ಇನ್ಮುಂದೆ ಆಫೀಸ್‌ನಲ್ಲಿ ಲವ್ ಮಾಡಿದ್ರೆ ಕೆಲಸದಿಂದ ವಜಾ! – ಜಾರಿಯಾಯ್ತು ಹೊಸ ರೂಲ್ಸ್!

ಪ್ರೀತಿ ಎಲ್ಲಿ, ಯಾವಾಗ ಹುಟ್ಟುತ್ತೆ ಅಂತಾ ಹೇಳೋಕೆ ಆಗಲ್ಲ. ಕಾಲೇಜ್ ಕ್ಯಾಂಪಸ್, ಬಸ್ ನಿಲ್ದಾಣ, ಆಫೀಸ್‌ನಲ್ಲೂ ಪ್ರೀತಿಯಲ್ಲಿ ಬೀಳೋದು ಕಾಮನ್. ಆಫೀಸ್‌ಗಳಲ್ಲಿ ಪ್ರೀತಿ ಶುರುವಾಗಿ, ನಂತ್ರ ಮದುವೆ ಆಗಿರುವವರನ್ನ ನಾವು ನೋಡಿದ್ದೇವೆ. ಆದ್ರೀಗ ಇಲ್ಲೊಂದು ಕಡೆ, ಕಂಪನಿಯಲ್ಲಿ ಪರಸ್ಪರ ಲವ್ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಪ್ರೀತಿ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಶಿವನ ದೇಗುಲದಲ್ಲಿ ಪ್ರತ್ಯಕ್ಷವಾದ ನಾಗಪ್ಪ! – ಹಾವು ಕಂಡು ಜನ ಮಾಡಿದ್ದೇನು ಗೊತ್ತಾ?
ಅಚ್ಚರಿಯಾದ್ರೂ ಸತ್ಯ. ಈ ವಿಚಿತ್ರ ನಿಯಮ ವಿಧಿಸಿರೋದು ಅಮೆರಿಕಾದಲ್ಲಿ. ಇಲ್ಲಿನ ಕಂಪನಿಯೊಂದು ಐದು ರಾಜ್ಯಗಳಲ್ಲಿ ಈ ರೂಲ್ಸ್‌ನ ಜಾರಿಗೆ ತಂದಿದೆ. ಕಂಪನಿಯಲ್ಲಿ ಪರಸ್ಪರ ಲವ್ ಮಾಡುವುದು ಅಥವಾ ಬೇರೆ ಕಂಪನಿಯರನ್ನು ಪ್ರೀತಿ ಮಾಡುವುದು ತಿಳಿದರೆ, ಅಂತಹ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿ ಎಂದು ಕಂಪನಿ ಹೇಳಿದೆ. ಕಂಪನಿಯು ಕಾನೂನು ತಂಡದೊಂದಿಗಿನ ಸಭೆಯನ್ನು ಕರೆದು, ಈ ನಿರ್ಧಾರಕ್ಕೆ ಬಂದಿದೆ. ಇದೀಗ ಪೋಸ್ಟ್ವೊಂದು ರೆಡ್ಡಿಟ್ನಲ್ಲಿ ವೈರಲ್ ಆಗಿದೆ. ಈ ಪೋಸ್ಟ್ಗೆ ಇದು ಮುಕ್ತಾಯದ ಹೊಸ ರೂಪ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.
ಕಂಪನಿಯ ಒಳಗೆ ಅಥವಾ ಹೊರಗೆ ಯಾರೊಂದಿಗೂ ಸಂಬಂಧವನ್ನು ಹೊಂದಿರಬಾರದು, ಒಂದು ವೇಳೆ ಸಂಬಂಧ ಹೊಂದಿದ್ದರೆ ಕಂಪನಿಗೆ ನೇರವಾಗಿ ಗಮನಕ್ಕೆ ತರಬೇಕು ಎಂದು ಹೇಳಿದೆ. ಕಂಪನಿಗೆ ತಿಳಿಸದೇ ಗುಟ್ಟಾಗಿ ಲವ್ ಮಾಡಿದ್ರೆ, ಅಂತಹ ಉದ್ಯೋಗಿಗಳನ್ನು ವಜಾ ಮಾಡಲಾಗುವುದು. ಜತೆಗೆ ಬೇರೆ ಕಂಪನಿಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಮೊದಲೇ ಕಂಪನಿಗೆ ಹೇಳಬೇಕು. ಹೇಳದಿದ್ದರೆ ಅಂತವರನ್ನು ಕೂಡ ಕಂಪನಿಯಿಂದ ವಜಾ ಮಾಡಲಾಗುವುದು. ಇಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ನೇರ ಮನೆ ಕಳಿಸುತ್ತೇವೆ ಎಂದು ಆದೇಶ ನೀಡಿದೆ. ಇದರ ಜತೆಗೆ ಮತ್ತೊಂದು ಮಹತ್ವದ ಆದೇಶ ಕೂಡ ನೀಡಿದೆ. ಕಂಪನಿಯಲ್ಲಿ ಯಾವುದೇ ತೊಂದರೆ ಅಥವಾ ಕಿರುಕುಳ ಉಂಟಾದರೆ ಅದನ್ನು HRಗೆ ಅಲ್ಲ, ಕಾರ್ಪೊರೇಟ್ ವಕೀಲರಿಗೆ ತಿಳಿಸಬೇಕು ಎಂದು ಹೇಳಿದೆ.
ಇದೀಗ ಈ ರೂಲ್ಸ್‌ಗೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಕೆಲವೊಂದು ಕಂಪನಿಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ ಎಂದು ಒಬ್ಬರು ಹೇಳಿದ್ದಾರೆ. ಇದು ನಿಮ್ಮ ಕಂಪನಿಗೆ ಹೊಸದೇ? ಆದರೆ ನಮ್ಮ ಕಂಪನಿಯಲ್ಲಿ ಜಾರಿಯಲ್ಲಿದೆ. ಇದರಿಂದ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನಮ್ಮ ಕಂಪನಿಯ ಮಾಜಿ ಬಾಸ್ ಒಬ್ಬರು ಮಹಿಳೆಯೊಂದಿಗೆ ಡೇಟಿಂಗ್ ಮಾಡಿದಕ್ಕೆ ಇಬ್ಬರನ್ನು ಕಂಪನಿಯಿಂದ ವಜಾ ಮಾಡಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ನೋಡಿರಿ

