ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಧನ್ವೀರ್ ವಿಚಾರಣೆಯಿಂದ ಎಸ್ಕೇಪ್ ಆಗಿದ್ರಾ?

ಜೈಲಿನಲ್ಲಿ ರಾಜಾತಿಥ್ಯ ವಿಡಿಯೋ ಲೀಕ್ ಕೇಸ್! – ಧನ್ವೀರ್ ವಿಚಾರಣೆಯಿಂದ ಎಸ್ಕೇಪ್ ಆಗಿದ್ರಾ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳು ಪಾರ್ಟಿ ಮಾಡಿರುವ ವಿಡಿಯೋ ವೈರಲ್‌ ಆದ ಪ್ರಕರಣದ ತನಿಖೆ ವೇಗವಾಗಿ ಸಾಗುತ್ತಿದೆ. ವಿಡಿಯೋ ವೈರಲ್‌ ಆದ ನಂತ್ರ ನಟ ದರ್ಶನ್‌ ಆಪ್ತ ಧನ್ವೀರ್​ಗೂ ಕಾನೂನು ಸಂಕಷ್ಟ ಎದುರಾಗಿದೆ. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಧನ್ವೀರ್​ನ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್‌, ಅಶ್ವಿನಿ ಗೌಡ ವಿರುದ್ಧ ಕೇಸ್!‌ – ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ಯಾರು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್ ಗೆ ವಿಚಾರಣೆಗೆ ಹಾಜರಾಗುವಂತೆ ಕಳೆದ 13ನೇ ತಾರೀಖು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗದೆ ವಕೀಲರ ಮೂಲಕ ಕಾಲಾವಕಾಶ ಕೇಳಿದ್ದ ಧನ್ವೀರ್ ಅವರು ಕಳೆದ ಸೋಮವಾರ ಠಾಣೆ ಬಳಿ ಬಂದರೂ ಕೂಡಾ ವಿಚಾರಣೆಗೆ ಹಾಜರಾಗಿರಲಿಲ್ಲ. ಊಟ ಮಾಡಿಕೊಂಡು ಬರಲು ಹೇಳಿದ್ದರೆ ಹೋಗಿದ್ದ ಧನ್ವೀರ್ ವಾಪಸ್ ಬಂದಿರಲಿಲ್ಲ. ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ವಿಚಾರಣೆ ಬಾರದಿದ್ದ ಧನ್ವೀರ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಧನ್ವೀರ್ ಗೆ ಪರಪ್ಪನ ಅಗ್ರಹಾರ ಪೊಲೀಸರಿಂದ ಪ್ರಶ್ನೆಗಳ ಸುರಿಮಳೆಯಾಗಿದೆ.

ವಕೀಲರ ಜೊತೆ ಆಗನಿಸಿದ್ದ ಧನ್ವೀರ್ ಅವರನ್ನು ಒಂದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಡಿಯೋ ವೈರಲ್ ಬಗ್ಗೆ ಧನ್ವೀರ್ಗೆ ಪ್ರಶ್ನೆಗಳ ಸುರಿಮಳೆಯಾಗಿದೆ. ಮುಂದಿನ ವಾರ ಮತ್ತೆ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು ಪೊಲೀಸರು ದಿನಾಂಕ ನಿಗದಿ ಮಾಡಿ ನೋಟೀಸ್ ನೀಡಲಿದ್ದಾರೆ. ಆಗ ಮತ್ತೆ ಧನ್ವೀರ್ ವಿಚಾರಣೆಗೆ ಹಾಜರಾಗಬೇಕಿರುತ್ತದೆ. ಸದ್ಯ ಧನ್ವೀರ್ ವಿಚಾರಣೆ ಮುಗಿಸಿ ಪರಪ್ಪನ ಅಗ್ರಹಾರ ಠಾಣೆಯಿಂದ ಹೊರಟಿದ್ದಾರೆ.

Shwetha M