8 ಸ್ಥಾನ.. RCB ಟಾರ್ಗೆಟ್ ಯಾರು – ರಿಲೀಸ್ ಮಾಡಿದವ್ರಿಗೆ ಮತ್ತೆ ಬಿಡ್?
ಕಪ್ ಉಳಿಸಿಕೊಳ್ಳೋಕೆ ಯಾರು ಬೇಕು?

ಇಂಡಿಯನ್ ಪ್ರೀಮಿಯರ್ ಲೀಗ್ನ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಸತತ 17 ವರ್ಷಗಳ ಕನಸು 18ನೇ ಸೀಸನ್ನಲ್ಲಿ ನನಸಾಗಿತ್ತು. ಚೊಚ್ಚಲ ಟ್ರೋಫಿಗೆ ಬೆಂಗಳೂರು ತಂಡ ಮುತ್ತಿಕ್ಕಿತ್ತು. ಸೋ ಈಗ ಚಾಂಪಿಯನ್ಶಿಪ್ನ ತಮ್ಮಲ್ಲೇ ಉಳಿಸಿಕೊಳ್ಳೋಕೆ ಮುಂದಿನ ಆವೃತ್ತಿಯಲ್ಲೂ ಬೆಸ್ಟ್ ಪರ್ಫಾಮೆನ್ಸ್ ನೀಡ್ಲೇಬೇಕಿದೆ. ಌಂಡ್ ಮಿನಿ ಆಕ್ಷನ್ನಲ್ಲಿ ತಂಡಕ್ಕೆ ಅಗತ್ಯ ಇರೋ ಪ್ಲೇಯರ್ಸ್ನ ಖರೀದಿ ಮಾಡ್ಬೇಕು.
ಇದನ್ನೂ ಓದಿ : ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವೆ ಸೇಡಿನ ಜ್ವಾಲೆ – ಏಕವಚನದಲ್ಲೇ ಕಿತ್ತಾಡಿಕೊಂಡು ರಂಪಾಟ
ಡಿಸೆಂಬರ್ 16ರಂದು ಅಬುದಾಬಿಯಲ್ಲಿ 2026ರ ಐಪಿಎಲ್ಗೆ ಮಿನಿ ಆಕ್ಷನ್ ನಡೆಯಲಿದ್ದು ಆಲ್ರೆಡಿ ಫ್ರಾಂಚೈಸಿಗಳು ಒಂದಷ್ಟು ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಟ್ ಪ್ರಸೆಂಟ್ ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕಾದ ಪ್ಲೇಯರ್ ಅಂತಾ ಯಾರು ಬೇಕಿಲ್ಲದೇ ಇರ್ಬೋದು. ಬಟ್ ಇಂಜುರಿ ರಿಪ್ಲೇಸ್ಮೆಂಟ್ ಆಗಿ, ಅಥವಾ ಎಮರ್ಜಿಂಗ್ ಪ್ಲೇಯರ್ ಆಗಿ ಕ್ವಾಲಿಟಿ ಪ್ಲೇಯರ್ಗಳೇ ಬ್ಯಾಕಪ್ ಆಗಿ ತಂಡದಲ್ಲಿ ಇರ್ಬೇಕಾಗುತ್ತೆ. ಸದ್ಯ ಪೇಸ್ ವಿಭಾಗದಲ್ಲಿ ಜೋಶ್ ಹೇಜಲ್ವುಡ್, ಯಶ್ ದಯಾಳ್ ಌಂಡ್ ಭುವನೇಶ್ವರ್ ಕುಮಾರ್ ಇದ್ದಾರಾದ್ರೂ ಕೂಡ ಸಮ್ಟೈಮ್ಸ್ ಬ್ಯಾಕಪ್ ಅಂತೂ ಇರ್ಲೇಬೇಕು.
ಫಾಸ್ಟ್ ಬೌಲರ್ ಚಾಯ್ಸ್!
ಆಟಗಾರ ಮಾದರಿ ಸಂಭಾವನೆ (2025)
ಮಥೀಶ ಪತಿರಾನ ಫಾಸ್ಟ್ ಬೌಲರ್ ₹13 ಕೋಟಿ
ಜೆರಾಲ್ಡ್ ಕೋಟ್ಜಿ ಫಾಸ್ಟ್ ಬೌಲರ್ ₹2.40 ಕೋಟಿ
ಆನ್ರಿಚ್ ನಾರ್ಟ್ಜೆ ಫಾಸ್ಟ್ ಬೌಲರ್ ₹6.50
ಇನ್ನು ಇವ್ರಿಷ್ಟೇ ಅಲ್ಲದೆ ಉಳಿದಂತೆ ವಿದೇಶಿ ವೇಗದ ಬೌಲರ್ಗಳ ಕೋಟಾದಲ್ಲಿ ರೀಸ್ ಟೋಪ್ಲಿ, ಸ್ಪೆನ್ಸರ್ ಜಾನ್ಸನ್, ಮ್ಯಾಟ್ ಹೆನ್ರಿ ಕೂಡ ಇದ್ದಾರೆ. ಇನ್ನು ದೇಶೀ ಆಟಗಾರರಿಗೆ ಮಣೆ ಹಾಕ್ತೇವೆ ಅಂದ್ರೆ ಆರ್ಸಿಬಿಯ ಮಾಜಿ ಪೇಸರ್ ಆಕಾಶ್ ದೀಪ್ ಇದ್ದಾರೆ. ಡೆತ್ ಸ್ಪೆಷಲಿಸ್ಟ್ ಮೋಹಿತ್ ಶರ್ಮಾ ಇದ್ದಾರೆ. ಹಾಗೇ ಡೊಮೆಸ್ಟಿಕ್ ಕ್ರಿಕೆಟ್ನ ಹೀರೋಗಳಾದ ಸಿಮರ್ಜೀತ್ ಸಿಂಗ್, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ ಌಂಡ್ ಆಕಾಶ್ ಮಧ್ವಲ್ ಇದ್ದಾರೆ. ಸೋ ಇದಿಷ್ಟು ಫಾಸ್ಟ್ ಬೌಲಿಂಗ್ ಚಾಯ್ಸ್.. ಇನ್ನು ಆರ್ಸಿಬಿ ಟಾರ್ಗೆಟ್ ಮಾಡಬಹುದಾದ ಸ್ಪಿನ್ ಬೌಲರ್ಸ್ ಮತ್ತು ಆಲ್ರೌಂಡರ್ಸ್ ನೋಡೋದಾದ್ರೆ.. ಸ್ಪಿನ್ ಬೌಲಿಂಗ್ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳೋ ರವಿ ಬಿಷ್ಣೋಯ್ ರನ್ನ ಎಲ್ಎಸ್ಜಿ ರಿಲೀಸ್ ಮಾಡಿದೆ. ಇವ್ರ ಮೇಲೆ ಕಣ್ಣಿಡಬಹುದು. ಹಾಗೇ ತಂಡಕ್ಕೆ ಬೆಸ್ಟ್ ಚಾಯ್ಸ್ ಆಗಬಲ್ಲ ವನಿಂದು ಹಸರಂಗ, ಆರ್ಸಿಬಿಯಿಂದಲೇ ರಿಲೀಸ್ ಆಗಿರುವ ಲುಂಗಿ ಎನ್ಗಿಡಿ ಮೇಲೆ ಮತ್ತೆ ಬಿಡ್ ಮಾಡಬಹುದು. ಅಥವಾ ಲಿಯಾಮ್ ಲಿವಿಂಗ್ಸ್ಟೋನ್ರನ್ನ ಮತ್ತೆ ಕಡಿಮೆ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಳ್ಬೋದು. ಇನ್ನು ಆಂಡ್ರೆ ರಸೆಲ್ ಕೂಡ ಗುಡ್ ಚಾಯ್ಸ್ ಆಗ್ತಾರೆ. ರೈಟ್ ಆರ್ಮ್ ಫಾಸ್ಟ್ ಬೌಲರ್ ಹಾಗೇ ಪವರ್ಹಿಟ್ಟಿಂಗ್ ಬ್ಯಾಟರ್ ಆಗಿದ್ದಾರೆ. ಇನ್ನು ಬ್ಯಾಟಿಂಗ್ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳೋ ಹಾಗಿಲ್ಲ.
ರಿಲೀಸ್ ಆಗಿರೋ ಆಟಗಾರರ ಮೇಲೆ ಮತ್ತೆ ಬಿಡ್!
ಌಕ್ಚುಲಿ ಬೇರೆಲ್ಲಾ ಫ್ರಾಂಚೈಸಿಗಳಿಗೆ ಹೋಲಿಸಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆಟಗಾರರ ರಿಟೆನ್ಶನ್ ಮತ್ತು ರಿಲೀಸ್ ವಿಚಾರದಲ್ಲಿ ಅಳೆದುತೂಗಿ ಹೆಜ್ಜೆ ಇಟ್ಟಿದೆ. ಕೀ ಪ್ಲೇಯರ್ಗಳನ್ನ ಟಚ್ ಕೂಡ ಮಾಡದೇ ಕೆಲವ್ರನ್ನಷ್ಟೇ ರಿಲೀಸ್ ಮಾಡಿತ್ತು. ಹೀಗಿದ್ರೂ ತಂಡದಿಂದ ಹೊರಬಿದ್ದಿರೋ 8 ಆಟಗಾರರ ಪೈಕಿ ಕೆಲವ್ರನ್ನ ಮತ್ತೆ ಬಿಡ್ ಮಾಡಿ ಖರೀದಿ ಮಾಡೋ ಚಾನ್ಸಸ್ ಕೂಡ ಇದೆ. ಮೊದ್ಲಿಗೆ ರಿಲೀಸ್ ಆಗಿರೋ ಪ್ಲೇಯರ್ಸ್ ಅಂದ್ರೆ ಲಿಯಾಮ್ ಲಿವಿಂಗ್ ಸ್ಟೋನ್, ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್, ಮನೋಜ್ ಭಾಂಡಗೆ, ಲುಂಗು ಎನ್ಗಿಡಿ, ಬ್ಲೆಸ್ಸಿಂಗ್ ಮುಜರಾಬಾನಿ, ಮೋಹಿತ್ ರಾಥಿ. ಸೋ ಇಷ್ಟು ಆಟಗಾರರು ರಿಲೀಸ್ ಆಗಿದ್ದು ಈ ಪೈಕಿ ಲಿಯಾಮ್ ಲಿವಿಂಗ್ ಸ್ಟೋನ್, ಮಯಾಂಗ್ ಅಗರ್ವಾಲ್ ಹಾಗೇ ಲುಂಗಿ ಎನ್ಗಿಡಿ ಮೇಲೆ ಮತ್ತೆ ಬಿಡ್ ಮಾಡೋ ಚಾನ್ಸಸ್ ಇದೆ.
ಆಗಿ ಈ ಹರಾಜಿನಲ್ಲಿ 77 ಆಟಗಾರರನ್ನ ಖರೀದಿ ಮಾಡೋಕೆ ಅಕವಕಾಶ ಇದೆ. ಇದ್ರಲ್ಲಿ 31 ಸ್ಲಾಟ್ಗಳಲ್ಲಿ ವಿದೇಶಿ ಪ್ಲೇಯರ್ಸ್ ಮೇಲೆ ಬಿಡ್ ಮಾಡ್ಬೇಕಾಗುತ್ತೆ. ಌಂಡ್ ಎಲ್ಲಾ ಫ್ರಾಂಚೈಸಿಗಳ ಪರ್ಸ್ ಬ್ಯಾಲೆನ್ಸ್ ಒಟ್ಟಾರೆಯಾಗಿ 237.55 ಕೋಟಿ ರೂಪಾಯಿ ಇದೆ. ಅತೀಹೆಚ್ಚು ಬ್ಯಾಲೆನ್ಸ್ ಇರೋದು ಕೆಕೆಆರ್ ಬಳಿ. 10 ಆಟಗಾರರನ್ನ ಬಿಡುಗಡೆ ಮಾಡಿದ್ರಿಂದ 64.3 ಕೋಟಿ ರೂಪಾಯಿ ಇದೆ. ಌಂಡ್ ಮುಂಬೈ ತಂಡ ಅತೀ ಕಡಿಮೆ ಅಂದ್ರೆ 2.75 ಕೋಟಿ ರೂಪಾಯಿ ಮಾತ್ರ ಇದೆ. ಸದ್ಯ ಹಾಲಿ ಚಾಂಪಿಯನ್ ಆಗಿರೋ ಆರ್ಸಿಬಿ 8 ಆಟಗಾರರನ್ನ ಕೈಬಿಟ್ಟಿದ್ದು 16.4 ಕೋಟಿ ಪರ್ಸ್ ಬ್ಯಾಲೆನ್ಸ್ನೊಂದಿಗೆ ಕಣಕ್ಕಿಳಿಯಲಿದೆ. ಅಂತಾ ಮೇಜರ್ ಚೇಂಜಸ್ ಅಂತಾ ಇಲ್ದೇ ಇದ್ರೂ ಬ್ಯಾಕಪ್ ಆಗಿ ಕ್ವಾಲಿಟಿ ಪ್ಲೇಯರ್ಗಳೇ ಬೇಕಾಗುತ್ತೆ. ಕೊನೇದಾಗಿ ಇಲ್ಲಿ ಆರ್ಸಿಬಿಗೆ ಇರೋ ಚಾಲೆಂಜ್ ಅಂದ್ರೆ ಪರ್ಸ್ ಬ್ಯಾಲೆನ್ಸ್. 16 ಕೋಟಿ ಇರೋದ್ರಿಂದ ದುಬಾರಿ ಆಟಗಾರರ ಮೇಲೆ ಬಿಡ್ ಮಾಡೋದು ಕಷ್ಟ ಆಗ್ಬೋದು. ಯಾಕಂದ್ರೆ ಬೇರೆ ಫ್ರಾಂಚೈಸಿಗಳು ಹೆಚ್ಚಿನ ಮೊತ್ತದೊಂದಿಗೆ ಹರಾಜಿಗೆ ಬರ್ತಿದ್ದಾರೆ. ಸೋ ಇರೋದ್ರಲ್ಲೇ ಬ್ಯಾಲೆನ್ಸ್ ಮಾಡಿ ಖರೀದಿ ಮಾಡ್ಬೇಕಾಗುತ್ತೆ. ಆಲ್ರೆಡಿ 6 ಜನ ವಿದೇಶಿ ಆಟಗಾರರು ಇರೋದ್ರಿಂದ ಇಬ್ಬರು ಫಾರಿನರ್ಸ್ ಌಂಡ್ 6 ಜನ ದೇಶೀ ಆಟಗಾರರನ್ನ ಖರೀದಿ ಮಾಡೋಕೆ ಅವಕಾಶ ಇದೆ.

ನೋಡಿರಿ

