ಈ ಮನೆಯಲ್ಲಿ ವುಮೆನ್‌ ಕಾರ್ಡ್‌ ಬೇಡ! – ಅಶ್ವಿನಿ ಗೌಡ ಹೈಡ್ರಾಮಾಕ್ಕೆ ಕಿಚ್ಚ ಕ್ಲಾಸ್

ಈ ಮನೆಯಲ್ಲಿ ವುಮೆನ್‌ ಕಾರ್ಡ್‌ ಬೇಡ! – ಅಶ್ವಿನಿ ಗೌಡ ಹೈಡ್ರಾಮಾಕ್ಕೆ ಕಿಚ್ಚ ಕ್ಲಾಸ್

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ರೂಲ್ಸ್‌ ಬ್ರೇಕ್‌ ಮಾಡೋದು.. ತಮ್ಮದೇ ವಾದ ಇಟ್ಕೊಂಡು ಬೇರೆ ಸ್ಪರ್ಧಿಗಳನ್ನ ಕುಗ್ಗಿಸೋದ್ರಲ್ಲಿ ಎಕ್ಸಪರ್ಟ್. ಈಗಾಗಲೇ ರಕ್ಷಿತಾ, ಗಿಲ್ಲಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದು ನಿಮ್ಗೆ ಗೊತ್ತೇ ಇದೆ. ಅಶ್ವಿನಿ ಗೌಡ ಎಷ್ಟು ತಪ್ಪು ಮಾಡಿದ್ರೂ ಕಿಚ್ಚ ಸುದೀಪ್‌ ಬೈಯ್ಯೋದೆ ಎಲ್ಲ ಎಂದು ವೀಕ್ಷಕರು ಹೇಳ್ತಾ ಬಂದಿದ್ರು. ಇದೀಗ ಕಿಚ್ಚ ಸುದೀಪ್‌ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ವುಮೆನ್‌ ಕಾರ್ಡ್‌ ಬೇಡ ಎಂದು ಅಶ್ವಿನಿಗೆ ಸುದೀಪ್‌ ವಾರ್ನ್‌ ಮಾಡಿದ್ದಾರೆ.

ಇದನ್ನೂ ಓದಿ: ತುಂಗಾ ತೀರದಲ್ಲಿ ಟ್ರಯಲ್‌ ಬಾ*ಬ್‌ ಸ್ಫೋ*ಟ ಕೇಸ್‌ – ಇಬ್ಬರು ಆರೋಪಿಗಳಿಗೆ 6 ವರ್ಷ ಜೈಲು ಶಿಕ್ಷೆ

ಬಿಗ್‌ಬಾಸ್‌ ಮನೆಯಲ್ಲಿ ನನಗೆ ಮರ್ಯಾದೆ ಸಿಕ್ತಿಲ್ಲ ಎಂದು ಅಶ್ವಿನಿ ಗೌಡ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದ್ರೆ ಅಶ್ವಿನಿ ಗೌಡಗೆ ತನ್ನ ತಪ್ಪಿನ ಅರಿವು ಆಗುತ್ತಲೇ ಇಲ್ಲ. ಸುದೀಪ್‌ ಬುದ್ದಿ ಮಾತು ಹೇಳಿದ್ರೂ ಅಶ್ವಿನಿ ಡೋಂಟ್‌ಕೇರ್‌ ಅನ್ನುತ್ತಿದ್ದರು. ಇದೀಗ ದೊಡ್ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ್ದ ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್‌ ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಕ್ಯಾಪ್ಟನ್‌ ಆಗಿದ್ದ ರಘು ಅವರು ಮನೆ ಕೆಲಸಕ್ಕಾಗಿ ಅಶ್ವಿನಿ ಅವರನ್ನು ಕರೆದಿದ್ದರು. ‘ಬನ್ನಿ ಅಶ್ವಿನಿ..ಕೆಲಸ ಮಾಡಬನ್ನಿ’ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಿಪಡಿಸಿದ ಅಶ್ವಿನಿ ಬಿಗ್‌ಬಾಸ್ ಮನೆಗೆ ಬಂದು ಸಮಾಜದಲ್ಲಿ ತಮ್ಮ ಸ್ಟೇಟಸ್‌ಗೆ ಧಕ್ಕೆಯಾಗಿದೆ ಎಂದು ಗೋಗರೆದು ಅತ್ತಿದ್ದರು. ಊಟ ಕೂಡ ಬಿಟ್ಟಿದ್ದಾರೆ. ಮನೆಯಿಂದ ಹೊರಗೆ ಹೋಗೋದಾಗಿ ರಾದ್ಧಾಂತ ಮಾಡಿದ್ದರು. ಇಷ್ಟಕ್ಕೆಲ್ಲಾ ಕಾರಣ ಕ್ಯಾಪ್ಟನ್ ಆಗಿದ್ದ ರಘು ತಮ್ಮನ್ನು ಏಕವಚನದಲ್ಲಿ ಕರೆದು ಅವಮಾನ ಮಾಡಿದ್ರು ಅನ್ನೋದಾಗಿ ಅಶ್ವಿನಿ ಬಿಗ್‌ಬಾಸ್ ಮನೆಯಲ್ಲಿ ಆರೋಪ ಮಾಡಿದ್ದರು.

ಇದೇ ವಿಚಾರವನ್ನು ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಮುಂದಿಟ್ಟುಕೊಂಡು ಮಾತನಾಡಿದ್ದಾರೆ. ಈ ವೇಳೆ ಅಶ್ವಿನಿ ಗೌಡ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಏಕವಚನ.. ಏಕವಚನ.. ಏಕವಚನ.. ನಿಮಗೆ ಹೋಗಿ ಬನ್ನಿ ಅಂತ ಅನ್ನಿಸಿಕೊಳ್ಳಬೇಕಾದರೆ, ಪ್ರತಿ ಚಿಕ್ಕ ಮಗುವಿಗೂ ಹೋಗಿ ಬನ್ನಿ ಅನ್ನೋದನ್ನ ಕಲಿಯಿರಿ.. ಮಾತೆತ್ತಿದರೆ, ಯಾವ ಹುಡುಗಿಗೂ ಹೀಗೆ ಕರೆಯಬೇಡಿ ಅಂತೀರಿ. ಯಾರು ಏನು ಮಾತನಾಡಿದ್ದಾರೆ ಇಲ್ಲಿ ಎಂದು ಅಶ್ವಿನಿ ಗೌಡಗೆ ಕಿಚ್ಚ ಖಾರವಾಗಿ ಪ್ರಶ್ನಿಸಿದ್ದಾರೆ.

ಯಾರಾದ್ರು ಹೆಣ್ಣುಮಕ್ಕಳು ಅಶ್ವಿನಿ ಗೌಡ ಕೈಯಲ್ಲಿ ನಿಮ್ಮ ಮಾನ-ಮರ್ಯಾದೆ, ಗೌರವ ಕೊಟ್ಟು ಕೂತಿದ್ದೀರಿ ಕೈ ಎತ್ತಿ ಅಂತ ಕಿಚ್ಚ ಕೇಳ್ತಾರೆ. ಆಗ ಯಾವ ಮಹಿಳಾ ಸ್ಪರ್ಧಿಯೂ ಕೈ ಎತ್ತುವುದಿಲ್ಲ. ಅಶ್ವಿನಿಯವ್ರೆ ಈ ಮನೆಯಲ್ಲಿ ವುಮೆನ್‌ ಕಾರ್ಡ್‌ ಬೇಡ ಅಂತ ಕಿಚ್ಚ ಸುದೀಪ್‌ ಖಡಕ್‌ ಆಗಿಯೇ ಸೂಚನೆ ಕೊಟ್ಟಿದ್ದಾರೆ. ಆ ಮೂಲಕ ಏಕವಚನ ರಾದ್ಧಾಂತಕ್ಕೆ ತೆರೆ ಎಳೆದಿದ್ದಾರೆ.

ಅಂದ್ಹಾಗೆ ಅಶ್ವಿನಿ ಗೌಡ ವಿಚಾರದಲ್ಲಿ ಸುದೀಪ್‌ ಸೈಲೆಂಟ್‌ ಆಗಿದ್ದಾರೆಂಬ ಆರೋಪ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಈ ಆರೋಪಕ್ಕೆ ಕಿಚ್ಚ ತೆರೆ ಎಳೆದಂತೆ ಕಾಣುತ್ತಿದೆ. ಇಂದಿನ ಪ್ರೋಮೊದಲ್ಲಿ ಅಶ್ವಿನಿ ಅವರಿಗೆ ಕಿಚ್ಚ ಹಿಗ್ಗಾಮುಗ್ಗ ಜಾಡಿಸಿದ್ದಾರೆ.

Shwetha M