4 ದಿನಗಳಿಂದ ವಿದ್ಯುತ್‌ ಉತ್ಪಾದನಾ ಕೇಂದ್ರದಲ್ಲಿ ಮರಿಯಾನೆ ಪರದಾಟ! – ಆನೆ ರಕ್ಷಣೆಗೆ ಬೆಂಗಳೂರಿನಿಂದ ಬಂತು ಕ್ರೇನ್​​!

4 ದಿನಗಳಿಂದ ವಿದ್ಯುತ್‌ ಉತ್ಪಾದನಾ ಕೇಂದ್ರದಲ್ಲಿ ಮರಿಯಾನೆ ಪರದಾಟ! – ಆನೆ ರಕ್ಷಣೆಗೆ ಬೆಂಗಳೂರಿನಿಂದ ಬಂತು ಕ್ರೇನ್​​!

ಕಾಡಾನೆಗಳು ಆಹಾರ ಅರಸುತ್ತಾ, ನಾಡಿಗೆ ಬರ್ತಿವೆ. ಇಲ್ಲೊಂದು ಆನೆ ಮರಿಯೊಂದು ವಿದ್ಯುತ್‌ ಉತ್ಪಾದನಾ ಕೇಂದ್ರದ ನಾಲೆ ಬಿದ್ದು, ನಾಲ್ಕು ದಿನಗಳಿಂದ ಒದ್ದಾಡುತ್ತಿದೆ.

ಇದನ್ನೂ ಓದಿ: ಸೌದಿ ಅರೇಬಿಯಾ ಬಸ್ ದುರಂತ ಪ್ರಕರಣ – 45 ಮಂದಿ ಪೈಕಿ ಓರ್ವ ಕನ್ನಡಿಗನೂ ಬಲಿ  

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ‌ ಶಿವವಸಮುದ್ರ ಬಳಿಯಿರುವ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಆನೆಮರಿ ನೀರು ಕುಡಿಯಲು ಬಂದು ನಾಲೆಯಲ್ಲಿ ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ಮರಿಯಾನೆ ಸಿಲುಕಿಕೊಂಡಿದ್ದು, ಅದರ ರಕ್ಷಣಾ ಕಾರ್ಯ ಇವತ್ತೂ ಮುಂದುವರಿದಿದೆ.

ಸೋಮವಾರ ಕೂಡ ಅರಣ್ಯ ಇಲಾಖೆ ಆನೆಯನ್ನ ಮೇಲೆತ್ತಲು ಪ್ರಯತ್ನ ಮಾಡಿತ್ತು. ಆದರೆ ಯಾವುದೇ ಪ್ರಯೋಜ ಆಗಿರಲಿಲ್ಲ. ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಇನ್ನು ಆನೆ ರಕ್ಷಣೆಗೆ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್​ಗಳನ್ನು ತರಲಾಗಿದೆ. ಇನ್ನು ಮೈಸೂರಿನಿಂದ ಅರವಳಿಕೆ ತಜ್ಞರು, ಅರಣ್ಯ ಸಿಬ್ಬಂದಿ ಬಂದಿದ್ದಾರೆ. ಮಂಡ್ಯ ಡಿಎಫ್ಓ, ಮಳವಳ್ಳಿ ತಹಸಿಲ್ದಾರ್ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ನಡೆಯುತ್ತಿದೆ.

ಕಳೆದ ಎರಡು ದಿನಗಳಿಂದ ನೀರಿನಲ್ಲೇ ನಿಂತಿದೆ. ಹೀಗಾಗಿ ಸೊಂಡಿಲಿನ ಒಂದು ಭಾಗ ಬಿಳಿ ಬಣ್ಣಕ್ಕೆ ತಿರುಗಿದೆ. ಸೊಂಡಿಲ ತುದಿ ಭಾಗದಲ್ಲಿ ಇನ್ಫೆಂಕ್ಷನ್ ಆಗಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Shwetha M