JOKER ಆದ್ರಾ ಅಜಿತ್ ಅಗರ್ಕರ್? – ರಿಪ್ಲೇಸ್ ಮೆಂಟ್ ಬ್ಲಂಡರ್ ಯಾಕೆ?
ಕರುಣ್, ಈಶ್ವರನ್, ಖಾನ್ ಕಾಣಲ್ವಾ?

ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತಿರೋ ಭಾರತ ಈಗ ಎರಡನೇ ಪಂದ್ಯವನ್ನ ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು. ಆದ್ರೆ ಟೀಂ ಇಂಡಿಯಾದ ಸೆಲೆಕ್ಷನ್ ಕಮಿಟಿ ಮಾತ್ರ ಜೋಕರ್ಸ್ ಥರ ಬಿಹೇವ್ ಮಾಡ್ತಿದೆ. ಒಂದ್ಕಡೆ ಶುಭ್ಮನ್ ಗಿಲ್ ರೂಲ್ಡ್ಔಟ್.. ಇನ್ನೊಂದ್ಕಡೆ ನಿತೀಶ್ ಕುಮಾರ್ ರೆಡ್ಡಿ ರೀ ಎಂಟ್ರಿ. ಈಗಿರೋ ಪ್ರಶ್ನೆ ಅಂದ್ರೆ ನೆಕ್ಸ್ಟ್ ಮ್ಯಾಚ್ಗೆ ಪ್ಲೇಯಿಂಗ್ 11 ಹೇಗಿರುತ್ತೆ ಅನ್ನೋದು. ರಿಪ್ಲೇಸ್ಮೆಂಟ್ನಲ್ಲಿ ದೊಡ್ಡ ಎಡವಟ್ಟನ್ನೇ ಮಾಡ್ತಿದ್ದಾರೆ.
ಇದನ್ನೂ ಓದಿ : ಇಂಜುರಿಯಿಂದ ಶ್ರೇಯಸ್, ಗಿಲ್ ಔಟ್ – KL ರಾಹುಲ್ ಗೆ ODI ಕ್ಯಾಪ್ಟನ್ಸಿ?
ನವೆಂಬರ್ 22 ರಿಂದ ಭಾರತ ಮತ್ತು ಸೌತ್ ಆಫ್ರಿಕಾ ನಡುವೆ 2ನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಮೊದಲನೇ ಪಂದ್ಯ ಸೋತಿರೋದ್ರಿಂದ ಭಾರತ ಮಸ್ಟ್ ಌಂಡ್ ಶುಡ್ ಈ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಬೇಕು. ಇಲ್ದಿದ್ರೆ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಶೇಪ್ಔಟ್ ಆದಂತೆ ಮತ್ತೊಂದು ವೈಟ್ ವಾಶ್ ಮುಖಭಂಗ ಗ್ಯಾರಂಟಿ. ಆದ್ರೆ ಬಿಸಿಸಿಐ ಆಟ ನೋಡ್ತಿದ್ರೆ ಈ ಪಂದ್ಯ ಗೆಲ್ಬೇಕು ಅನ್ನೋ ಇಂಟೆನ್ಷನ್ನೇ ಅವ್ರಲ್ಲಿ ಇದ್ದಂಗ್ ಕಾಣ್ತಿಲ್ಲ. ಯಾಕಂದ್ರೆ ಪ್ಲೇಯಿಂಗ್ 11ನಲ್ಲಿ ದೊಡ್ಡ ಬ್ಲಂಡರ್ನೇ ಮಾಡ್ತಿದ್ದಾರೆ.
ಶುಭ್ ಮನ್ ಗಿಲ್ ರೂಲ್ಡ್ ಔಟ್.. ಯಾರಿಗೆ ಚಾನ್ಸ್?
ಕುತ್ತಿಗೆ ನೋವಿನಿಂದ ಬಳಲ್ತಿರೋ ಶುಭ್ಮನ್ ಗಿಲ್ ಎರಡನೇ ಪಂದ್ಯಕ್ಕೆ ರೂಲ್ಡ್ ಔಟ್ ಆಗಿದ್ದಾರೆ. ಗಿಲ್ ಬದಲಿಗೆ ಪ್ಲೇಯಿಂಗ್ 11ಗೆ ಯಾರನ್ನ ಸೇರಿಸಿಕೊಳ್ತಾರೆ ಅನ್ನೋ ಕುತೂಹಲ ಇದೆ. ಯಾಕಂದ್ರೆ ಎರಡನೇ ಪಂದ್ಯಕ್ಕೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ತಂಡಕ್ಕೆ ಕಮ್ ಬ್ಯಾಕ್ ಮಾಡಿರೋದ್ರಿಂದ ಅವ್ರನ್ನ ಸೇರಿಸಿಕೊಳ್ತಾರಾ ಅಥವಾ ಸಾಯಿ ಸುದರ್ಶನ್ಗೆ ಅವಕಾಶ ಕೊಡ್ತಾರಾ ಇಲ್ಲ ದೇವದತ್ ಪಡಿಕ್ಕಲ್ ಚಾನ್ಸ್ ಪಡೀತಾರಾ ಅನ್ನೋ ಚರ್ಚೆಗಳಾಗ್ತಿದೆ. ಕಳೆದ ಪಂದ್ಯದಲ್ಲಿ ಸಾಯಿ ಸುದರ್ಶನ್ ಬದಲಿಗೆ ವಾಷಿಂಗ್ಟನ್ ಸುಂದರ್ ಗೆ ನಂಬರ್ 3 ಸ್ಲಾಟ್ನಲ್ಲಿ ಬ್ಯಾಟಿಂಗ್ಗೆ ಕಳ್ಸಿದ್ರು. ಬಟ್ ಅದು ಕ್ಲಿಕ್ ಆಗ್ಲಿಲ್ಲ. ನಂಬರ್ 6 ಅಥವಾ 7ನಲ್ಲಿ ಬ್ಯಾಟ್ ಬೀಸೋ ಸುಂದರ್ ನಂಬರ್ 3 ಅಂದಾಗ ಎಫೆಕ್ಟ್ ಆಗಿಯೇ ಆಗುತ್ತೆ. ಈಗ ಗಿಲ್ ವಿಚಾರದಲ್ಲೂ ಅದೇ ಆಗೋ ಚಾನ್ಸಸ್ ಇದೆ. ಯಾಕಂದ್ರೆ ಆಯ್ಕೆ ಸಮಿತಿಯ ಕೆಲ ನಿರ್ಧಾರಗಳು ಸೆಟ್ಬ್ಯಾಕ್ ಆಗುತ್ತೆ.
ಸೆಲೆಕ್ಟರ್ಸ್ ಎಡವಟ್ಟು!
ಗಿಲ್ ರೈಟ್ ಹ್ಯಾಂಡ್ ಬ್ಯಾಟ್ಸ್ ಮನ್, ರಿಪ್ಲೇಸ್ ಹಾಗೇ ಇರ್ಬೇಕು
ಇಂಡಿಯನ್ ಸಾಯಿಲ್ ಗಮನದಲ್ಲಿ ಇಟ್ಟುಕೊಂಡು ಪ್ಲೇಯರ್ಸ್ ಆಯ್ಕೆ
ಕರುಣ್ ನಾಯರ್, ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್
ಗಿಲ್ ಹೊರಬಿದ್ದಾಗ ಬೇರೆ ಬ್ಯಾಟರ್ ಗೆ ಅವಕಾಶ ಕೊಡಬಹುದಿತ್ತು
ಪ್ಲೇಯಿಂಗ್ 11ನಲ್ಲಿ ಪದೇಪದೆ ಬದಲಾವಣೆ
ಹೀಗೆ ಬಿಸಿಸಿಐ ಮಾಡ್ತಿರೋ ಕೆಲ ನಿರ್ಧಾರಗಳೇ ಪಂದ್ಯದ ದಿಕ್ಕು ತಪ್ಪಿಸ್ತಿದೆ. ಮೊದಲ ಪಂದ್ಯ ಸೋತ ಮೇಲೆ ಅಥವಾ ಗಿಲ್ ತಂಡದಿಂದ ಹೊರ ಬಿದ್ದ ಮೇಲಾದ್ರೂ ಎಚ್ಚೆತ್ತುಕೊಳ್ಬೋದಿತ್ತು. ಬಟ್ ಅದನ್ನ ಮಾಡ್ತಿಲ್ಲ. ಬಿಸಿಸಿಐ ಸೆಲೆಕ್ಷನ್ ಕಮಿಟಿ ಒಂಥರಾ ಜೋಕರ್ಸ್ ಆದ್ರಾ ಅನ್ನೋ ಥರ ಕಾಣ್ತಿದ್ದಾರೆ. 1980 ರ ದಶಕದಲ್ಲಿ ಮೋಹಿಂದರ್ ಅಮರ್ನಾಥ್ ಇಂಥದ್ದೇ ಸ್ಟೇಟ್ಮೆಂಟ್ ಕೊಟ್ಟಿದ್ರು.
1983ರಲ್ಲಿ ಭಾರತ ವಿಶ್ವಕಪ್ ಗೆಲುವಿನಲ್ಲಿ ಹೀರೋ ಆಗಿದ್ದ ಮೋಹಿಂದರ್ ಅಮರ್ನಾಥ್ ಕೂಡ ಭಾರತದ ಸೆಲೆಕ್ಷನ್ ಕಮಿಟಿಯನ್ನ ಬಂಚ್ ಆಫ್ ಜೋಕರ್ಸ್ ಅಂದಿದ್ರು. ಭಾರತ ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ವೈಸ್ ಕ್ಯಾಪ್ಟನ್ ಆಗಿ ಸೆಮಿಫೈನಲ್ ಮತ್ತು ಫೈನಲ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿನೂ ಪಡೆದಿದ್ದ ಅಮರ್ನಾಥ್ ಸೆಲೆಕ್ಷನ್ ಕಮಿಟಿಯನ್ನ ಜೋಕರ್ಸ್ ಅನ್ನೋಕೆ ಕಾರಣವೇ ಇಬ್ಬಗೆ ನೀತಿ. ಭಾರತ ತಂಡದ ಬೆಸ್ಟ್ ಪ್ಲೇಯರ್ ಆಗಿದ್ರೂ 1988ರಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದಿದ್ದ ಸರಣಿಗೆ ಆಯ್ಕೆ ಸಮಿತಿ ಅವ್ರನ್ನ ಆಯ್ಕೆ ಮಾಡಿರಲಿಲ್ಲ. ಇದ್ರಿಂದ ಸಿಟ್ಟಾಗಿದ್ದ ಅವ್ರು ಆಯ್ಕೆದಾರರು ಜೋಕರ್ಗಳ ಗುಂಪೇ ಎಂದು ಹೇಳಿಕೆ ನೀಡಿದ್ರು. ಯಾಕಂದ್ರೆ ಅಮರನಾಥ್ ಉತ್ತಮ ಫಾರ್ಮ್ನಲ್ಲಿದ್ದರೂ ಮತ್ತು ಭಾರತದ ಯಶಸ್ಸಿನಲ್ಲಿ (ಮುಖ್ಯವಾಗಿ 1983 ರ ವಿಶ್ವಕಪ್ ಗೆಲುವು) ನಿರ್ಣಾಯಕ ಪಾತ್ರ ವಹಿಸಿದ್ದರೂ, ಅವರನ್ನು ತಂಡದಿಂದ ಆಗಾಗ್ಗೆ ಕೈಬಿಡಲಾಗುತ್ತಿತ್ತು. ಇದಕ್ಕೆ ಕಾರಣ ಆ ಟೈಮಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ರಾಜ್ಸಿಂಗ್ ಡಂಗುರ್ಪುರ್ ಅವ್ರ ಜೊತೆಗಿನ ವೈಮನಸ್ಸು. ರಾಜ್ಸಿಂಗ್ರನ್ನ ಗುರಿಯಾಗಿಸಿ ಅಮರ್ನಾಥ್ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಸದ್ಯದ ಪರಿಸ್ಥಿತಿ ನೋಡಿದ್ರೆ ಈಗಿನ ಸೆಲೆಕ್ಷರ್ಸ್ ಕೂಡ ಅದೇ ಹಾದಿಯದ್ದೇ ಇದ್ದಾರೆ ಅನ್ಸುತ್ತೆ.

ನೋಡಿರಿ

