ಮಲ್ಲೇಶ್ವರಂ ಮಂತ್ರಿ ಮಾಲ್ಗೆ ಬಿತ್ತು ಬೀಗ! – ಏಕಾಏಕಿ ಅಧಿಕಾರಿಗಳು ಸೀಜ್ ಮಾಡಿದ್ದೇಕೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳ ವಿರುದ್ಧ ಪಾಲಿಕ ಕ್ರಮ ಕೈಗೊಳ್ಳುತ್ತಿದೆ. ಇದೀಗ ಇದ್ರ ಬಿಸಿ ಮಂತ್ರಿ ಮಾಲ್‌ಗೂ ತಟ್ಟಿದೆ. ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಮಂತ್ರಿಮಾಲ್ಗೆ ಅಧಿಕಾರಿಗಳು ಮತ್ತೆ ಬೀಗ ಹಾಕಿದ್ದಾರೆ.
ಇದನ್ನೂ ಓದಿ: ಪೋಕ್ಸೋ ಕೇಸ್ನಲ್ಲಿ ಬಿಎಸ್ ಯಡಿಯೂರಪ್ಪ ಮತ್ತೆ ಹಿನ್ನಡೆ- ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ನಿಂದ ಸಮನ್ಸ್!
ಮಂತ್ರಿ ಮಾಲ್ ಮಾಲಕರು ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿದ್ರು. ಬರೋಬ್ಬರಿ 30,81,45,600 ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಧಿಕಾರಿಗಳು ಮಾಲ್ ಅನ್ನು ಸೀಜ್ ಮಾಡಿ ನೋಟಿಸ್ ಕಳುಹಿಸಿದ್ದಾರೆ. ಬೀಗ ಹಾಕಿದ್ದರಿಂದ ಮಾಲ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಇತ್ತ ಮಾರ್ಷಲ್ಸ್ ಮತ್ತು ಪೊಲೀಸರು ಮಾಲ್ ಬಳಿಯೇ ಬೀಡುಬಿಟ್ಟಿದ್ದಾರೆ.
ಅಂದ್ಹಾಗೆ ಮಂತ್ರಿ ಮಾಲ್‌ಗೆ ಬೀಗ ಹಾಕಿರೋದು ಇದೇ ಮೊದಲೇನಲ್ಲ. ಹಲವು ಬಾರಿ ಮಾಲ್ ಅನ್ನು ಸೀಜ್ ಮಾಡಲಾಗಿತ್ತು. 2020 ರಲ್ಲಿ ಬರೋಬ್ಬರಿ 42,63,40,874 ರೂ ಆಸ್ತಿ ತೆರಿಗೆ ಕಟ್ಟದೇ ಇದ್ದಿದ್ದಕ್ಕೆ ಮತ್ತು BBMP ಗೆ ಕೊಟ್ಟ 10 ಕೋಟಿ ರೂ. ಚೆಕ್ ಬೌನ್ಸ್ ಆಗಿದ್ದಕ್ಕೆ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರೂ ಮಾಲ್ ಆಡಳಿತವು ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ. ಅಂತೆಯೇ 2021 ರಲ್ಲಿ 20,33,34,828 ರೂ ಆಸ್ತಿ ತೆರಿಗೆ ಬಾಕಿ ಇದ್ದ ಕಾರಣ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನೂ ನೀಡಲಾಗಿತ್ತು.
2023ರಲ್ಲಿ 32 ಕೋಟಿ ವರೆಗೂ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್ಗೆ ಪಾಲಿಕೆ ಒನ್ ಟೈಂ ಪೇಮೆಂಟ್ಗೆ ಅವಕಾಶ ಕೊಟ್ಟಿತ್ತು. ಆದರೆ ಸೆಟಲ್ ಆಗದಿರುವ ಕಾರಣ ಮಾಲ್ಗೆ ಬೀಗ ಜಡಿದಿತ್ತು. ಮತ್ತೊಮ್ಮೆ 2024ರಲ್ಲಿಯೂ ಇದೇ ತಪ್ಪು ಮಾಡಿದ್ದ ಮಂತ್ರಿ ಮಾಲ್, ಸುಮಾರು 50 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಹಿನ್ನಲೆ ಮಂತ್ರಿ ಮಾಲ್ನ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಬೋರ್ಡ್ ಹಾಕಿ, ಪಾಲಿಕೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದೀಗ ಮತ್ತೊಮ್ಮೆ ತೆಗಿ ವಿಷಯದಲ್ಲಿಯೇ ಮಾಲ್ಗೆ ಬೀಗ ಬಿದ್ದಿದೆ.

ನೋಡಿರಿ

