ಕಿಚ್ಚ ಸುದೀಪ್‌, ಅಶ್ವಿನಿ ಗೌಡ ವಿರುದ್ಧ ಕೇಸ್!‌ – ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ಯಾರು?

ಕಿಚ್ಚ ಸುದೀಪ್‌, ಅಶ್ವಿನಿ ಗೌಡ ವಿರುದ್ಧ ಕೇಸ್!‌ – ಮಹಿಳಾ ಆಯೋಗಕ್ಕೆ ದೂರು ಕೊಟ್ಟಿದ್ಯಾರು?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಆರಂಭದಿಂಲೂ ಸದ್ದು ಮಾಡ್ತಿದೆ. ಮನರಂಜನೆ ಜೊತೆಗೆ ಜೊತೆಗೆ ವಿವಾದ ಕೂಡ ಸುದ್ದಿಯಲ್ಲಿದೆ. ಇಷ್ಟು ದಿನ ಶೋ ಆಯೋಜಕರು, ಸ್ಪರ್ಧಿಗಳ ವಿರುದ್ಧ ಕೇಸ್‌ ದಾಖಲಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್‌ ವಿರುದ್ಧ ಕೇಸ್‌ ದಾಖಲಾಗಿದೆ. ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.

ಇದನ್ನೂ ಓದಿ: ಅಶ್ವಿನಿ, ಜಾನ್ವಿ ಲೆಕ್ಕಾಚಾರ ಉಲ್ಟಾ ಮಾಡಿದ ಗಿಲ್ಲಿ – ರಾಶಿಕಾ ಹೆಸರು ಹೇಳಿ ಮನಗೆದ್ದ ಗಿಲ್ಲಿ

ಇತ್ತೀಚೆಗೆ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿತ್ತು. ರಿಷಾ ಬಟ್ಟೆ ಎಸೆದಿದ್ದಕ್ಕೆ ದೂರು ನೀಡಲಾಗಿತ್ತು. ಇದೀಗ ನಟ ಕಿಚ್ಚ ಸುದೀಪ್  ವಿರುದ್ಧವೇ ಮಹಿಳಾ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ಕಳೆದ ವಾರ ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದು, ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು ಅಂತಾ ಬೈದಿದ್ರು. ಇದು ಮಹಿಳೆಗೆ ಆದ ಅವಮಾನ, ದರ್ಪ ಅಂತಾ ಸಂಧ್ಯಾ ಪವಿತ್ರ ಅನ್ನೋರು ಆಯೋಗದಲ್ಲಿ ದೂರು ದಾಖಲು ಮಾಡಿದ್ದಾರೆ. ಜೊತೆಗೆ ಬಿಡದಿ ಠಾಣೆಗೂ ದೂರು ಕೊಟ್ಟಿದ್ದಾರೆ. ಇನ್ನು ಸಂಧ್ಯಾ ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ಅಳಲು ತೋಡಿಕೊಂಡಿದ್ದಾರೆ.

ಇನ್ನು ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧವೂ ಆಯೋಗದ ಮೆಟ್ಟಿಲೇರಿರುವ ಸಂಧ್ಯಾ ರಕ್ಷಿತಾರನ್ನು ಎಸ್ ಕ್ಯಾಟಗರಿ, ಎಲ್ಲಿಂದ ಬಂದಿದ್ಯಾ ಗೊತ್ತು ಅಂತಾ ನಿಂದಿಸಿದ್ದಕ್ಕೆ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ದೂರು ನೀಡಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆಗೆ ಅದೇನು ಗ್ರಹಚಾರವೋ ಗೊತ್ತಿಲ್ಲ. ದಿನದಿಂದ ದಿನಕ್ಕೆ ವಿವಾದಗಳಿಂದಲೇ ಬಿಗ್ ಬಾಸ್ ಹೌಸ್ ಸದ್ದು ಮಾಡುತ್ತಿದೆ.

Shwetha M