2026ಕ್ಕೆ GT ಪರ ಆಡಲ್ವಾ ಗಿಲ್? – ಟೀಂ ಇಂಡಿಯಾಗಾಗಿ IPL ತ್ಯಾಗ?
ಗಂಭೀರ್ ಟಿಪ್ಸ್ ವರ್ಕೌಟ್ ಆಗುತ್ತಾ?

2026ರ ಐಪಿಎಲ್ಗೆ ಸಿದ್ಧವಾಗ್ತಿರೋ 10 ಫ್ರಾಂಚೈಸಿಗಳ ಪೈಕಿ ಬಹುತೇಕ ತಂಡಗಳ ಕ್ಯಾಪ್ಟನ್ಸ್ ಕನ್ಫರ್ಮ್ ಆಗಿದ್ದಾರೆ. ಆದ್ರೆ ರಾಜಸ್ಥಾನ ರಾಯಲ್ಸ್ ನಲ್ಲಿ ಬದಲಾವಣೆ ಮಾಡ್ಬೇಕಾಗುತ್ತೆ. ಌಂಡ್ ಕೆಕೆಆರ್ನಲ್ಲಿ ಅಜಿಂಕ್ಯ ರಹಾನೆನೇ ಕಂಟಿನ್ಯೂ ಆಗ್ತಾರಾ ಅನ್ನೋ ಡೌಟ್ ಇದೆ. ಅದನ್ನ ಬಿಟ್ರೆ ಉಳಿದೆಲ್ಲಾ ತಂಡಗಳಲ್ಲಿ ಕಳೆದ ಆವೃತ್ತಿಯಲ್ಲಿ ಇದ್ದವ್ರೇ ಕಂಟಿನ್ಯೂ ಆಗ್ತಾರೆ. ಆದ್ರೆ ಈಗಿರೋ ಪ್ರಶ್ನೆ ಅಂದ್ರೆ 19ನೇ ಸೀಸನ್ ಐಪಿಎಲ್ನಲ್ಲಿ ಶುಭ್ಮನ್ ಗಿಲ್ ಆಡಲ್ವಾ ಅನ್ನೋದು.
ಇದನ್ನೂ ಓದಿ : ರಸೆಲ್ ಮೇಲೆ ಕಣ್ಣಿಟ್ಟಿದ್ಯಾ RCB? – ಬ್ಯಾಟಿಂಗ್ & ಬೌಲಿಂಗ್ ಬೊಂಬಾಟ್
ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಶುಭ್ಮನ್ ಗಿಲ್. ಸದ್ಯ ಭಾರತದ ಪರ ತಂಡದಲ್ಲಿ ಮೂರೂ ಮಾದರಿಯಲ್ಲಿ ಆಡ್ತಿರೋ ಏಕೈಕ ಪ್ಲೇಯರ್. ಅದ್ರ ಜೊತೆಗೆ ಕ್ಯಾಪ್ಟನ್ಸಿ, ವೈಸ್ ಕ್ಯಾಪ್ಟನ್ಸಿ ಜವಾಬ್ದಾರಿ ಕೂಡ ಇದೆ. ಆದ್ರೀಗ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಕುತ್ತಿಗೆ ನೋವಿನಿಂದ ಬಳಲ್ತಿರೋ ಗಿಲ್ ರೂಲ್ಡ್ ಔಟ್ ಆಗಿದ್ದಾರೆ. ಬಹುಶಃ ಗಿಲ್ ಮೇಲೆ ಪ್ರೆಶರ್ ಜಾಸ್ತಿಯಾಗ್ತಿದೆ ಅನ್ನೋ ಮಾತುಗಳೂ ಇವೆ. ಆದ್ರೆ ಈ ಆರೋಪಕ್ಕೆ ಗಂಭೀರ್ ಖಡಕ್ ಆಗಿಯೇ ಆನ್ಸರ್ ಕೊಟ್ಟಿದ್ದಾರೆ.
ರೆಸ್ಟ್ ಬೇಕಂದ್ರೆ ಐಪಿಎಲ್ ಬಿಡುವಂತೆ ಹೇಳಿದ ಗಂಭೀರ್!
ಸೌತ್ ಆಫ್ರಿಕಾ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯ ಸೋತ್ಮೇಲೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಬಹುಶಃ ಮೂರೂ ಮಾದರಿಯಲ್ಲಿ ಆಡ್ತಿರೋ ಗಿಲ್ಗೆ ಕ್ಯಾಪ್ಟನ್ಸಿ ಜೊತೆ ಬ್ಯಾಟಿಂಗ್ ಕಷ್ಟ ಆಗ್ತಿದೆ ಅನ್ನೋದು ಕೆಲವರ ಅಭಿಪ್ರಾಯ. ಈ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಕೂಡ ಧ್ವನಿ ಎತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಭಾರತ ತಂಡದ ಹೆಡ್ಕೋಚ್ ಗೌತಮ್ ಗಂಭೀರ್ರನ್ನ ಪ್ರಶ್ನಿಸಿದ್ದಾರೆ. ಮೂರೂ ಮಾದರಿಯಲ್ಲಿ ಆಡ್ತಿರೋದು ಗಿಲ್ಗೆ ಒತ್ತಡ ಹೇರುತ್ತಿದ್ಯಾ, ಇಂಜುರಿಗೂ ಇದೇ ಕಾರಣನಾ ಎಂದಿದ್ದಾರೆ. ಆದ್ರೆ ಇದಕ್ಕೆ ಗಂಭೀರ್ ಖಡಕ್ಕಾಗಿ ರಿಪ್ಲೈ ಮಾಡಿದ್ದಾರೆ. ಕೆಲಸದ ಹೊರೆ ನಿರ್ವಹಣೆಯ ಆರೋಪವನ್ನ ತಳ್ಳಿ ಹಾಕಿದ್ದಾರೆ. ಗಿಲ್ ಅವರಿಗೆ ವಿಶ್ರಾಂತಿ ಬೇಕಾದರೆ ಐಪಿಎಲ್ ಅನ್ನು ಬಿಟ್ಟುಬಿಡಬೇಕು ಎಂದಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಉತ್ತಮ ಫಾರ್ಮ್ನಲ್ಲಿ ಇದ್ದಾಗ ಪಂದ್ಯಗಳು ಎಷ್ಟು ಅನ್ನೋದು ಲೆಕ್ಕಕ್ಕೆ ಬರಲ್ಲ. ಫಿಟ್ನೆಸ್ ಕಾಯ್ದುಕೊಂಡು ಆಡಬೇಕಾಗುತ್ತೆ. ಹಾಗೇನಾದ್ರೂ ಭಾರತದ ಪರ ಪಂದ್ಯಗಳಲ್ಲಿ ಪ್ರೆಶರ್ ಅನ್ಸಿದ್ರೆ ಐಪಿಎಲ್ ಆಡೋದು ಬೇಡ ಎನ್ನುವಂತೆಯೇ ಮಾತನಾಡಿದ್ದಾಗಿ ಚೋಪ್ರಾ ಹೇಳಿದ್ದಾರೆ. ಅಷ್ಟಕ್ಕೂ ಗಿಲ್ ಬಗ್ಗೆ ಆ ಮಟ್ಟಿಗೆ ಚರ್ಚೆಯಾಗೋಕೆ ಕಾರಣವೂ ಇದೆ. ಏನಂದ್ರೆ ರೆಸ್ಟ್ ಇಲ್ಲದ ಸಾಲು ಸಾಲು ಪಂದ್ಯಗಳು!
ಬ್ಯಾಕ್ ಟು ಬ್ಯಾಕ್ ಆಟ!
ಏಕದಿನ ಮತ್ತು ಟೆಸ್ಟ್ ನಾಯಕ, ಟಿ20ಐ ಉಪನಾಯಕ
ಟೀಂ ಇಂಡಿಯಾದ ಆಲ್ ಫಾರ್ಮೆಟ್ ಪ್ಲೇಯರ್
ಏಷ್ಯಾಕಪ್ ಬಳಿಕ ಭಾರತದ ಪರ ನಾನ್ ಸ್ಟಾಪ್ ಪಂದ್ಯ
ವೈಟ್ ಬಾಲ್ ಸಿರೀಸ್ ನಲ್ಲಿ ಪದೇಪದೆ ಫೇಲ್ಯೂರ್
ಸೌತ್ ಆಫ್ರಿಕಾ ವಿರುದ್ಧ ಕುತ್ತಿಗೆ ನೋವಿನಿಂದಾಗಿ ಔಟ್

ನೋಡಿರಿ

