ್ನ ಕಡೆಗಣಿಸಿದ ಜಿತೇಶ್ ವಿರುದ್ಧ ಆಕ್ರೋಶ!
ಌಕ್ಚುಲಿ ಮ್ಯಾಚ್ ಟೈ ಆದಾಗ ಸೂಪರ್ ಓವರ್ ಅಂತಾ ಬಂದಾಗ ಅದ್ರಲ್ಲೂ ಭಾರತವೇ ಫಸ್ಟ್ ಬ್ಯಾಟಿಂಗ್ ಮಾಡ್ತಿದ್ದಾಗ ಪವರ್ ಹಿಟ್ಟರ್ ಬ್ಯಾಟರ್ಗಳನ್ನೇ ಕಳಿಸ್ಬೇಕಿತ್ತು. ಜೊತೆಗೆ ಇದೇ ಪಂದ್ಯದಲ್ಲಿ ಭಾರತದ ಪರ ಹೈಯೆಸ್ಟ್ ರನ್ಸ್ ಕಲೆ ಹಾಕಿದ್ದ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾನ್ಶ್ ಆರ್ಯಗೆ ಚಾನ್ಸ್ ಕೊಡ್ಬೇಕಿತ್ತು. ಆದ್ರೆ ಜಿತೇಶ್ ಇಲ್ಲೇ ಎವವಟ್ಟು ಮಾಡಿಕೊಂಡಿದ್ದು. ತಾನೇ ಮ್ಯಾಚ್ ಗೆಲ್ಲಿಸ್ತೇನೇ ಅನ್ನೋ ಓವರ್ ಕಾನ್ಫಿಡೆನ್ಸ್ನಲ್ಲಿ ಬಂದು ಫಸ್ಟ್ ಬ್ಯಾಲಲ್ಲೇ ಔಟ್ ಆದ್ರು. ಹಾಗೇ ಅಶುತೋಶ್ ಶರ್ಮಾ ಕೂಡ ಜವಾಬ್ದಾರಿಯುತವಾಗಿ ಆಡ್ಲಿಲ್ಲ. ಜಿತೇಶ್ ಶರ್ಮಾರ ಇದೇ ನಿರ್ಧಾರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಆಟಗಾರ ದೊಡ್ಡ ಗಣೇಶ್ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ವೈಭವ್ ಸೂರ್ಯವಂಶಿಯನ್ನ ಯಾಕೆ ಬ್ಯಾಟಿಂಗ್ಗೆ ಕಳಿಸ್ಲಿಲ್ಲ ಅಂತಾ ಕ್ಯಾಪ್ಟನ್ ಜಿತೇಶ್ ಶರ್ಮಾರನ್ನ ಪ್ರಶ್ನೆ ಮಾಡ್ತಿದ್ದಾರೆ. ಕೈಯಲ್ಲೇ ಇದ್ದ ಪಂದ್ಯವನ್ನ ಜಿತೇಶ್ ಕಳ್ಕೊಳ್ಳೋದ್ರ ಜೊತೆಗೆ ತಂಡವನ್ನೂ ರೈಸಿಂಗ್ ಏಷ್ಯಾಕಪ್ ಸ್ಟಾರ್ನಿಂದ ಹೊರ ತಂದಿದ್ದಾರೆ. ಬಹುಶಃ ಈ ಪಂದ್ಯದ ಸೂಪರ್ ಓವರ್ನಲ್ಲಿ ವೈಭವ್ ಮತ್ತು ಪ್ರಿಯಾನ್ಶ್ ಆಡಿದ್ರೆ ಭಾರತ ಗೆಲ್ಲೋ ಚಾನ್ಸಸ್ ಜಾಸ್ತಿ ಇತ್ತು.

ನೋಡಿರಿ

