ಬಿಗ್‌ಬಾಸ್‌ಗ್ಯಾಕೆ ಅಶ್ವಿನಿ ಮೇಲೆ LOVE? – ಗಿಲ್ಲಿ ಮಾತಿನಿಂದಲೇ ಅಶ್ವಿನಿಗೌಡ ಕ್ಯಾಪ್ಟನ್ಸಿ ಮಿಸ್!

ಬಿಗ್‌ಬಾಸ್‌ಗ್ಯಾಕೆ ಅಶ್ವಿನಿ ಮೇಲೆ LOVE? –   ಗಿಲ್ಲಿ ಮಾತಿನಿಂದಲೇ ಅಶ್ವಿನಿಗೌಡ ಕ್ಯಾಪ್ಟನ್ಸಿ ಮಿಸ್!

ಬಿಗ್ ಬಾಸ್ ಬಿಗ್ ಬಾಸ್‌.. ಯಾರ್ ಬಾಯಲ್ಲಿ ಕೇಳಿದ್ರೂ ಬಿಗ್‌ ಬಾಸ್‌ನದ್ದೇ ಮಾತು.. ಗಿಲ್ಲಿ ಆಟಕ್ಕೆ ಕರ್ನಾಟಕದ ಜನ ಮನ ಸೋತಿದ್ರೆ, ಅಶ್ವಿನಿ ಗೌಡ ಆಟ ನೋಡಿ ಉಗೀತಾ ಇದ್ದಾರೆ.. ಅದು ಸೋಷಿಯಲ್ ಮೀಡಿಯಾದಲ್ಲಿ ಹಾಕೋ ಕಾಮೆಂಟ್‌ನ  ಅಶ್ವಿನಿಗೌಡ ನೋಡಿದ್ರೆ ಈಗಾಗಲೇ ಮನೆಯಿಂದ ಆಚೆ ಬರ್ತಾರೆ ಅನ್ಸುತ್ತೆ..  ಈ ವಾರ ಬಿಗ್ ಬಾಸ್ ಆಟ ನೋಡಿ ಏನ್ ಅನ್ಸುತ್ತೆ  ಅಂದ್ರೆ ಬಿಗ್‌ಬಾಸ್ ಅವರೇ ಅಶ್ವಿನಿಗೌಡಗೇ ದುಡ್ಡು ಕೊಟ್ಟು ಮನೆಯಲ್ಲಿ ಇಟ್ಟುಕೊಂಡಿದ್ದಾರಾ? ಅಥವಾ ಅಶ್ವಿನಿಗೌಡನೇ ಬಿಗ್‌ಬಾಸ್‌ ಶೋಗೆ ದುಡ್ಡು ಕೊಟ್ಟು ಒಳಗೆ ಹೋಗಿದ್ದಾರಾ ಅನ್ನೋದು ಗೊತ್ತಾಗ್ತಿಲ್ಲ.. ಅಶ್ವಿನಿಗೌಡ್ ಏನ್ ಮಾಡಿದ್ರೂ ಕೂಡ ಒಂದು ವಾರ್ನಿಂಗ್ ಮಾಡಿ, ಸಮ್ಮೇ ಹಾಗೇ ಬಿಡ್ತಾ ಇದ್ದಾರೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಬಿಗ್‌ಬಾಸ್ ಅಶ್ವಿನಿಗೌಡನನ್ನ ಹೇಗಾದ್ರೂ ಮಾಡಿ ಈ ವಾರ ಕ್ಯಾಪ್ಟನ್ ಮಾಡೋಕೆ ತುದಿಕಾಲಲ್ಲಿ ನಿಂತಿದ್ದಾರೆ ಅನ್ಸುತ್ತೆ.. ಬಿಗ್‌ಬಾಸ್ ಮೊದ್ಲೇ ರೂಲ್ಸ್ ಹೇಳದೇ ಆಮೇಲೆ ಅವರಿಗೆ ಬೇಕಾದಂತೆ ಹೇಳಿ  ಅಶ್ವಿನಿಗೌಡ ಪರ ಫೇವರಿಸಂ ಮಾಡ್ತಾ ಇರೋದು ಎದ್ದು ಕಾಣ್ತಾ ಇದೆ.

ಬಿಗ್‌ಬಾಸ್‌ ಮತ್ತು ಅಶ್ವಿನಿಗೌಡ ಮಧ್ಯೆ ಏನಾದ್ರೂ ಡೀಲ್ ಆಗಿದ್ಯಾ ಅನ್ನೋ ಪ್ರಶ್ನೆ ಈ ವಾರ ಹುಟ್ಟುಕೊಂಡಿದ್ದೆ. ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ತೆಗೆದುಕೊಂಡ ಬಿಗ್‌ ಬಾಸ್ ನಿರ್ಧಾರ ಇದ್ದಕ್ಕೆ ಕಾರಣ. ಸೋಷಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆನೇ ಚರ್ಚೆ ಆಗ್ತಾ ಇದೆ.. ಈ ಕಾಮೆಂಟ್ ನೋಡಿ ಇದ್ರಲ್ಲೇ ನಿಮ್ಗೆ ಎಲ್ಲಾ ಅರ್ಥ ಆಗಿ ಹೋಗುತ್ತೆ..
ಯಾಕೆ ಬಿಗ್ ಬಾಸ್, ಅಶ್ವಿನಿ ಪರವಾಗಿ ಇಸ್ಟೊಂದು ಫೇವರಿಸಂ ಮಾಡ್ತಿದ್ದೀರಾ.. ಅಶ್ವಿನಿ ಅವರಿಗೇ ಕಪ್ ಕೂಡಾ ಕೊಟ್ಟುಬಿಡಿ ಅಂದಿದ್ದಾರೆ. ಉಪವಾಸ ಮಾಡಿದಕ್ಕೆ ಕ್ಯಾಪ್ಟನ್ ಆಟಕ್ಕೆ ಆಯ್ಕೆ ಮಾಡಿಬಿಟ್ರಲ್ಲ.. ಯಾಕೇ ಅಶ್ವಿನಿ ಕಂಡ್ರೆ ಅಷ್ಟೊಂದು ಭಯನಾ ಅಂತ ಕೇಳಿದ್ದಾರೆ.. ಬಿಗ್‌ಬಾಸ್ ರೂಲ್ಸ್‌ ನಾ  ಬ್ರೇಕ್  ಮಾಡ್ತಾನೆ ಇದ್ದಾರೆ, ನೇರ ನಾಮಿನೇಟ್ ಕೂಡಾ ಆಗಿದ್ದಾರೆ. ಕೂಗಾಡಿ ಈಕೆ ತುಂಬಾ ರೂಡಾಗೀ ವರ್ತಿಸುತ್ತಿದ್ದಾರೆ, ಗಂಡಸರನ್ನ ಯಾವನೋ ಲೇ ಹೋಗಲ್ಲೊ ಅಂತ ಕೂಗಾಡಿದ್ದಾರೆ.. ಹೀಗೆಲ್ಲಾ ಮಾಡಿರೋ ಅಶ್ವಿನಿಗೌಡಗೆ  ಬಿಗ್‌ಬಾಸ್ ಪಿತ್ತ ನೆತ್ತಿಗೆ ಏರಿಸಿಕೊಂಡು ಬುದ್ಧಿ ಹೇಳಬೇಕಿತ್ತು.. ಅಂತದ್ರಲ್ಲಿ ಆಟದಲ್ಲಿ ಸೋತ್ರು ಕೂಡಾ ಕ್ಯಾಪ್ಟನ್ ಆಟಕ್ಕೆ ಹೇಗೆ  ಸಲೆಕ್ಟ್ ಮಾಡಿದ್ರಿ ಅನ್ನೋ ಪ್ರಶ್ನೆ ಕೇಳಿದ್ದಾರೆ.. ಇದು ಕೇವಲ ಒಬ್ಬರ ಮಾತಲ್ಲ ಇಡೀ ಕರ್ನಾಟಕದ ಮಾತಾಗಿದೆ..

ಇನ್ನೊಂದು ಪೋಸ್ಟ್‌ನಲ್ಲಿ ಕೂಡ ಹೀಗೆ ಆಕ್ರೋಶ ಹೊರ ಹಾಕಿದ್ದಾರೆ.  ನಿನ್ನೆ ಟಾಸ್ಕ್ ಇವರೇ ಆಡಿ ಗೆದ್ದಿದ್ರೂ, ಇವ್ರು ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆ ಆಗ್ತಾ ಇದ್ರು.  ಸೋತರೂ ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆ ಆಗ್ತಾರೆ ಇವ್ರು, ಈ ವಾರ ಸುಮ್ಮೆ ಮಲಗಿದ್ರು ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆ ಆಗ್ತಾ ಇದ್ರು, ಮನೆ ರೂಲ್ಸ್ ಬ್ರೇಕ್ ಮಾಡಿ ಬಿಗ್ ಬಾಸ್ ನಿಂದ ನೇರ ನಾಮಿನೇಷನ್‌ ಆಗಿದ್ರೂ ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆ ಆಗ್ತಾರೆ. ಒಟ್ಟಾರೆ ಈ ವಾರ ಬಿಗ್‌ಬಾಸ್ ಇವನ್ನು ಶತಾಯಗತಾಯ ಕ್ಯಾಪ್ಟನ್ ಮಾಡೋದು ಫಿಕ್ಸ್.. ಹಾಗಾದರೆ ಉಳಿದ ಸದಸ್ಯರು ಅಷ್ಟು ಕಷ್ಟ ಪಟ್ಟು ಟಾಸ್ಕ್ ಆಡೋದು ಯಾಕೆ..? 2-3 ಟಾಸ್ಕ್ ಆಡಿರುವ ಅವ್ರೆಲ್ಲಾ ಒಂದೇ ಒಂದು ಟಾಸ್ಕ್ ಆಡಿ ಸೋತಿರುವ ಅಶ್ವಿನಿಯವರ ಜೊತೆ ಫೈನಲ್ ನಲ್ಲಿ ಆಡಬೇಕು ಅಂತೆ..  ಇವ್ರನ್ನೆ ನೇರ ಕ್ಯಾಪ್ಟನ್ ಘೋಷಣೆ ಮಾಡಿ ಅಂತಿದ್ದಾರೆ ಜನ ಅಂತ ಪೋಸ್ಟ್ ಹಾಕಿದ್ದಾರೆ.

ನಿಜ ಅಲ್ವಾ ಬಿಗ್‌ ಬಾಸ್ ನೋಡಿದ ಎಲ್ಲರಿಗೂ ಕೂಡ ಇದು ನಿಜ ಅನ್ಸುತ್ತೆ. ಜನ ಬಿಗ್‌ಬಾಸ್ ಬಗ್ಗೆ ಇಷ್ಟು ಆಕ್ರೋಶ ಹೊರ ಹಾಕೋಕೆ ಕಾರಣ ಬಿಗ್‌ಬಾಸ್‌ ರೂಲ್ಸ್‌..

ಇದನ್ನೂ ಓದಿ: ಅಶ್ವಿನಿ, ಜಾನ್ವಿ ಲೆಕ್ಕಾಚಾರ ಉಲ್ಟಾ ಮಾಡಿದ ಗಿಲ್ಲಿ – ರಾಶಿಕಾ ಹೆಸರು ಹೇಳಿ ಮನಗೆದ್ದ ಗಿಲ್ಲಿ

ಈ ವಾರ ಕ್ಯಾಪ್ಟನ್ಸಿ ಓಟಕ್ಕೆ 3 ಟಾಸ್ಕ್ ಆಡಿಸಿದ್ರು.  ಇದಕ್ಕೆ ಗಿಲ್ಲಿ ಮತ್ತು ಅಶ್ವಿನಿಗೌಡರನ್ನ ನಾಯರನ್ನಾಗಿ ಮಾಡಲಾಗಿತ್ತು. ಮೊದ್ಲ ಎರಡು ಟಾಸ್ಕ್‌ನಲ್ಲಿ ಅಶ್ವಿನಿಗೌಡ ಉಸ್ತುವಾರಿ ಮಾಡಿದ ಟೀಂ ಗೆದ್ದಿತ್ತು. ಆದ್ರೆ ಇಲ್ಲಿ ಅಶ್ವಿನಿಗೌಡ ಆಡಿಲ್ಲ. ಟೀಂ ಆಡಿ ಗೆದಿದ್ದು.. ಆದ್ರೆ 3ನೇ ಟಾಸ್ಕ್‌ ನಲ್ಲಿ ಅಶ್ವಿನಿಗೌಡ ಮತ್ತು ಗಿಲ್ಲಿ ಆಡಿದ್ದಾರೆ. ಇದ್ರಲ್ಲಿ ಗಿಲ್ಲಿ ಗೆದ್ದಿದ್ದಾರೆ. ಆದ್ರೆ ಗಿಲ್ಲಿಗೆ ಬೇರೆಯವರನ್ನ ಸಲೆಕ್ಟ್ ಮಾಡೋಕೆ ಹೇಳುವ ಬಿಗ್‌ ಬಾಸ್‌, ಅಶ್ವಿನಿಗೌಡರನ್ನ ನೀವು ಡೆರೆಕ್ಟ್ ಸಲೆಕ್ಟ್ ಆಗಿದ್ದೀರಾ ಅಂತ ಹೇಳ್ತಾರೆ. ಅಷ್ಟೇ ಅಲ್ಲ  ಅಶ್ವಿನಿ ಡೈರೆಕ್ಟ್ ಕ್ಯಾಪ್ಟನ್ಸಿ ಟಾಸ್ಕ್‌ ಗೆ ಸಲೆಕ್ಟ್‌. ಆದ್ರೆ ಧ್ರುವಂತ್, ಅಭಿಷೇಕ್, ರಾಶಿಯಲ್ಲಿ ಒಬ್ಬರು ಮಾತ್ರ ಸಲೆಕ್ಟ್ ಆಗ್ತಾರೆ. 3 ಮೂರು ಜನರಲ್ಲಿ ಅಭಿಷೇಕ್ ಸಲೆಕ್ಟ್ ಆಗ್ತಾರೆ. ಯಾಕೆ ನಾಲ್ಕು ಜನರ ಮಧ್ಯೆ ಈ ಟಾಸ್ಕ್ ಆಡಿಸಿಲ್ಲ. ಇದ್ದನ್ನ ನೋಡಿದೆ ಜನ ಅಶ್ವಿನಿಯವರು ಈ ಬಾರಿ ಕ್ಯಾಪ್ಟನ್ ಆಗಲೇಬೇಕು ಎಂದು ಸ್ವತಃ ಬಿಗ್‌ಬಾಸ್ ಬಯಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಸಿಟ್ಟು ಹೊರಹಾಕಿದ್ದರು.

ಫೈನಲ್‌ನಲ್ಲಿ ಫಿಸಿಕಲ್ ಟಾಸ್ಕ್ ಇದ್ದರೆ ಅಶ್ವಿನಿಯವರು ಕ್ಯಾಪ್ಟನ್ ಆಗುವುದು  ಕಷ್ಟವಾಗುತ್ತೆ, ಇವರಿಗೆ ಈಸಿ ಆಗ್ಲಿ ಮಾತಿನ ಟಾಸ್ಕ್ ಕೊಟ್ಟಿದ್ದಾರೆ. ಎದುರಾಳಿಗಳು ಮಾತನಾಡ್ತಾ ಇರ್ತಾರೆ ಆಗ ಹನ್ನೆರಡು ನಿಮಿಷದಲ್ಲಿ ಗಂಟೆ ಬಾರಿಸುವ ಅಭ್ಯರ್ಥಿ ಕ್ಯಾಪ್ಟನ್‌ ಆಗುತ್ತಾರೆ ಅನ್ನೋ ಟಾಸ್ಕ್ ನೀಡಲಾಗಿದೆ. ಇದ್ರಲ್ಲಿ ಅಶ್ವಿನಿಗೌಡ ಮತ್ತು ಅಭಿಷೇಕ್ ನಡುವೆ ಪೈಪೋಟಿ ನಡೆದಿದ್ದು, ಇದ್ರಲ್ಲಿ ಗೆಲ್ಲೋರು ಕ್ಯಾಪ್ಟನ್ ಆಗ್ತಾರೆ. ಪ್ರೋಮದಲ್ಲಿ ಅಭಿಷೇಕ್‌ರನ್ನ ರಕ್ಷೀತಾ ಮಾತನಾಡಿಸೋದು, ಅಶ್ವಿನಿ ಗೌಡರನ್ನ ಗಿಲ್ಲಿ ಮಾತನಾಡಿಸೋದ್ದನ್ನ ತೋರಿಸಿದ್ದಾರೆ. ಗಿಲ್ಲಿ ನಟ ಅಂತೂ ಅಶ್ವಿನಿಗೌಡಗೆ ಸರಿಯಾಗೇ ಉರ್ಸಿ ಉರ್ಸಿ ಕೈ ಬಿಟ್ಟಿದ್ದಾರೆ.. ರಘು ಜೊತೆ ಆದ ಜಗಳದ ಬಗ್ಗೆ ಡೈರೆಕ್ಟ್ ಆಗಿ ಹೇಳಿ ಅಶ್ವಿನಿಗೆ ಗಿಲ್ಲಿ ಸರಿಯಾಗೇ  ಠಕ್ಕರ್‌ ಕೊಟ್ಟಿದ್ದಾರೆ. ಟೇಬಲ್‌ ಮೇಲೆ ಕಾಲಿಟ್ಟು ಅವರು ಸ್ಟ್ಯಾಂಡ್‌ ತಗೊಂಡಿದ್ದಾರೆ.  ರಘು ಹತ್ರ ಜಗಳ ಆದ ವಿಚಾರವನ್ನ ಮಾತಿನಗೆ ಟಾಸ್ಕ್‌ನಲ್ಲಿ ಹೇಳಿದ್ದಾರೆ. ಗೇಟ್‌ ಹತ್ತಿರ ಬಂದು, ಮನೆಗೆ ಹೋಗ್ತೀನಿ, ಮನೆಗೆ ಹೋಗ್ತೀನಿ ಎಂದು ಹೇಳಿದ್ರಿ. ನಿಮ್ಮನ್ನು ನಾವು ಇಟ್ಟುಕೊಂಡಿದ್ದೀವಾ? ಹೋಗಿ, ಯಾರು ಬೇಡ ಅಂದ್ರು. ರಘು ಅಣ್ಣ ನಿಮ್ಮನ್ನು ಅಶ್ವಿನಿ ಅಂತ ಕರೆಯದೆ, ಆಶು ಅಂತ ಕರೆಯಬೇಕಿತ್ತಾ? ಏ ಅಂತ ನಿಮ್ಮ ಇನಿಶಿಯಲ್‌ ಇದ್ದಿದ್ರೆ ಏ ಅಶ್ವಿನಿ ಮೇಡಂ ಅಂತ ಕರೆಯುತ್ತಿದ್ದೆ ಎಂದು ಗಿಲ್ಲಿ ನಟ ಹೇಳಿದ್ದಾರೆ. ನಿನ್ನಂಥವರನ್ನು ಎಷ್ಟು ಜನರನ್ನು ನಾನು ನೋಡಿಲ್ಲ? ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನನ್ನನ್ನು ನೋಡಿರಲ್ಲ  ಎಂದು ಹೇಳಿದ್ದಾರೆ. ಒಟ್ನಲ್ಲಿ ಈ ವಾರ ಯಾರು ಕ್ಯಾಪ್ಟನ್‌ ಆಗುತ್ತಾರೆ ಎಂಬ ಕುತೂಹಲಕ್ಕಿಂತ ಬಿಗ್‌ಬಾಸ್ ಅಶ್ವಿನಿಯವರನ್ನೇ ಕ್ಯಾಪ್ಟನ್ ಮಾಡುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಈ ಅಶ್ವಿನಿಗೌಡ ಕ್ಯಾಪ್ಟನ್ ಆದ್ರೆ ಮನೆಯಲ್ಲಿ ಹಿಟ್ಲರ್ ತರ ಆಡೋದು ಪಕ್ಕಾ.. ಬಿಗ್‌ ಬಾಸ್‌ಗೂ ಕೂಡ ಅದೇ ಬೇಕು.. ಅಶ್ವಿನಿಗೌಡ ಈಗ ಎಲ್ಲರ ಹತ್ರ ಜಗಳ ಮಾಡಿಕೊಂಡಿದ್ದಾರೆ. ರಘು ಗಿಲ್ಲಿ ಕಂಡ್ರೆ ಆಗಲ್ಲ, ಇವರನ್ನ ಕ್ಯಾಪ್ಟನ್ ಮಾಡಿದ್ರೆ ಒಳ್ಳೆಯ ಕಂಟೆಂಟ್ ಸಿಗುತ್ತೆ ಅನ್ನೋದು. ಆದ್ರೆ ನೇರವಾಗಿ ನಾಮಿನೇಟ್ ಆದವರು, ಬೇರೆಯವರಿಗೆ ಮಾರ್ಯಾದೆ ಕೊಡದೇ ತನಗೆ ಮಾತ್ರ ಬೇಕು ಅನ್ನೋರು, ಟಾಸ್ಕ್‌ನಲ್ಲಿ ನೆಟ್ಟಗೆ ಆಟ ಆಡದ ಅಶ್ವಿನಿಗೌಡರನ್ನ ಕ್ಯಾಪ್ಟನ್ ಮಾಡೋಕೆ ಬಿಗ್‌ಬಾಸ್ ಯಾಕೆ ಮುಂದಾದ್ರೂ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಈ

 

 

Kishor KV