ಕಾವ್ಯ ಮಾರನ್‌ಗೆ ಕಂಕಣ ಭಾಗ್ಯ? – ರಜನಿಕಾಂತ್ ಅಳಿಯನ ಜೊತೆ ಮದ್ವೆ?
IPL ಮುಗಿದ್ಮೇಲೆ SRH ಒಡತಿ ಕಲ್ಯಾಣ?

ಐಪಿಎಲ್ ಅಂದ್ರೆ ಸಾಕು, ಆಟಗಾರರ ಜೊತೆಗೆ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಹೆಸ್ರು ಸೌಂಡ್ ಮಾಡೋದು ನಿಮ್ಗೆಲ್ಲಾ ಗೊತ್ತೇ ಇದೆ. ಎಲ್ಲಾ ಸೀಸನ್‌ಗಳಲ್ಲೂ ಕಾವ್ಯ ಮಾರನ್ ಮೈನ್ ಅಟ್ರಾಕ್ಷನ್ ಅಂದ್ರೆ ತಪ್ಪಾಗಲ್ಲ. ಮೈದಾನದಲ್ಲಿ ಕಾವ್ಯ ನಗು, ಕೋಪ, ಹುಸಿ ಮುನಿಸು ಜೊತೆಗೊಂದಿಷ್ಟು ಕಣ್ಣೀರು ಎಲ್ಲವೂ ಹೈಲೆಟ್ ಆಗಿರುತ್ತೆ. ಈಕೆ ಬ್ಯೂಟಿಗೆ ಅದೆಷ್ಟೋ ಯುವಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಆದ್ರೀಗ ಕಾವ್ಯ ಮಾರನ್ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಾವ್ಯಗೆ ಕಂಕಣ ಭಾಗ್ಯ ಕೂಡಿಬಂತಾ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್ ನ ಕಾಡಿದೆ. ಇದೀಗ ಕಾವ್ಯ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಸೋದರಳಿಯನ ಹೆಸ್ರು ತಳುಕುಹಾಕಿಕೊಂಡಿದೆ.
ಇದನ್ನೂ ಓದಿ: ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ
ಕಾವ್ಯ ಮಾರನ್ ಸದಾ ಸುದ್ದಿಯಲ್ಲಿರೋ ಬೆಡಗಿ.. ಒಂದ್ಕಡೆ ತಂಡದ ವಿಚಾರವಾಗಿ ಸುದ್ದಿಯಲ್ಲಿದ್ರೆ, ಮತ್ತೊಂದು ಕಡೆ ಕಾವ್ಯ ಪರ್ಸನಲ್ ಲೈಫ್ ಕೂಡ ಚರ್ಚೆ ಆಗ್ತಾನೆ ಇರುತ್ತೆ. ಕಾವ್ಯ ಆಸ್ತಿ ವಿಚಾರ, ಮದುವೆ ವಿಚಾರ, ಡೇಟಿಂಗ್ ಬಗ್ಗೆ ಗಾಸಿಪ್ ಹರಿದಾಡ್ತಿರುತ್ತೆ.. ಇದೀಗ ಮತ್ತೆ ಅಂತಹದ್ದೇ ಒಂದು ವಿಚಾರ ಮುನ್ನೆಲೆಗೆ ಬಂದಿದೆ. ಕಾವ್ಯ ಮಾರನ್ ಪ್ರೀತಿಯಲ್ಲಿ ಬಿದ್ದಾರಂತೆ. ಸೂಪರ್ ಸ್ಟಾರ್ ರಜನೀಕಾಂತ್ ಅವರ ಸೋದರಳಿಯ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಡೇಟಿಂಗ್ ನಡೆಸ್ತಾ ಇದ್ದಾರೆ. ಶ್ರೀಘ್ರದಲ್ಲೇ ಮದ್ವೆ ಕೂಡ ಆಗಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ.
ಕಾವ್ಯ ಮಾರನ್ ಹಾಗೂ ಅನಿರುದ್ಧ್ ಕಳೆದ ಕೆಲವು ತಿಂಗಳಿನಿಂದ ಡೇಟಿಂಗ್ ನಡೆಸ್ತಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಆಗಾಗ ಜೊತೆಗೆ ಸುತ್ತಾಡ್ತಾರೆ. ಇದೇ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರು ಮದುವೆ ಆಗ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಅನಿರುದ್ಧ್ ಟ್ವೀಟ್ ಮಾಡಿ ಹರಿದಾಡ್ತಿರೋ ಸುದ್ದಿ ಸುಳ್ಳು ಅಂತ ಹೇಳಿದ್ರು. ಆದ್ರೀಗ ಕಾವ್ಯ ಹಾಗೂ ಅನಿರುದ್ಧ್ ವಿದೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನ್ಯೂಯಾರ್ಕ್ನಲ್ಲಿ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಒಟ್ಟಿಗೆ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅನಿರುದ್ಧ್ ಬಿಳಿ ಪಫರ್ ಜಾಕೆಟ್ ಹೊಂದಿರುವ ತಿಳಿ ಬೂದು ಬಣ್ಣದ ಸ್ವೆಟ್‌ಶರ್ಟ್‌ನಲ್ಲಿ ಕ್ಯಾಶುಯಲ್ ಆಗಿ ಕಾಣಿಸಿಕೊಂಡಿದ್ರೆ, ಕಾವ್ಯಾ ಪಫರ್ ಜಾಕೆಟ್ ಧರಿಸಿದ್ದಾರೆ. ಇದೀಗ ವಿಡಿಯೋ, ಫೋಟೋ ವೈರಲ್ ಆಗ್ತಿದ್ದಂತೆ, ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರೋದು ನಿಜ. ಶೀಘ್ರದಲ್ಲೇ ಮದ್ವೆ ಆಗ್ತಾರೆ ಅಂತಾ ಹೇಳಲಾಗ್ತಿದೆ.
ಅಂದ್ಹಾಗೆ ಅನಿರುದ್ಧ್ ರವಿಚಂದರ್ ಹುಟ್ಟಿ, ಬೆಳೆದಿದ್ದೆಲ್ಲಾ ಚೆನ್ನೈನಲ್ಲೇ. ರವಿಚಂದರ್ ಚಿಕ್ಕಂದಿನಿಂದಲೂ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ರಜನಿಕಾಂತ್ ಪತ್ನಿ ಲತಾ ಅವರ ಸೋದರ ಸಂಬಂಧಿ ಈತ. ಹಾಗಾಗಿ ಚಿತ್ರರಂಗಕ್ಕೆ ಬರೋದು ಕಷ್ಟವಾಗಲಿಲ್ಲ. ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಧನುಷ್ ನಟಿಸಿದ ‘3’ ಚಿತ್ರಕ್ಕೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದ್ರು. ಆ ಚಿತ್ರದ ‘ಕೊಲವೆರಿ ಡಿ’ ಸಾಂಗ್ ವಿಶ್ವದಾದ್ಯಂತ ಸದ್ದು ಮಾಡಿತ್ತು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಿಗೆ ಅನಿರುದ್ಧ್ ಮ್ಯೂಸಿಕ್ ಕಂಪೋಸ್ ಮಾಡಿದರು. ನೋಡ ನೋಡುತ್ತಲೇ ಸೌತ್ ಸಿನಿದುನಿಯಾದ ಟಾಪ್ ಮ್ಯೂಸಿಕ್ ಡೈರೆಕ್ಟರ್ ಪಟ್ಟಕ್ಕೇರಿದರು. ತಮ್ಮ ಸೂಪರ್ ಹಿಟ್ ಸಂಗೀತದಿಂದ ಸೌತ್ ಸಿನಿದುನಿಯಾದಲ್ಲಿ ರಾಕ್‌ಸ್ಟರ್ ಅಂತ್ಲೇ ಅನಿರುದ್ಧ್ ಜನಪ್ರಿಯರಾಗಿದ್ದಾರೆ. ಸದ್ಯ ಜೈಲರ್ 2, ಶಾರುಖ್ ಖಾನ್ ನಟನೆಯ ಕಿಂಗ್, ಲವ್ ಇನ್ಶುರೆನ್ಸ್ ಕಂಪೆನಿ, ವಿಜಯ್ ನಟನೆಯ ಸಿನಿಮಾ ಜನ ನಾಯಗನ್, ತೆಲುಗಿನ ದಿ ಪ್ಯಾರಡೈಸ್, ಮ್ಯಾಜಿಕ್, ಡಿಸಿ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಇನ್ನು ಸೆಲೆಬ್ರಿಟಿಗಳು ಅಂದ್ಮೇಲೆ ಒಬ್ಬೊಬ್ಬರ ಜೊತೆ ಹೆಸ್ರು ತಳುಕು ಹಾಕಿಕೊಳ್ಳೋದು ಕಾಮನ್ ಅಲ್ವಾ? ಈ ಹಿಂದೆ ಕಾವ್ಯ ಮಾರನ್ ಹೆಸ್ರು, ಟೀಮ್ ಇಂಡಿಯಾ ಆಟಗಾರರಾಗ ರಿಷಬ್ ಪಂತ್ ಹಾಗೂ ಅಭಿಷೇಕ್ ಶರ್ಮಾ ಜೊತೆಗೆ ತಳುಕು ಹಾಕಿಕೊಂಡಿತ್ತು. ಇನ್ನು ಅನಿರುದ್ಧ್ ಕೂಡ ಫೇಮಸ್ ಆಗ್ತಿದ್ದಂತೆ ಕೀರ್ತಿ ಸುರೇಶ್ ಸೇರಿ ಕೆಲ ನಟಿಯರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಸದ್ಯದಲ್ಲೇ ಮದುವೆ ಆಗ್ತಿದ್ದಾರೆ ಎನ್ನಲಾಗ್ತಿದೆ. ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರೋದು ಹರಿದಾಡ್ತಿರೋ ಗಾಳಿ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಸೋ ಸದ್ಯದಲ್ಲೇ ಇವರಿಬ್ಬರು ಮದುವೆ ಬಗ್ಗೆ ಅಪ್‌ಡೇಟ್ ಕೊಡ್ತಾರಾ ಅಂತ ಕಾದು ನೋಡ್ಬೇಕು.

ನೋಡಿರಿ

