ಇಂಜುರಿಯಿಂದ ಶ್ರೇಯಸ್, ಗಿಲ್ ಔಟ್ – KL ರಾಹುಲ್ ಗೆ ODI ಕ್ಯಾಪ್ಟನ್ಸಿ?
RO-KO ಖದರ್.. ಹೇಗಿರುತ್ತೆ ಟೀಂ?

ಇಂಜುರಿಯಿಂದ ಶ್ರೇಯಸ್, ಗಿಲ್ ಔಟ್ – KL ರಾಹುಲ್ ಗೆ ODI ಕ್ಯಾಪ್ಟನ್ಸಿ?RO-KO ಖದರ್.. ಹೇಗಿರುತ್ತೆ ಟೀಂ?

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ನವೆಂಬರ್ 22ರಿಂದ ಎರಡನೇ ಟೆಸ್ಟ್ ಪಂದ್ಯ ಸ್ಟಾರ್ಟ್ ಆಗುತ್ತೆ. ಬಳಿಕ ಉಭಯ ತಂಡಗಳ ನಡುವೆ ನವೆಂಬರ್ 30ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭ ಆಗಲಿದೆ. ಇನ್ನೇನು ಎರಡ್ಮೂರು ದಿನಗಳಲ್ಲಿ ಟೀಂ ಅನೌನ್ಸ್ ಆಗಬಹುದು. ಬಟ್ ಈಗಿರೋ ಪ್ರಶ್ನೆ ಅಂದ್ರೆ ಏಕದಿನ ಸರಣಿಗೆ ಕ್ಯಾಪ್ಟನ್ & ವೈಸ್ ಕ್ಯಾಪ್ಟನ್ ಯಾರು ಅನ್ನೋದು. ಯಾಕಂದ್ರೆ ಕಳೆದ ಬಾರಿ ಆಸ್ಟ್ರೇಲಿಯಾ ಸಿರೀಸ್​ಗೆ ನಾಯಕ ಮತ್ತು ಉಪನಾಯಕ ಆಗಿದ್ದ ಇಬ್ರೂ ಇಂಜುರಿಗೊಂಡಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಬೆಂಗಳೂರಿನಲ್ಲಿ ದರೋಡೆ! – ನೋಡ ನೋಡುತ್ತಿದ್ದಂತೆ 7 ಕೋಟಿ ದೋಚಿದ ಖದೀಮರು!

ನವೆಂಬರ್ 30 ರಿಂದ ಆರಂಭವಾಗಲಿರುವ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನ ಶುಭ್​ಮನ್ ಗಿಲ್ ಲೀಡ್ ಮಾಡೋದು ಕಷ್ಟ ಇದೆ. ಕುತ್ತಿಗೆ ನೋವಿನಿಂದ ಬಳಲ್ತಿರೋ ಶುಭ್​ಮನ್​ ಗಿಲ್​ ಈಗ ಆಲ್ರೆಡಿ ಮೊದಲ ಟೆಸ್ಟ್ ಪಂದ್ಯ ಆಡಿಲ್ಲ. ಎರಡನೇ ಟೆಸ್ಟ್ ಪಂದ್ಯ ಆಡೋದು ಇಲ್ಲ. ಹೀಗಿರುವಾಗ ಏಕದಿನ ಸರಣಿ ವೇಳೆಗೆ ಕಂ ಬ್ಯಾಕ್ ಮಾಡೋ ಚಾನ್ಸಸ್ ಕೂಡ ಕಮ್ಮಿ ಇದೆ. ಮತ್ತೊಂದೆಡೆ ವೈಸ್ ಕ್ಯಾಪ್ಟನ್ ಆಗಿರುವ ಶ್ರೇಯಸ್ ಅಯ್ಯರ್ ಕೂಡ ಇಂಜುರಿಯಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಆಗಿದ್ರು. ಆದ್ರೆ ಕೊನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಪಕ್ಕೆಲುಬು ಗಾಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ರಿಕವರ್ ಆಗಿದ್ರೂ ಇನ್ನೂ ಕೆಲ ವಾರಗಳು ಮೈದಾನಕ್ಕಿಳಿಯಲ್ಲ. ಹೀಗಿರುವಾಗ ಭಾರತದ ಕ್ಯಾಪ್ಟನ್ಸಿ ಯಾರಿಗೆ ಅಂದ್ರೆ ಅಲ್ಲಿ ಕೇಳಿ ಬರ್ತಿರೋ ಹೆಸರು ಕೆಎಲ್ ರಾಹುಲ್.

ಕೆಎಲ್ ರಾಹುಲ್ ಗೆ ಒಲಿಯುತ್ತಾ ಕ್ಯಾಪ್ಟನ್ಸಿ?

ಗಿಲ್ ಮತ್ತು ಅಯ್ಯರ್ ಆಬ್ಸೆನ್ಸ್​ನಲ್ಲಿ ಬಿಸಿಸಿಯ ಮ್ಯಾನೇಜ್​ಮೆಂಟ್ ಹೊಸ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಈ ಹಿಂದೆ ಭಾರತವನ್ನು ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಕಳೆದ ಮಾರ್ಚ್​ನಲ್ಲಿ ಭಾರತವನ್ನು ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಕೊಂಡೊಯ್ದ ರೋಹಿತ್ ಶರ್ಮಾ ಬೆಸ್ಟ್ ಚಾಯ್ಸ್ ಆಗಬಹುದು. ಆದರೆ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ. ಮುಂಬೈನ ಬಲಗೈ ಬ್ಯಾಟ್ಸ್‌ಮನ್‌ ರೋಹಿತ್​ರನ್ನ ಕಳೆದ ತಿಂಗಳಷ್ಟೇ ಭಾರತದ ಏಕದಿನ ನಾಯಕ ಸ್ಥಾನದಿಂದ ಕೆಳಗಿಳಿಸಿ ಗಿಲ್​ಗೆ ಪಟ್ಟ ಕಟ್ಟಿದ್ರು. ಇನ್ನು ಹಾರ್ದಿಕ್ ಪಾಂಡ್ಯ ಏಕದಿನ ತಂಡದಲ್ಲಿ ಚಾನ್ಸ್ ಪಡೀತಿಲ್ಲ. ಹಾಗೇ ಕೊಹ್ಲಿ ಬಗ್ಗೆ ನೋಡೋದಾದ್​ರೆ 2021 ರಿಂದ ಭಾರತವನ್ನು ಮುನ್ನಡೆಸಿಲ್ಲ. ಹೀಗಾಗಿ ಗಿಲ್ ಮತ್ತು ಅಯ್ಯರ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಳ್ಬೋದು.

ಗಿಲ್ ಆಬ್ಸೆನ್ಸ್ ನಲ್ಲಿ ಯಶಸ್ವಿ ಜೈಸ್ವಾಲ್ ಓಪನರ್?

ಇನ್ನು ಏಕದಿನ ತಂಡದಲ್ಲಿ ಶುಭ್​ಮನ್ ಗಿಲ್ ಆಡದೇ ಇದ್ರೆ ಯಶಸ್ವಿ ಜೈಸ್ವಾಲ್ ಓಪನರ್ ಆಗಿ ಅವಕಾಶ ಪಡೀಬಹುದು. ಹಾಗೇ ದಕ್ಷಿಣ ಆಫ್ರಿಕಾ ಎ ವಿರುದ್ಧದ ಮೊದಲ ಎರಡು ಅನಧಿಕೃತ ಏಕದಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರುತುರಾಜ್ ಗಾಯಕ್ವಾಡ್ ಬ್ಯಾಕಪ್ ಓಪನರ್ ಆಗಬಹುದು. ಇನ್ನು ಟಿ-20ಐ ಸ್ಟಾರ್ ತಿಲಕ್ ವರ್ಮಾ ಶ್ರೇಯಸ್ ಅಯ್ಯರ್ ಬದಲಿಗೆ 4 ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗುವ ನಿರೀಕ್ಷೆಯಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಗೆ ಭಾರತದ ಬ್ಯಾಕಪ್ ವಿಕೆಟ್ ಕೀಪರ್ ಆಗಿದ್ದ ಧ್ರುವ್ ಜುರೆಲ್ ಬದಲಿಗೆ ರಿಷಭ್ ಪಂತ್ ಕೂಡ ಏಕದಿನ ತಂಡಕ್ಕೆ ಕಂ ಬ್ಯಾಕ್ ಮಾಡೋ ಚಾನ್ಸಸ್ ಇದೆ.

ಏಕದಿನ ಸರಣಿಗೆ ಸಂಭಾವ್ಯ ತಂಡ!

ಕೆಎಲ್ ರಾಹುಲ್

ರೋಹಿತ್ ಶರ್ಮಾ

ಯಶಸ್ವಿ ಜೈಸ್ವಾಲ್

ರುತುರಾಜ್ ಗಾಯಕ್ವಾಡ್

ವಿರಾಟ್ ಕೊಹ್ಲಿ

ತಿಲಕ್ ವರ್ಮಾ

ನಿತೀಶ್ ಕುಮಾರ್ ರೆಡ್ಡಿ

ರಿಷಭ್ ಪಂತ್

ಅಕ್ಷರ್ ಪಟೇಲ್

ವಾಷಿಂಗ್ಟನ್ ಸುಂದರ್

ಕುಲದೀಪ್ ಯಾದವ್

ಅರ್ಷ್ದೀಪ್ ಸಿಂಗ್

ಹರ್ಷಿತ್ ರಾಣಾ

ಮೊಹಮ್ಮದ್ ಸಿರಾಜ್

ಇಷ್ಟು ಆಟಗಾರರು ಚಾನ್ಸ್ ಪಡ್ಕೊಳ್ಳಬಹುದು. ಇನ್ನು ಏಕದಿನ ಸರಣಿಗೆ ವಿಶೇಷ ಏನಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡುವಂತ ಪಂದ್ಯಗಳು. ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಲಾಸ್ಟ್ ಮ್ಯಾಚಲ್ಲಿ ಇಬ್ಬರ ಪಾರ್ಟ್ನರ್​ಶಿಪ್ ತುಂಬಾನೇ ಚೆನ್ನಾಗಿತ್ತು. 150ಪ್ಲಸ್ ರನ್ಸ್ ಬಂದಿತ್ತು. ಈಗ ಅದೇ ಖದರ್​ನಲ್ಲೇ ಸೌತ್ ಆಫ್ರಿಕಾ ವಿರುದ್ಧವೂ ಬ್ಯಾಟ್ ಬೀಸೋದನ್ನ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.

Shantha Kumari