7 ಕೋಟಿ ದರೋಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್!‌ – ಹೊರ ರಾಜ್ಯ ಅಲ್ಲ.. ಬೆಂಗಳೂರು ಗ್ಯಾಂಗ್​ನಿಂದಲೇ ದರೋಡೆ!

7 ಕೋಟಿ ದರೋಡೆ ಕೇಸ್‌ಗೆ ಬಿಗ್‌ ಟ್ವಿಸ್ಟ್!‌ – ಹೊರ ರಾಜ್ಯ ಅಲ್ಲ.. ಬೆಂಗಳೂರು ಗ್ಯಾಂಗ್​ನಿಂದಲೇ ದರೋಡೆ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹಾಡಗಲೇ ನಡೆದ 7 ಕೋಟಿ 11 ಲಕ್ಷ ರೂ. ದರೋಡೆ ಪ್ರಕರಣದ ತನಿಖೆ ತೀವ್ರ ಪ್ರಗತಿಯಲ್ಲಿ ಸಾಗ್ತಾ ಇದೆ. ಈಗಾಗಲೇ ಪೊಲೀಸರು ಆರೋಪಿಗಳ ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ದರೋಡೆಕೋರರು ಪೊಲೀಸರ ಕಣ್ತಪ್ಪಿಸಲು ಹಲವು ರೀತಿಯ ಮಾಸ್ಟರ್ ಪ್ಲ್ಯಾನ್‌ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: JOKER ಆದ್ರಾ ಅಜಿತ್ ಅಗರ್ಕರ್? – ರಿಪ್ಲೇಸ್ ​ಮೆಂಟ್ ಬ್ಲಂಡರ್ ಯಾಕೆ?

ದರೋಡೆ ಪ್ರಕರಣದ ದೂರು ದಾಖಲಾಗುತ್ತಿದ್ದಂತೆ ಈ ದರೋಡೆ ಕರ್ನಾಟಕದ ಗ್ಯಾಂಗ್​​ನಿಂದ ಸಾಧ್ಯವಿಲ್ಲ. ಬದಲಾಗಿ  ಹೊರ ರಾಜ್ಯದ ಗ್ಯಾಂಗ್​ ಈ ದರೋಡೆ ಮಾಡಿರುಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದ್ರೆ, ಬೆಂಗಳೂರು ಮೂಲದ ಗ್ಯಾಂಗ್ ಈ ಕೃತ್ಯ ಎಸಗಿದೆ ಎನ್ನುವುದು ತನಿಖೆ ವೇಳೆ ಸ್ಫೋಟಕ ಅಂಶ ಬಯಲಿಗೆ ಬಂದಿದೆ. ತಕ್ಷಣವೇ ದರೋಡೆಕೋರರ ಬೇಟೆಗಿಳಿದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರುವರೆಗೂ ಕಾರ್ಯಾಚರಣೆ ನಡೆಸಿದ್ದಾರೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಚಿತ್ತೂರಿನಲ್ಲೇ ತೀವ್ರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ದರೋಡೆ ಮಾಡಿವರೆಲ್ಲ ಬೆಂಗಳೂರು ಮೂಲದವರು ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಬೆಂಗಳೂರು ಪೂರ್ವ ವಿಭಾಗದ ಬಾಣಸವಾಡಿಯ ಕಲ್ಯಾಣ್ ನಗರ ಗ್ಯಾಂಗ್​ನಿಂದ ದರೋಡೆ ನಡೆದಿ ಎಂದು ತಿಳಿದುಬಂದಿದ್ದು, ದರೋಡೆಯಲ್ಲಿ ಭಾಗಿಯಾದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಇನ್ನು ದರೋಡೆಕೊರರು ಎಲ್ಲಿಯೂ ಫೋನ್‌ ಮೂಲಕ ನಾರ್ಮಲ್ ಕಾಲ್‌ನಲ್ಲಿ ಮಾತನಾಡದೇ ವಾಟ್ಸಪ್‌ ಕಾಲ್‌ಗಳಲ್ಲಿ ಮಾತ್ರ ಮಾತನಾಡಿರುವುದು ತಿಳಿದು ಬಂದಿದೆ. ನಾರ್ಮಲ್ ಕಾಲ್ ಮಾತನಾಡಿದರೆ ಸುಲಭವಾಗಿ ಪೊಲೀಸರು ಪತ್ತೆ ಮಾಡ್ತಾರೆ ಅನ್ನೋ ಕಾರಣಕ್ಕೆ ಕಿರಾತಕರು ವಾಟ್ಸಪ್ ಕಾಲ್‌ಗಳಲ್ಲಿ ಮಾತ್ರ ಮಾತನಾಡಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ಪೊಲೀಸರಿಗೆ ಆರಂಭದಲ್ಲಿ ದರೋಡೆಕೋರರು ಬೆಂಗಳೂರಿನಿಂದ ಹೊರಗಡೆ ಹೋಗಿದ್ದಾರಾ ಅಥವಾ ಬೆಂಗಳೂರಿನಲ್ಲೇ ಇದ್ದಾರಾ ಅನ್ನೋದು ಗೊಂದಲವಾಗಿದೆ.

ವಾಟ್ಸಪ್ ಕಾಲ್ ಬಳಕೆ ಮಾಡಿರೋದು ಖಾತರಿಯಾಗುತ್ತಿದ್ದಂತೆ ಪೊಲೀಸರು ಸಿಸಿಟಿವಿಗಳ ಮೊರೆ ಹೋಗಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿ ನೋಡಿದಾಗ ದರೋಡೆಕೊರರ ಗ್ಯಾಂಗ್ ಬೆಂಗಳೂರು ದಾಟಿ ಹೋಗಿದ್ದಾರೆ ಅನ್ನೋದು ಪಕ್ಕ ಆಗಿದೆ. ದರೋಡೆಕೋರರ ಪತ್ತೆಗೆ ಆಂದ್ರಪ್ರದೇಶ ಹಾಗೂ ತಮಿಳುನಾಡಿಗೆ ಎರಡು ತಂಡ ಹೊದರೆ, ಬೆಂಗಳೂರಿನಲ್ಲಿ ಒಂದು ತಂಡ ಹುಡುಕಾಟ ನಡೆಸುತ್ತಿದೆ.

ಆಂದ್ರಪ್ರದೇಶದ ಚಿತ್ತೂರು ಬಳಿ ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆಯಾಗಿದೆ. ಚಿತ್ತೂರು ಸುತ್ತಮುತ್ತ ದರೋಡೆಕೊರರು ಇರುವ ಸಾದ್ಯತೆ ಹೆಚ್ಚಾಗಿರುವ ಕಾರಣ ಅಲ್ಲಿನ 20 ಕಿಲೋಮೀಟರ್ ಸುತ್ತಮುತ್ತದ ಸಿಸಿಟಿವಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಇಂದು (ನ.21) ದರೋಡೆಕೊರರನ್ನು ಪೊಲೀಸರು ಬಂಧಿಸುವ ಸಾದ್ಯತೆಗಳು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

Shwetha M