ನಾಯಕ ಬದಲಾದರೂ ಬದಲಾಗಿಲ್ಲ ಟಾಸ್‌ ಅದೃಷ್ಟ – 2ನೇ ಟೆಸ್ಟ್‌ನಲ್ಲಿ ಟಾಸ್ ಸೋತ ಭಾರತ

ನಾಯಕ ಬದಲಾದರೂ ಬದಲಾಗಿಲ್ಲ ಟಾಸ್‌ ಅದೃಷ್ಟ – 2ನೇ ಟೆಸ್ಟ್‌ನಲ್ಲಿ ಟಾಸ್ ಸೋತ ಭಾರತ

‘ಟಾಸ್ ವಿಚಾರದಲ್ಲಿ ಭಾರತದ ಲಕ್ ಬದಲಾಗಿಲ್ಲ.  ಸೌತ್ ಆಫ್ರಿಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ಟಾಸ್ ಸೋತ್ರೆ,  ದಕ್ಷಿಣ ಆಫ್ರಿಕಾ  ತಂಡದ ನಾಯಕ ಟೆಂಬ ಬವುಮಾ ಟಾಸ್ ಗೆದ್ದು  ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ್ರು.   ಹಂಗಾಮಿ ನಾಯಕ ರಿಷಭ್‌ ಪಂತ್‌ ಟಾಸ್‌ಗೆ ಆಗಮಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ ಭಾರತವನ್ನು ಮುನ್ನಡೆಸಿದ 38ನೇ ನಾಯಕರೆನಿಸಿದರು.

ನಾಯಕ ಬದಲಾದರೂ ಟಾಸ್‌ ಅದೃಷ್ಟ ಮಾತ್ರ ಬದಲಾಗಲಿಲ್ಲ. ಈ ಪಂದ್ಯದಲ್ಲಿಯೂ ಭಾರತ ಟಾಸ್‌ ಸೋಲುವ ಮೂಲಕ ಕಳೆದ 9 ಪಂದ್ಯಗಳಲ್ಲಿ 8 ಸೋತಂತಾಯಿತು. 2008 ರಿಂದ 2014 ರ ನಡುವೆ 60 ಪಂದ್ಯಗಳಲ್ಲಿ ಎಂಎಸ್ ಧೋನಿ ಭಾರತ ತಂಡವನ್ನು ಮುನ್ನಡೆಸಿದ ನಂತರ ರಿಷಭ್ ಪಂತ್ ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸುತ್ತಿರುವ ಎರಡನೇ ವಿಕೆಟ್ ಕೀಪರ್ ಎನಿಸಿದರು. ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿತು. ಸಾಯಿ ಸುದರ್ಶನ್ ಮತ್ತು ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡಿತು. ಅಕ್ಷರ್‌ ಪಟೇಲ್‌ ಅವರನ್ನು ಕೈಬಿಡಲಾಯಿತು. ದಕ್ಷಿಣ ಆಫ್ರಿಕಾ ಒಂದು ಬಲಾವಣೆ ಮಾಡಿತು. ಸೆನುರನ್ ಮುತ್ತುಸ್ವಾಮಿಗೆ ಅವಕಾಶ ನೀಡಿ ಕಾರ್ಬಿನ್ ಬಾಷ್ ಕೈಬಿಡಲಾಯಿತು.

ಇದನ್ನೂ ಓದಿ:  2026ಕ್ಕೆ GT ಪರ ಆಡಲ್ವಾ ಗಿಲ್? – ಟೀಂ ಇಂಡಿಯಾಗಾಗಿ IPL ತ್ಯಾಗ?

ಗುವಾಹಟಿಯ ಪಿಚ್‌ ಕೆಂಪು ಜೇಡಿಮಣ್ಣಿನಿಂದ ತಯಾರಿಸಲಾಗಿದ್ದು, ವೇಗ ಮತ್ತು ಬೌನ್ಸ್‌ನಿಂದ ಕೂಡರಲಿದೆ ಎನ್ನಲಾಗಿದೆ. ಆದರೆ ಈಡನ್‌ ಗಾರ್ಡನ್ಸ್‌ನಲ್ಲಿ ಬ್ಯಾಟರ್‌ಗಳನ್ನು ಕಾಡಿದ ಅನಿರೀಕ್ಷಿತ ಬೌನ್ಸ್‌ ಸಾಧ್ಯತೆ ಇಲ್ಲ. ಸ್ಪಿನ್ನರ್‌ಗಳು ಹಿಡಿತ ಸಾಧಿಸಲು ಅಂತಿಮ ಎರಡು ದಿನಗಳ ವರೆಗೂ ಕಾಯಬೇಕಾಗಬಹುದು.

ಭಾರತ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್(w/c), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ(ನಾಯಕ), ಟೋನಿ ಡಿ ಝೋರ್ಜಿ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರಿನ್ನೆ(ವಿ.ಕೀ.), ಮಾರ್ಕೊ ಜಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.

Kishor KV