8 ಕ್ಯಾಪ್ಟನ್ಸ್ ಫಿಕ್ಸ್.. RR & KKR? – 2026ರ IPLನಲ್ಲಿ ಇಬ್ಬರಿಗೆ ಲಕ್?
RCB ಲಕ್ಕಿ ನಾಯಕ ಪಾಟಿದಾರ್

8 ಕ್ಯಾಪ್ಟನ್ಸ್ ಫಿಕ್ಸ್.. RR & KKR? – 2026ರ IPLನಲ್ಲಿ ಇಬ್ಬರಿಗೆ ಲಕ್?RCB ಲಕ್ಕಿ ನಾಯಕ ಪಾಟಿದಾರ್

2026ರ ಐಪಿಎಲ್ ಮಿನಿ ಆಕ್ಷನ್ ಮೇಲೆ ಕಣ್ಣಿಟ್ಟಿರೋ ಫ್ರಾಂಚೈಸಿಗಳು ಘಟಾನುಘಟಿಗಳ ಮೇಲೇ ಕಣ್ಣಿಟ್ಟಿದ್ದಾರೆ. ಕೋಟಿವೀರರೆಲ್ಲಾ ಅಖಾಡದಲ್ಲಿ ಇರೋದ್ರಿಂದ ಮಿನಿ ಹರಾಜು ರಂಗೇರೋದ್ರಲ್ಲಿ ಡೌಟೇ ಇಲ್ಲ. ಓಪನಿಂಗ್ ಬ್ಯಾಟರ್ಸ್ ರಿಂದ ಹಿಡ್ದು ಡೆತ್ ಓವರ್ ಸ್ಪೆಷಲಿಸ್ಟ್ ವರೆಗೂ ಸಾಕಷ್ಟು ಆಪ್ಶನ್ಸ್ ಇದೆ. ಯಾವ್ಯಾವ ಪ್ಲೇಯರ್ಸ್ ಯಾವ ತಂಡಕ್ಕೆ ಹೋಗ್ತಾರೆ ಅನ್ನೋ ಕ್ಯೂರಿಯಾಸಿಟಿ ನಡುವೆ ಅದೆರಡು ತಂಡಗಳ ಕ್ಯಾಪ್ಟನ್ ಯಾರಾಗಬಹುದು ಅನ್ನೋ ಕುತೂಹಲವೂ ಹೆಚ್ಚಾಗ್ತಿದೆ. 8 ಟೀಮ್​ಗಳಲ್ಲಿ ಕ್ಯಾಪ್ಟನ್ಸಿ ಬದಲಾವಣೆ ಇಲ್ಲದೇ ಇದ್ರೂ ಎರಡು ಫ್ರಾಂಚೈಸಿಗಳಂತೂ ಪಕ್ಕಾ ಕ್ಯಾಪ್ಟನ್ ಬದಲಾವಣೆ ಆಗುತ್ತೆ.

ಇದನ್ನೂ ಓದಿ : 10 ನೇ ಬಾರಿಗೆ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್  ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ – ಮೋದಿ ಭಾಗಿ

2025ರ ಐಪಿಎಲ್​ ​ಗೆ ಕಂಪೇರ್ ಮಾಡಿದ್ರೆ ಮುಂದಿನ ಆವೃತ್ತಿಗೆ ಸಾಕಷ್ಟು ಪ್ಲೇಯರ್ಸ್ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳೀತಾರೆ. ಸ್ಟಾರ್ ಪ್ಲೇಯರ್​ಗಳೇ ಬೇರೆ ಬೇರೆ ತಂಡ ಸೇರಿದ್ದಾರೆ. ಕೆಲವ್ರು ಟ್ರೇಡ್ ವಿಂಡೊ ಮೂಲಕ ಟೀಂ ಬಿಟ್ಟಿದ್ರೆ ಇನ್ನೂ ಕೆಲವ್ರು ಮಿನಿ ಆಕ್ಷನ್​ನಲ್ಲಿ ಹೊಸ ಟೀಮ್ ಸೇರಿಕೊಳ್ತಾರೆ. ಹೀಗಿರುವಾಗ 8 ತಂಡಗಳಲ್ಲಿ ಕಳೆದ ಸೀಸನ್​ನಲ್ಲಿದ್ದ ಕ್ಯಾಪ್ಟನ್​ಗಳೇ ಲೀಡ್ ಮಾಡ್ತಾರೆ. ಬಟ್ ಕೆಕೆಆರ್ ಮತ್ತು ಆರ್​ಆರ್​ನಲ್ಲಿ ಮಾತ್ರ ಚೇಂಜಸ್ ಆಗ್ಬೋದು.

2025ರ ಕ್ಯಾಪ್ಟನ್ ಗಳೇ ಕಂಟಿನ್ಯೂ!

ತಂಡ                                                  ನಾಯಕ                                ವರ್ಷ

ಚೆನ್ನೈ ಸೂಪರ್ ಕಿಂಗ್ಸ್               ರುತುರಾಜ್ ಗಾಯಕ್ವಾಡ್                    2025

ಸನ್‌ರೈಸರ್ಸ್ ಹೈದರಾಬಾದ್            ಪ್ಯಾಟ್ ಕಮ್ಮಿನ್ಸ್                         2024

ಗುಜರಾತ್ ಟೈಟಾನ್ಸ್                    ಶುಭಮನ್ ಗಿಲ್                         2024

ಲಕ್ನೋ ಸೂಪರ್ ಜೈಂಟ್ಸ್                ರಿಷಭ್ ಪಂತ್                           2025

ರಾಯಲ್ ಚಾಲೆಂಜರ್ಸ್ ಬೆಂಗಳೂರು       ರಜತ್ ಪಾಟಿದಾರ್                     2025

ದೆಹಲಿ ಕ್ಯಾಪಿಟಲ್ಸ್                         ಅಕ್ಷರ್ ಪಟೇಲ್                      2025

ಪಂಜಾಬ್ ಕಿಂಗ್ಸ್                         ಶ್ರೇಯಸ್ ಅಯ್ಯರ್                    2025

ಮುಂಬೈ ಇಂಡಿಯನ್ಸ್                     ಹಾರ್ದಿಕ್ ಪಾಂಡ್ಯ                      2024

ಸೋ ಇಲ್ಲಿ 8 ತಂಡಗಳನ್ನ ಅಬ್ಸರ್ವ್ ಮಾಡಿದಾಗ ಲಾಂಗ್ ಕ್ಯಾಪ್ಟನ್ ಅಂತಾ ಯಾರೂ ಇಲ್ಲ. 2024ರಿಂದ ಈಚೆಗೆ ಕ್ಯಾಪ್ಟನ್ ಆಗಿರೋರೇ ಎಲ್ರೂ ಇರೋದು. ಌಂಡ್ 2025ರ ಐಪಿಎಲ್ ಮೆಗಾ ಹರಾಜಿನ ಬಳಿಕ ಕೆಲ ಫ್ರಾಂಚೈಸಿಗಳು ಹೊಸ ನಾಯಕರನ್ನ ನೇಮಕ ಮಾಡಿವೆ. ಌಂಡ್ 2026ಕ್ಕೆ ಎರಡು ತಂಡಗಳಲ್ಲಿ ನಾಯಕತ್ವ ಬದಲಾಗೋದು ಗ್ಯಾರಂಟಿ.

ಕೆಕೆಆರ್ ಮತ್ತು ರಾಜಸ್ಥಾನ ತಂಡಗಳಿಗೆ ಹೊಸ ನಾಯಕತ್ವ?

2024ರ ಐಪಿಎಲ್ ಚಾಂಪಿಯನ್ ಆಗಿದ್ದ ಕೆಕೆಆರ್ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಎಫೆಕ್ಟೀವ್ ಆಗಿರಲಿಲ್ಲ. ಹೀಗಾಗಿ ಮುಂದಿನ ಸೀಸನ್​ಗೆ ಹೊಸಬರಿಗೆ ನಾಯಕತ್ವ  ನೀಡೋ ಸಾಧ್ಯತೆ ಇದೆ. ವೆಂಕಟೇಶ್ ಅಯ್ಯರ್ ತಂಡದಿಂದ ಹೊರ ಬಿದ್ದಿರೋದ್ರಿಂದ ಯಾರಿಗೆ ನಾಯಕತ್ವ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ತಮ್ಮ ನಾಯಕ ಸಂಜು ಸ್ಯಾಮ್ಸನ್ ರನ್ನ ಸಿಎಸ್​ಕೆಗೆ ಟ್ರೇಡ್ ಮಾಡಿದೆ. ಹಾಗೇ ರವೀಂದ್ರ ಜಡೇಜಾರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಬಹುಶಃ ಜಡ್ಡುಗೆ ಕ್ಯಾಪ್ಟನ್ಸಿ ಸಿಗುತ್ತೆ ಅನ್ನೋ ಟಾಕ್ ಇದೆ. ಬಟ್ ಕನ್ಫರ್ಮ್ ಇಲ್ಲ. ಹೀಗಿದ್ರೂ ಈ ಎರಡೂ ತಂಡಗಳ ನಾಯಕರು ಬದಲಾವಣೆ ಆಗೋದಂತೂ ಗ್ಯಾರಂಟಿ ಇದೆ.

Shantha Kumari