ಅಯ್ಯಪ್ಪ ಭಕ್ತರೇ ಗಮನಿಸಿ – ಸ್ಪಾಟ್ ಬುಕ್ಕಿಂಗ್ ರೂಲ್ಸ್ ಚೇಂಜ್!
ಕರ್ನಾಟಕಕ್ಕೆ ಯಾಕೆ ಈ ರೂಲ್ಸ್?

ಅಯ್ಯಪ್ಪ ಭಕ್ತರೇ ಗಮನಿಸಿ –   ಸ್ಪಾಟ್ ಬುಕ್ಕಿಂಗ್ ರೂಲ್ಸ್ ಚೇಂಜ್!ಕರ್ನಾಟಕಕ್ಕೆ ಯಾಕೆ ಈ ರೂಲ್ಸ್?

ಸ್ವಾಮಿಯೇ ಶರಣಂ ಅಯ್ಯಪ್ಪ.. ಕೇರಳದ ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಇದೇ 17 ರಿಂದ ಮಂಡಲ ಪೂಜೆ ಆರಂಭ ಆಗಿದೆ. ಆದ್ರೆ ದೇವಸ್ಥಾನ ಓಪನ್ ಆದ 3-4 ದಿನ ಸಾಕಷ್ಟು ಭಕ್ತರು ಹೋಗಿ ದೊಡ್ಡ ಮಟ್ಟದಲ್ಲಿ ರಷ್ ಆಗಿತ್ತು. ಅಯ್ಯಪ್ಪ ಸನ್ನಿಧಿಯಲ್ಲಿ ಭಕ್ತರಿಗೆ ಕುರುವುದ್ದಕ್ಕೆ ಇರಲಿ ನಿಲ್ಲೋದ್ದಕ್ಕೆ ಜಾಗ ಕೂಡ ಇರಲಿಲ್ಲ. ನೂಕುನುಗ್ಗಲಾಗಿ ಭಕ್ತರು ಕ್ಯೂನಲ್ಲಿ 10 ಗಂಟೆಗೂ ಹೆಚ್ಚು ಕಾಲ ನಿಲ್ಲಬೇಕಾದ ಸ್ಥಿತಿ ನಿರ್ಮಾಣ ಆಗಿತ್ತು. ಹಾಗೇ ಒಬ್ಬರು ಭಕ್ತೆ ಕೂಡ ಸಾವನ್ನಪ್ಪಿದ್ರು, ಮಕ್ಕಳಿಗೆ ಉಸಿರಾಟದ ಸಮಸ್ಯೆ ಕೂಡ ಆಗಿತ್ತು. ವಾಹನಗಳನ್ನ ನಿಲ್ಲಿಸೋಕೆ ಕೂಡ ಜಾಗ ಇರಲಿಲ್ಲ. ಆದ್ರೆ ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದ್ರೂ ನಮ್ಮ ಕರ್ನಾಟಕದ ಶಬರಿಮಲೆ ಯಾತ್ರಿಕರು ಮುಂಜಾಗ್ರತೆ ತೆಗೆದುಕೊಂಡೇ ಹೋಗಬೇಕು. ನಮ್ಮ ರಾಜ್ಯದ ಸ್ವಾಮಿಗಳು ಏನೆಲ್ಲಾ ರೂಲ್ಸ್‌ಗಳನ್ನ ಫಾಲೋ ಮಾಡಬೇಕು ಅನ್ನೋದ್ದನ್ನ  ನೋಡೋಣ.

ಶಬರಿಮಲೆ ದೇವಸ್ಥಾನವು ಭಾರತದ ಕೇರಳದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಹಿಂದೂ ದೇವಾಲಯವಾಗಿದೆ. ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಇದು ದೇಶದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಶಬರಿಮಲೆ ಬೆಟ್ಟದ ಮೇಲೆ  3,000 ಅಡಿ ಎತ್ತರದಲ್ಲಿದೆ. ಮಂಡಲಂ-ಮಕರವಿಳಕ್ಕು ಉತ್ಸವ ಎಂದು ಕರೆಯಲ್ಪಡುವ ವಾರ್ಷಿಕ ತೀರ್ಥಯಾತ್ರೆಯ ಋತುವು ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ಈ ತಿಂಗಳ17 ರಿಂದ ಆರಂಭ ಆಗಿದೆ. ಆದ್ರೆ ಆರಂಭದಲ್ಲೇ ಶಬರಿಮಲೆ ದೇವಸ್ಥಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಭಕ್ತರು ಪರದಾಡಿದ್ರು. ಹೀಗಾಗಿ ನಾನು ಇವತ್ತು ನಮ್ಮ ಕರ್ನಾಟಕದ ಭಕ್ತರು ದೇವಸ್ಥಾನಕ್ಕೆ ಹೋಗುವ ಮುಂಚೆ ಏನೆಲ್ಲಾ ಮಾಡಬೇಕು ಅನ್ನೋದ್ದನ್ನ ತಿಳಿಸಿಕೊಡುತ್ತೇನೆ..

ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ 20 ಸಾವಿರ ಜನಕ್ಕೆ ಇತ್ತು. ಆದ್ರೆ ಜನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದ್ರ ಸಂಖ್ಯೆಯನ್ನ ತಾತ್ಕಾಲಿಕವಾಗಿ ಇಳಿಸಲಾಗಿದ್ದು 5 ಸಾವಿರ ಜನಕ್ಕೆ ಮಾತ್ರ ಒಂದು ದಿನಕ್ಕೆ ಸ್ಫಾಟ್  ಬುಕ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನಮ್ಮ ರಾಜ್ಯದ ಭಕ್ತರು ಅಲ್ಲಿಗೆ ಹೋಗಿ ಸ್ಪಾಟ್ ಬುಕ್ಕಿಂಗ್ ಮಾಡೋಣ ಅಂತ ಹೋಗಬೇಡಿ.. ಯಾಕಂದ್ರೆ ದಿನಕ್ಕೆ 5 ಸಾವಿರ ಜನಕ್ಕೆ ಮಾತ್ರ ಕೊಡುವುದರಿಂದ ನೀವು 2-3 ದಿನಗಳ ಕಾಲ ಕಾಯಬೇಕು.. ಹೀಗಾಗಿ ನೀವು ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡೇ ಶಬರಿಮಲೆ ದೇವಸ್ಥಾನಕ್ಕೆ ತೆರಳಿ. ಆನ್‌ಲೈನ್ ಬುಕ್ಕಿಂಗ್‌ ಅಥವಾ ವರ್ಚುವಲ್ ಬುಕ್ಕಿಂಗ್‌ನಲ್ಲಿ ದಿನಕ್ಕೆ 70 ಸಾವಿರ ಜನಕ್ಕೆ ಅವಕಾಶ ಇದೆ.. ಹೀಗಾಗಿ ನೀವು ಇರಿಮುಡಿ ಕಟ್ಟಿ ಯಾವಾಗ ಹೋಗಬೇಕು ಅನ್ನೋದ್ದನ್ನ ಮೊದ್ಲೇ ಪ್ಲ್ಯಾನ್ ಮಾಡಿ ಸ್ಪಾಟ್ ಬುಕ್ಕಿಂಗ್ ಮಾಡಿ.. ನೀವು ನಾಳೆ ಇರಿಮುಡಿ ಕಟ್ಟಿ ಇಲ್ಲಿಂದ ಹೊರಡುತ್ತೇನೆ ಅಂದಾಗ ಇವತ್ತು ಬುಕ್ ಮಾಡೋಕೆ ಹೋಗಬೇಡಿ.. 15 ದಿನಗಳ ಹಿಂದೆಯೇ ಬುಕ್ ಮಾಡಿ.. ಹಾಗೇ ಇಲ್ಲಿಂದ ನಿಮ್ಮ ಊರಿನಿಂದ ಶಬರಿಮಲೆಗೆ ಹೋಗೋಕೆ ಎಷ್ಟು ಟೈಂ ಹಿಡಿಯುತ್ತೆ ಅನ್ನೋದ್ದನ್ನ ಲೆಕ್ಕಚಾರ ಹಾಕಿ ಹೋಗಿ.. ಈ ವರ್ಚುವಲ್ ಬುಕ್ಕಿಂಗ್ ಮಾಡೋದು ಹೇಗೆ ಅನ್ನೋದ್ದನ್ನ ನೋಡೋಣ ಬನ್ನಿ.

 ವರ್ಚುವಲ್ ಕ್ಯೂ ಪಾಸ್ ಬುಕ್ ಮಾಡುವುದು ಹೇಗೆ?

 ನೀವು ಮೊದ್ಲು TDB ವೆಬ್‌ಸೈಟ್‌ಗೆ ಹೋಗಿ.  ನಿಮ್ಮ ಫೋನ್ ಸಂಖ್ಯೆ ಮತ್ತು ಇ-ಮೇಲ್ ಬಳಸಿ ಲಾಗ್ ಇನ್ ಮಾಡಿ. ಒಂದು ವೇಳೆ ನೀವು ಮೊದಲ ಬಾರಿಗೆ ನೋಂದಾಯಿಸುತ್ತಿದ್ದರೆ, ನೀವು ಹೊಸ ಬಳಕೆದಾರ ಐಡಿಯನ್ನು ರಚಿಸಬೇಕಾಗುತ್ತದೆ. ದೃಢೀಕರಣಕ್ಕಾಗಿ OTP ಕಳುಹಿಸಲಾಗುತ್ತದೆ. ನಿಮ್ಮ ಫೋಟ್ ಅಪ್‌ಲೋಡ್ ಮಾಡಿ..  ನಿಮ್ಮ ಐಡಿ ಪ್ರೂಫ್ ವಿವರಗಳೊಂದಿಗೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ.  ನಿಮ್ಮ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಸೇರಿದಂತೆ ಯಾವುದಾದ್ರೂ ಒಂದು ಸರ್ಕಾರಿ ಐಡಿ ನಂಬರ್ ಹಾಕಿ.. ಆಮೇಲೆ ಪಾಸ್‌ವಾರ್ಡ್‌ ಕನ್ಫರ್ಮ್ ಮಾಡಿ. ಈಗ ಮುಂದುವರಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನೀಡಿರುವ ಫೋನ್ ಸಂಖ್ಯೆಗೆ ನೀವು OTP ಸ್ವೀಕರಿಸುತ್ತೀರಿ. ಈಗ OTP ನೀಡುವ ಮೂಲಕ ಖಾತೆಯನ್ನು ಪರಿಶೀಲಿಸಿ. ನಿಮ್ಮ ದೇವಾಲಯದ ಭೇಟಿಯ ದಿನವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಶಬರಿಮಲೆ ವರ್ಚುವಲ್ ಕ್ಯೂ ಟಿಕೆಟ್ ಅನ್ನು ಬುಕ್ ಮಾಡಲು ಸಬ್ಮಿಟ್ ಎಂಬ ಬಟನ್ ಕ್ಲಿಕ್ ಮಾಡಿ. ನಿಮ್ಗೆ ಟೆಕಟ್ ಬರುತ್ತೆ.. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವರ್ಚುವಲ್-ಕ್ಯೂ ಬುಕಿಂಗ್ ಅಗತ್ಯವಿರುವುದಿಲ್ಲ. )  ಇನ್ನೂ ನೀವು ಹೋಗುವ ವಾಹನ ಬಗ್ಗೆ ಕೂಡ ಜಾಗ್ರತೆ ವಹಿಸಿ. ಅದ್ರು ಆರ್‌ಸಿ ಸರಿಯಾಗಿ ಇದ್ಯಾ.. ಎಲ್ಲದ್ದಕಿಂತ ಹೆಚ್ಚಾಗಿ ಇನ್ಸೂರೆಸ್ಸ್ ಇದ್ಯಾ ಅನ್ನೋದ್ದನ್ನ ಚೆಕ್ ಮಾಡಿ.

 ಶಬರಿಮಲೆಗೆ ಹೋಗುವ ಮಾರ್ಗಗಳು

ಯಾತ್ರಾರ್ಥಿಗಳು 2 ವಿಭಿನ್ನ ಮಾರ್ಗಗಳಿಂದ ಕಾಲ್ನಡಿಗೆಯಲ್ಲಿ ಶಬರಿಮಲೆಯನ್ನು ತಲುಪಬಹುದು. ಒಂದು ಪಂಪಾದಿಂದ ಮತ್ತು ಇನ್ನೊಂದು ಎರುಮೇಲಿಯಿಂದ ಶಬರಿಮಲೆಯನ್ನು ತಲುಪಬಹುದು. ಪಂಪಾದಿಂದ ಬರುವ ಮಾರ್ಗವು ಚಿಕ್ಕದಾಗಿದೆ. 5 ಕಿ.ಮೀ ನೀಲಿಮಲ ಮಾರ್ಗ ಎಂದೂ ಕರೆಯಲಾಗುತ್ತದೆ. ಇನ್ನೊಂದು ಮಾರ್ಗವಾದ ಎರುಮೇಲಿ ಮಾರ್ಗವು 40 ಕಿ.ಮೀ ಉದ್ದವಾಗಿದೆ. ಇದನ್ನು ಪೆರಿಯಾ ಪಥೈಅಂದ್ರೆ  ಉದ್ದದ ಹಾದಿ  ಎಂದು ಕರೆಯಲಾಗುತ್ತದೆ. ಇದು ಅಂತಿಮವಾಗಿ ಪಂಬಾ ಮಾರ್ಗದೊಂದಿಗೆ ವಿಲೀನಗೊಳ್ಳುತ್ತದೆ. ನಿಮ್ಗೆ ಯಾವುದು ಅನುಕೂಲ ಆ ಮಾರ್ಗದಲ್ಲಿ ಹೋಗಿ..

Kishor KV