ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಹಳದಿ ಮಾರ್ಗಕ್ಕೆ ಮತ್ತೊಂದು ರೈಲು!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಹಳದಿ ಮಾರ್ಗಕ್ಕೆ ಮತ್ತೊಂದು ರೈಲು!

ನಮ್ಮ ಮೆಟ್ರೋ ಬೆಂಗಳೂರು ನಗರದ ಜೀವನಾಡಿಯಾಗಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ಇದೀಗ ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್‌ವೊಂದಿದೆ. ಇದೀಗ ಹಳದಿ ಮಾರ್ಗಕ್ಕೆ ಮತ್ತೊಂದು ರೈಲು ಬರುತ್ತಿದ್ದು, ಇದ್ರಿಂದಾಗಿ 10 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿದೆ.

ಇದನ್ನೂ ಓದಿ:ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ

ಯೆಲ್ಲೋ ಲೈನ್ ಮೆಟ್ರೋ ಮಾರ್ಗಕ್ಕೆ ಆರನೇ ರೈಲು ಬರ್ತಿದೆ. ಈ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ರೈಲು ಬರುತ್ತಿದ್ದು, ಇದರಿಂದ 10 ನಿಮಿಷಕ್ಕೊಂದರಂತೆ ರೈಲುಗಳು ಸಂಚಾರ ಮಾಡಲಿದೆ ಎಂದು ಬಿಎಂಆರ್​ಸಿಎಲ್​ ಮಾಹಿತಿ ನೀಡಿದೆ.

ಸದ್ಯ ಯೆಲ್ಲೋ ಲೈನ್​​ನಲ್ಲಿ ಸಂಚಾರ ಮಾಡಲು ಐದು ರೈಲುಗಳು ಮಾತ್ರ ಇವೆ. ಪೀಕ್ ಅವರ್​ನಲ್ಲಿ 15 ನಿಮಿಷಕ್ಕೊಂದರಂತೆ, ನಾನ್ ಪಿಕ್ ಅವರ್​ನಲ್ಲಿ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದು, 6ನೇ ರೈಲು ನಮ್ಮ ಮೆಟ್ರೋಗೆ ಬರ್ತಿದ್ದು, ಈ ಹಿನ್ನೆಲೆ ಪಿಕ್ ಅವರ್​ನಲ್ಲಿ 15 ದಿಂದ 10 ನಿಮಿಷಕ್ಕೊಂದರಂತೆ ನಾನ್ ಪಿಕ್ ಅವರ್​ನಲ್ಲಿ 19ರಿಂದ 15 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಆರ್.ವಿ ರೋಡ್ ಬೊಮ್ಮಸಂದ್ರ ಯೆಲ್ಲೋ ಲೈನಲ್ಲಿ ಸಂಚಾರ ಮಾಡಲು ಆರನೇ ರೈಲು ಕಲ್ಕತ್ತಾದ ಟಿಟಾಘರ್​​ನಿಂದ ಹೊರಟ್ಟಿದ್ದು, ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ರೈಲು ಬೆಂಗಳೂರಿಗೆ ಬರಲಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಸಹಾಯವಾಗಲಿದೆ.

ರಾತ್ರಿ ವೇಳೆ ಸಿಗ್ನಲಿಂಗ್, ಸುರಕ್ಷತೆ ಸೇರಿದಂತೆ ಇತರ ಪರೀಕ್ಷೆಗಳನ್ನು ಸಿಎಂಆರ್‌ಎಸ್ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳು ನಡೆಸಲಿದ್ದು, ಆ ಬಳಿಕ ರೈಲು ಸಂಚಾರ ಆರಂಭಿಸಲಿದೆ ಎಂದು ಬಿಎಂಆರ್​ಸಿಎಲ್​ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ.

ಇನ್ನು ಹೊಸ ಮೆಟ್ರೋ ಬೋಗಿಗಳು ಒಂದು ವಾರದೊಳಗೆ ಅಥವಾ ಹತ್ತು ದಿನಗಳಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ಸೇರಲಿದ್ದು, ಈ ರೈಲುಗಳು ಸೇವೆ ಆರಂಭಿಸಿದಲ್ಲಿ ಕಾಯುವಿಕೆ ಮತ್ತಷ್ಟು ಇಳಿಕೆಯಾಗುತ್ತದೆ. ಆರನೇ ರೈಲಿನ ಕಾರ್ಯಾಚರಣೆಯಿಂದ ರೈಲು ಸಂಚಾರ ಸಮಯ ಇಳಿಕೆ ಆಗಲಿದ್ದು, ಡಿಸೆಂಬರ್ ಮತ್ತು ಜನವರಿ ಆರಂಭದಲ್ಲಿ ಇನ್ನೆರಡು ಹೊಸ ರೈಲುಗಳು ಟಿಟಾಘರ್‌ನಿಂದ ಬೆಂಗಳೂರಿಗೆ ಬರಲಿದ್ದು,  2026ರ ಆರಂಭದಲ್ಲಿ ಗ್ರೀನ್, ಪರ್ಪಲ್ ಮೆಟ್ರೋ ಮಾರ್ಗಗಳಂತೆ ಹಳದಿ ಮಾರ್ಗದಲ್ಲೂ ಪ್ರತಿ 5 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ.

ಈ ಕುರಿತಾಗಿ ಮೆಟ್ರೋ ಪ್ರಯಾಣಿಕರಾದ ಮಂಜುನಾಥ್ ಎಂಬುವವರು ಮಾತನಾಡಿದ್ದು, ಆರನೇ ರೈಲು ಬರುವುದರಿಂದ ನಮಗೆ ತುಂಬಾ ಸಹಾಯ ಆಗುತ್ತದೆ. ವಾಹನದಲ್ಲಿ ಆರ್.ವಿ ರೋಡ್ ಟು ಬೊಮ್ಮಸಂದ್ರ ಹೋಗಬೇಕು ಅಂದರೆ ಸುಮಾರು ಎರಡೂವರೆ ಗಂಟೆ ಬೇಕಾಗುತ್ತದೆ. ಮೆಟ್ರೋದಲ್ಲಿ ಕೇವಲ ಅರ್ಧಗಂಟೆ ಸಾಕು. ಇದರಿಂದ ನಮಗೆ ತುಂಬಾ ಸಂತೋಷ ಆಗುತ್ತದೆ ಎಂದಿದ್ದಾರೆ.

Shwetha M