ಪದೇ ಪದೇ ಹೋಗ್ತೀನಿ ಅಂತಾರೆ ಅಶ್ವಿನಿ ಗೌಡ – ಇವರ ಆಸೆ ಈಡೇರಿಸ್ತಾರಾ ಬಿಗ್‌ಬಾಸ್?
ಅಶ್ವಿನಿ ಗೌಡ ಆರೋಗ್ಯ ಸಮಸ್ಯೆ ಹೇಳಿದರೂ ಬಿಗ್ಬಾಸ್ ಹೊರಗೆ ಕಳಿಸೋದಿಲ್ವಾ?

ಪದೇ ಪದೇ ಹೋಗ್ತೀನಿ ಅಂತಾರೆ ಅಶ್ವಿನಿ ಗೌಡ – ಇವರ ಆಸೆ ಈಡೇರಿಸ್ತಾರಾ ಬಿಗ್‌ಬಾಸ್?ಅಶ್ವಿನಿ ಗೌಡ ಆರೋಗ್ಯ ಸಮಸ್ಯೆ ಹೇಳಿದರೂ ಬಿಗ್ಬಾಸ್ ಹೊರಗೆ ಕಳಿಸೋದಿಲ್ವಾ?

ಒಂದು ಸಲ ಓಕೆ. ಎರಡು ಸಲ ಓಕೆ. ಪದೇ ಪದೇ ನಾನಿಲ್ಲಿ ಇರಲ್ಲ. ನಾನು ಹೋಗ್ತೀನಿ ಅಂತಾ ಅಶ್ವಿನಿ ಗೌಡ ಹೇಳುತ್ತಿದ್ದಾರೆ. ಈ ಬಾರಿಯಾದರೂ ಅಶ್ವಿನಿ ಗೌಡ ಕೋರಿಕೆಯನ್ನು ಬಿಗ್‌ಬಾಸ್ ಈಡೇರಿಸುತ್ತಾರಾ?. ಕೋಪದಲ್ಲಿ ಅಬ್ಬರಿಸಿದ ಅಶ್ವಿನಿ ಗೌಡ ಮನೆಯಿಂದ ಹೊರಹೋಗುವುದು ನಿಶ್ಚಿತವೇ ಅನ್ನೋ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಸೇಡಿನ ಜ್ವಾಲೆ – ಏಕವಚನದಲ್ಲೇ ಕಿತ್ತಾಡಿಕೊಂಡು ರಂಪಾಟ

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮಾತ್ರ ಏಕವಚನದಲ್ಲಿ ಮಾತಾಡಬೇಕು. ಇನ್ನು ಉಳಿದವರು ಮಾತಾಡುವಂತಿಲ್ಲ. ಮಾತಾಡಿದರೆ, ಅಶ್ವಿನಿ ಗೌಡ ಅವರ ಮರ್ಯಾದೆಗೆ ಪೆಟ್ಟು ಬೀಳುತ್ತಿದೆ. ಡ್ರಮ್ ಟಾಸ್ಕ್ ವೇಳೆ ಗಿಲ್ಲಿ ಜೊತೆ ಜಗಳ ಮಾಡುವಾಗಲೂ ಅಶ್ವಿನಿಯವರು ಏಕವಚನದಲ್ಲಿಯೇ ಮಾತಾಡಿದ್ದರು. ನಂತರ ಬಂದು ಕಣ್ಣೀರಿಟ್ಟಿದ್ದು ಕೂಡಾ ಇವರೇ. ಇದೀಗ ಮನೆಯ ಕ್ಯಾಪ್ಟನ್ ರಘು ಜೊತೆ ಜಗಳವಾಡಿದ್ದಾರೆ.

ರಘು ಬಿಗ್‌ಬಾಸ್ ಮನೆಗೆ ಬಂದಾಗಿನಿಂದಲೂ ಸಹನೆ ಕಳೆದುಕೊಂಡಿರೋದು ಎಲ್ಲೂ ಕಾಣಿಸಿಲ್ಲ. ಆದರೆ, ಅಶ್ವಿನಿ ಗೌಡ (Ashwini Gowda) ವರ್ತನೆಯಿಂದ ಕಂಟ್ರೋಲ್ ತಪ್ಪಿದ್ದಾರೆ. ಸಹನೆ ಕಳೆದುಕೊಂಡು ಕೂಗಾಡಿದ್ದಾರೆ. ಕ್ಯಾಪ್ಟನ್ ರಘು ಅಶ್ವಿನಿ ಅವರಿಗೆ ಕೆಲಸ ಹೇಳಿದ್ದಾರೆ. ಇದರಿಂದ ಕೋಪಗೊಂಡ ಅಶ್ವಿನಿ ಗೌಡ ಬ್ಯಾಕ್ ಪೇನ್ ಇದೆ, 10 ನಿಮಿಷ ಆದ್ಮೇಲೆ ನೀವು ಹೇಳುವ ಕೆಲಸ ಮಾಡುವೆ ಅಂತಾರೆ. ಅದಕ್ಕೆ ರಘು 10 ನಿಮಿಷದಲ್ಲಿ ಬ್ಯಾಕ್ ಪೇನ್ ಹೋಗುತ್ತಾ? ಕೆಲಸ ಮಾಡೋಕೆ ಆಗಲ್ಲ. ಸುಮ್ನೆ ಎಲ್ಲ ಮಾತಾಡ್ತಾರೆ ಅಂತಲೇ ಹೇಳ್ತಾರೆ. ಇದರಿಂದ ರೊಚ್ಚಿಗೆದ್ದ ಅಶ್ವಿನಿ ಗೌಡ, ಮಾಡಲ್ಲ ಹೋಗ್ರಿ ಅಂತಲೇ ಹೇಳ್ತಾರೆ. ಆಗ ರಘು ಮಾಡಬೇಡ ಹೋಗು ಅಂತಾರೆ. ಈ ಮಾತು ಕೇಳಿದ ಅಶ್ವಿನಿ ಗೌಡ ಕೆರಳಿ ಕೆಂಡ ಆಗುತ್ತಾರೆ. ಅದ್ಹೇಗೆ ಏಕವಚನದಲ್ಲಿ ಮಾತಾಡಿದ್ರಿ ನೀವು ಅಂತಲೇ ಜಗಳಕ್ಕೆ ಹೋಗ್ತಾರೆ. ರಘು ಮೇಲೆ ಜಗಳಕ್ಕೆ ಬರೋ ಅಶ್ವಿನಿ ಗೌಡ ಕೈ ತೋರಿಸುತ್ತಾರೆ. ಇದರಿಂದ ಸಿಟ್ಟಿಗೇಳುವ ರಘು ಕೈ ತೋರಿಸಬೇಡ ಅಂತಲೇ ಹೇಳ್ತಾರೆ. ಇದರಿಂದ ಇವರ ಜಗಳ ಜೋರಾಗಿಯೇ ಆಗುತ್ತದೆ. ಜಗಳ ಮುಗಿದ ಮೇಲೆ ಅಶ್ವಿನಿ ಗೌಡ ಕಣ್ಣೀರು ಹಾಕುತ್ತಾರೆ. ನಾನು ಇರೋದೇ ಇಲ್ಲ. ಬಿಗ್ ಬಾಸ್ ಅವರನ್ನ ಈಗಲೇ ಕರೆಸಿ, ನಾನು ಮನೆ ಬಿಟ್ಟು ಹೋಗುತ್ತೇನೆ ಅಂತಾ ಹೇಳುತ್ತಾರೆ. ಅಶ್ವಿನಿ ಗೌಡ ಅವರಿಗೆ ಆರೋಗ್ಯ ಸಮಸ್ಯೆಯಿದೆ. ಮನೆಯಿಂದ ಹೊರಗೆ ಹೋಗ್ತೀನಿ ಅಂತಾ ಸ್ವತಃ ಅವರೇ ಹೇಳುತ್ತಿದ್ದಾರೆ. ಈಗ ಬಿಗ್‌ಬಾಸ್ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.

Sulekha