LSGಗೆ ಶಮಿ ಮಾರಾಟ – SRH ತಂಡಕ್ಕೆ ಕಮಿನ್ಸ್ ನಾಯಕ

SRH ತಂಡ ಈ ಬಾರಿ ಸಿಕ್ಕಾಪಟ್ಟೆ ಬದಲಾವಣೆಯೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯಲ್ಲಿ ಕಣಕ್ಕಿಳಿಯಲಿದೆ. ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 15 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಜೊತೆಗೆ ಮೊಹಮ್ಮದ್ ಶಮಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟ ಮಾಡಿದೆ.
ಇದನ್ನೂ ಓದಿ:8 ಸ್ಥಾನ.. RCB ಟಾರ್ಗೆಟ್ ಯಾರು – ರಿಲೀಸ್ ಮಾಡಿದವ್ರಿಗೆ ಮತ್ತೆ ಬಿಡ್?
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಘೋಷಣೆಯಾಗಿದೆ. ಪ್ಯಾಟ್ ಕಮಿನ್ಸ್ ಈ ಸೀಸನ್‌ಗೂ ನಾಯಕ ಎಂದು ಎಸ್‌ಆರ್‌ಹೆಚ್ ಘೋಷಿಸಿದೆ. ಈ ಮೊದಲು ಕಮಿನ್ಸ್ ಇಂಜುರಿಗೆ ಒಳಗಾಗಿದ್ದರು. ಹೀಗಾಗಿ ತಂಡದ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಎದ್ದಿತ್ತು. ಸೊಂಟದ ಮೂಳೆಯ ನೋವಿನ ಸಮಸ್ಯೆಗೀಡಾಗಿರುವ ಕಮಿನ್ಸ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಆ್ಯಶಸ್ ಸರಣಿಯ ಬಳಿಕ ಅವರು ಹೆಚ್ಚಿನ ಸಮಯ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಹೀಗಾಗಿಯೇ ಐಪಿಎಲ್ 2026 ರಲ್ಲಿ ಸನ್ರೈಸರ್ಸ್ ಹೈದಾರಾಬಾದ್ ಪರ ಕಮಿನ್ಸ್ ಕಾಣಿಸಿಕೊಳ್ಳುವುದು ಕೂಡ ಅನುಮಾನ ಎನ್ನಲಾಗಿತ್ತು. ಅಲ್ಲದೆ ಹೆನ್ರಿಕ್ ಕ್ಲಾಸೆನ್ ಅಥವಾ ಟ್ರಾವಿಸ್ ಹೆಡ್ ಎಸ್‌ಆರ್‌ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೀಗ ಎಲ್ಲಾ ವದಂತಿಗಳಿಗೆ ಖುದ್ದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತೆರೆ ಎಳೆದಿದೆ. ಐಪಿಎಲ್ 2026 ರಲ್ಲೂ ಪ್ಯಾಟ್ ಕಮಿನ್ಸ್ ಅವರೇ ಎಸ್‌ಆರ್‌ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ.
ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಬಹುತೇಕ ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಸನ್ರೈಸರ್ಸ್ ಹೈದರಾಬಾದ್ ಈ ಬಾರಿ ಶಮಿ ಅವರನ್ನು ಮಾರಾಟ ಮಾಡಿದೆ. ಲಕ್ನೋ ತಂಡಕ್ಕೆ ಮೊಹಮ್ಮದ್ ಶಮಿ ಮಾರಾಟವಾಗಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿರುವ ಆಟಗಾರರು: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸೆ, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ.
ಸನ್ರೈಸರ್ಸ್ ಹೈದರಾಬಾದ್ ರಿಲೀಸ್ ಮಾಡಿದ ಆಟಗಾರರು: ಮೊಹಮ್ಮದ್ ಶಮಿ (ಲಕ್ನೋ ಸೂಪರ್ ಜೈಂಟ್ಸ್‌ಗೆ ಟ್ರೇಡ್), ಆ್ಯಡಂ ಝಂಪಾ, ರಾಹುಲ್ ಚಹರ್, ವಿಯಾನ್ ಮುಲ್ಡರ್, ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ಸಿಮರ್ಜೀತ್ ಸಿಂಗ್.

ನೋಡಿರಿ

