ರಕ್ಷಿತಾ ಮೇಲಿನ ಸಿಟ್ಟಿಗೆ ರಘು ಸೇಡು – ನಾಮಿನೇಟ್ ಮಾಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ್ರಾ?
ಕರ್ಮ ರಿಟರ್ನ್ ಎಂದ ಗಿಲ್ಲಿ - ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ

ರಕ್ಷಿತಾ ಮೇಲಿನ ಸಿಟ್ಟಿಗೆ ರಘು ಸೇಡು – ನಾಮಿನೇಟ್ ಮಾಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ್ರಾ?ಕರ್ಮ ರಿಟರ್ನ್ ಎಂದ ಗಿಲ್ಲಿ - ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಮನೆಯಲ್ಲಿ ರಘು, ರಕ್ಷಿತಾ, ಗಿಲ್ಲಿ ಸ್ನೇಹ ನೋಡೋಕೆ ಚೆಂದ. ಮೂವರು ಕೂಡಾ ತುಂಬಾ ಆತ್ಮೀಯರಾಗಿ ಇರುತ್ತಾರೆ. ಹೀಗಿರುವಾಗಲೇ ರಕ್ಷಿತಾ ಶೆಟ್ಟಿ ದುಡುಕಿನ ನಿರ್ಧಾರಕ್ಕೆ ನೊಂದಿದ್ದರು ರಘು. ಕಾರಣವಿಲ್ಲದೆ ರಘುವನ್ನು ರಕ್ಷಿತಾ ನಾಮಿನೇಟ್ ಮಾಡಿದ್ದರು. ಇದೀಗ ರಘು ಕೂಡಾ ತನಗಾದ ನೋವು, ಹಾಗೂ ರಕ್ಷಿತಾ ದುಡುಕಿನ ನಿರ್ಧಾರವನ್ನೇ ಮುಂದಿಟ್ಟುಕೊಂಡು, ನೇರವಾಗಿ ರಕ್ಷಿತಾರನ್ನ ನಾಮಿನೇಟ್ ಮಾಡಿದ್ದಾರೆ.

ಇದನ್ನೂ ಓದಿ:ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಸೇಡಿನ ಜ್ವಾಲೆ – ಏಕವಚನದಲ್ಲೇ ಕಿತ್ತಾಡಿಕೊಂಡು ರಂಪಾಟ

ಬಿಗ್‌ಬಾಸ್ ಮನೆಯಲ್ಲಿ ಸೇಡಿಗೆ ಸೇಡು, ಜಗಳಕ್ಕೆ ಜಗಳ ಇರೋದು ಕಾಮನ್. ಆದರೆ, ಕ್ಯಾಪ್ಟನ್ ರಘು ಅದೆಷ್ಟೇ ಬೇಜಾರಾದರೂ, ತಾಳ್ಮೆಯಿಂದಲೇ ಎಲ್ಲರನ್ನೂ ಸಹಿಸಿಕೊಳ್ಳುತ್ತಾರೆ. ರಘು ಅವರಿಗೆ ಗಿಲ್ಲಿ ಮತ್ತು ರಕ್ಷಿತಾ ಮೇಲೆ ತುಂಬಾ ಪ್ರೀತಿ. ಆದರೆ, ಲಾಸ್ಟ್ ವೀಕ್ ರಕ್ಷಿತಾ ಶೆಟ್ಟಿ ರಘು ಅವರನ್ನ ನಾಮಿನೇಟ್ ಮಾಡಿದ್ದರು. ಇದು ರಘು ಅವರಿಗೆ ಬೇಸರವಾಗಿತ್ತು. ಈಗ ಇದೇ ಕಾರಣ ನೀಡಿ ರಘು ರಕ್ಷಿತಾರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.

ಈ ರೀತಿ ಒಬ್ಬರಿಗೊಬ್ಬರು ಸೇಡಿಗೆ ಸೇಡು ತೀರಿಸಿಕೊಂಡರೆ, ಕರ್ಮ ರಿಟರ್ನ್ ಎಂದು ಗಿಲ್ಲಿ ಹೇಳುತ್ತಾರೆ. ಆಗ ಇದು ನನಗೆ ಆಗಬೇಕಿತ್ತು ಎಂದ ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಜೊತೆಗೆ ರಘು ಅವರ ಬಳಿ ಹೋಗಿ, ನನಗೆ ಬೇಸರವಿಲ್ಲ. ನೀವು ಮಾಡಿದ್ದು ಸರಿಯಾಗಿದೆ. ನನಗೆ ಇದು ಆಗಬೇಕಿತ್ತು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನಾಮಿನೇಷನ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಅನ್ನೋದು ನನಗೆ ಗೊತ್ತಾಗಿದೆ ಎಂದು ತಪ್ಪು ಒಪ್ಪಿಕೊಂಡಿದ್ದಾರೆ. ರಕ್ಷಿತಾ ಅವರ ಈ ಮಾತು, ರಘು ಮಾಡಿದ್ದೇ ಸರಿ ಎಂಬ ಧೋರಣೆಗೆ ಅಭಿಮಾನಿಗಳು ಕೂಡಾ ಮೆಚ್ಚಿಕೊಂಡಿದ್ದಾರೆ.

Sulekha