ಟೆಸ್ಟ್ ಕ್ರಿಕೆಟ್ ಗೆ ಗಂಭೀರ ಗ್ರಹಣ – ತವರಿನಲ್ಲಿ ಇದೆಂಥಾ ಹೀನಾಯ ಸೋಲು?
ಬವುಮಾ ಶಪಥ.. ಗೆಲ್ಲುತ್ತಾ ಭಾರತ?

ಟೆಸ್ಟ್ ಕ್ರಿಕೆಟ್ ಅಂದ್ರೆ ಭಾರತ.. ಭಾರತ ಅಂದ್ರೆ ಟೆಸ್ಟ್ ಕ್ರಿಕೆಟ್ ಅನ್ನೋ ಕಾಲ ಇತ್ತು. ರೆಡ್ ಬಾಲ್ ಫಾರ್ಮೆಟ್ನಲ್ಲಿ ಆ ಮಟ್ಟಿಗೆ ಟೀಂ ಇಂಡಿಯಾ ಕಿಂಗ್ ಆಗಿ ಮೆರೀತಿತ್ತು. ಆದ್ರೆ ಕಳೆದೊಂದು ವರ್ಷದಿಂದ ಭಾರತದ ನಸೀಬೇ ಬದ್ಲಾಗಿ ಹೋಗಿದೆ. ಅದ್ರಲ್ಲೂ ತವರಿನಲ್ಲಿ ಹೀನಾಯ ಸೋಲು. ಭಾರತದಲ್ಲಿ ಆಡಿದ ಕಳೆದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಸೋತಿದ್ದಾರೆ. ಹೆಡ್ಕೋಚ್ ಗೌತಮ್ ಗಂಭೀರ್ಗೆ ವೈಟ್ಬಾಲ್ನಲ್ಲಿ ಸಿಕ್ಕ ಸಕ್ಸಸ್ ರೆಡ್ಬಾಲ್ನಲ್ಲಿ ಸಿಕ್ತಾ ಇಲ್ಲ.
ಇದನ್ನೂ ಓದಿ : ಗೇಲ್ ಗೆದ್ದಿಲ್ಲ.. ABD, KLಗೂ ಸಿಕ್ಕಿಲ್ಲ – ದಾಖಲೆ ರನ್ಸ್ ಇದ್ರೂ ಕಪ್ ZERO
ವಿಶ್ವಟೆಸ್ಟ್ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ಸ್ ಆಗಿರೋ ಸೌತ್ ಆಫ್ರಿಕಾದ ಆಟಗಾರರು ಭಾರತಕ್ಕೆ ಕಾಲಿಡುವಾಗ್ಲೇ ಶಪಥ ಮಾಡಿ ಬಂದಿದ್ರು. ಕಳೆದ ವರ್ಷ ಭಾರತದಲ್ಲಿ ನ್ಯೂಜಿಲೆಂಡ್ ಟೀಂ ಏನ್ ಮಾಡಿತ್ತೋ ಅದನ್ನೇ ನಾವೂ ಮಾಡ್ತೇವೆ ಅಂತಾ. ಆಲ್ರೆಡಿ ಫಸ್ಟ್ ಮ್ಯಾಚಲ್ಲಿ ಅದನ್ನ ಪ್ರೂವ್ ಮಾಡಿ ತೋರಿಸಿದ್ದಾರೆ. ಇಲ್ಲಿ ದಕ್ಷಿಣ ಆಫ್ರಿಕಾ ಮೊದಲ ಪಂದ್ಯವನ್ನ ಗೆಲ್ತು ಅನ್ನೋದಕ್ಕಿಂತ ಭಾರತವೇ ಸೋಲ್ತು ಅನ್ನೋದು ಕರೆಕ್ಟ್ ಅನ್ಸುತ್ತೆ. ಮ್ಯಾನೇಜ್ಮೆಂಟ್ ಮಾಡಿದ ಮಿಸ್ಟೇಕ್ಸ್, ಆಟಗಾರರ ಲೇಜಿನೆಸ್ ದೊಡ್ಡ ಹೊಡೆತ ಕೊಡ್ತು.
ಫಸ್ಟ್ ಇನ್ನಿಂಗ್ಸ್ 30 ರನ್ಸ್ ಲೀಡ್.. 2ನೇ ಇನ್ನಿಂಗ್ಸ್ 30 ರನ್ ಗಳ ಸೋಲು!
ಮೊದಲ ಟೆಸ್ಟ್ ಮ್ಯಾಚಲ್ಲಿ ಸೌತ್ ಆಫ್ರಿಕಾ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ರು. ಌಂಡ್ 159 ರನ್ಗಳಿಗೆ ಮೊದಲ ಇನ್ನಿಂಗ್ಸ್ನಲ್ಲಿ ಆಲೌಟ್ ಆಗಿದ್ರು. ಭಾರತ ಫಸ್ಟ್ ಇನ್ನಿಂಗ್ಸ್ನಲ್ಲಿ 189 ರನ್ಸ್ ಹೊಡೆದು ಆಲೌಟ್ ಆಯ್ತು. ಹಾಗೇ 30 ರನ್ಗಳ ಲೀಡ್ ಸಾಧಿಸಿದ್ರು. ಇನ್ನು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಸೌತ್ ಆಫ್ರಿಕಾ 153 ರನ್ಗಳನ್ನ ಕಲೆ ಹಾಕಿತ್ತು. ಹೀಗಾಗಿ 124 ರನ್ಸ್ ಹೊಡೆದಿದ್ರೂ ಭಾರತ ಮ್ಯಾಚ್ ಗೆದ್ದು ಬಿಡ್ತಿದ್ರು. ಆದ್ರೆ ಭಾರತದ ಯಾವುದೇ ಬ್ಯಾಟರ್ ಕೂಡ ಕ್ರೀಸ್ ಕಚ್ಚಿ ನಿಲ್ಲಲೇ ಇಲ್ಲ. ಆಫ್ರಿಕಾ ಬೌಲರ್ಗಳ ಎದುರು ಪೆವಿಲಿಯನ್ ಪರೇಡ್ ನಡೆಸಿ ಸೋಲೊಪ್ಪಿಕೊಂಡ್ರು. ಐದು ದಿನಗಳ ಪಂದ್ಯ ಜಸ್ಟ್ ಎರಡುಮುಕ್ಕಾಲು ದಿನದಲ್ಲೇ ಮುಗಿದು ಟೆಂಬಾ ನಾಯಕತ್ವದ ಸೌತ್ ಆಫ್ರಿಕಾ ಗೆದ್ದು ಬೀಗಿತು. ಈ ಮ್ಯಾಚಲ್ಲಿ ಭಾರತ ತುಂಬಾನೇ ಮಿಸ್ಟೇಕ್ಸ್ ಮಾಡಿಕೊಳ್ತು.
ಟೀಂ ಇಂಡಿಯಾ ಎಡವಿದ್ದೆಲ್ಲಿ?
- ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಲೋ ಸ್ಕೋರರ್ ಪಿಚ್
- ಭಾರತದ ಬ್ಯಾಟಿಂಗ್ ವೀಕ್.. ಅರ್ಧಶತಕವೂ ಬಂದಿಲ್ಲ
- ಗಿಲ್ ರಿಟೈರ್ಡ್ ಹರ್ಟ್ ಆಗಿದ್ದು ಬ್ಯಾಟ್ಸ್ ಮನ್ ಕಡಿಮೆ
- ಸಾಯಿ ಸುದರ್ಶನ್ ಡ್ರಾಪ್. ನಂ.3ಗೆ ಸುಂದರ್ ಚಾನ್ಸ್
- ಹೋಂ ಪಿಚ್ ಹೀರೋ ಕರುಣ್ ನಾಯರ್ ಕೈಬಿಟ್ಟಿದ್ದು
- ಸ್ಪಿನ್ ಬೌಲರ್ ಗಳ ಎದುರು ಭಾರತೀಯರ ಫೇಲ್ಯೂರ್
- ವಾಷಿಂಗ್ಟನ್ ಸುಂದರ್ ಗೆ ಬೌಲಿಂಗ್ ಚಾನ್ಸ್ ಕೊಟ್ಟಿಲ್ಲ
- 2ನೇ ಇನ್ನಿಂಗ್ಸ್ ನಲ್ಲಿ ಸಿರಾಜ್ ಗೆ 8 ವಿಕೆಟ್ ಬಿದ್ಮೇಲೆ ಚಾನ್ಸ್
- ಟೆಂಬಾ ಬವುಮಾ ಬ್ಯಾಟಿಂಗ್ & ಲೀಡ್ ಮಾಡಿದ ರೀತಿ
- ಆಫ್ ಸ್ಪಿನ್ ಬೌಲರ್ ಸಿಮೊನ್ ಹಾರ್ಮರ್ 8 ವಿಕೆಟ್
ಹೀಗೆ ಮೊದಲ ಪಂದ್ಯದಲ್ಲಿ ಭಾರತ ಸೋಲೋಕೆ ಇದೆಲ್ಲಾ ಕಾರಣ ಆಯ್ತು. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ರೆಡ್ ಬಾಲ್ ಮಾದರಿಯಲ್ಲಿ ನೆಲಕಚ್ಚೋಕೆ ಸ್ಟಾರ್ಟ್ ಆಗಿದೆ. ಕಳೆದ ಸಲ ವಿಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿದ್ರೂ ಅದನ್ನ ಸಾಧನೆ ಅಂತಾ ಹೇಳೋಕೆ ಆಗಲ್ಲ. ಯಾಕಂದ್ರೆ ವಿಂಡೀಸ್ ಈಗ ವೀಕ್ ಟೀಂ ಆಗಿದೆ. ಸೋ ಮುಂದಿನ ಪಂದ್ಯದಲ್ಲಾದ್ರೂ ಭಾರತ ತನ್ನ ತಪ್ಪುಗಳನ್ನ ತಿದ್ದಿಕೊಳ್ಬೇಕು. ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ತಮ್ಮ ಹಠಮಾರಿ ಧೋರಣೆ ಬಿಟ್ಟು ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಎಕ್ಸ್ಪರ್ಟ್ಸ್ ಕೊಡೋ ಸಜೇಷನ್ನ ಮುಕ್ತವಾಗಿ ಸ್ವೀಕರಿಸಬೇಕು. ತಂಡದಲ್ಲಿ ಗೆಲ್ಲೋಕೆ ಬೇಕಿರೋ ಪ್ರಯೋಗಗಳನ್ನ ಮಾಡ್ಬೇಕು. ಅದನ್ನ ಬಿಟ್ಟು ತಾನೇ ಗ್ರೇಟ್ ಅನ್ನೋ ಥರ ಈಗೋ ತೋರಿಸಿದ್ರೆ ಅದು ತಂಡದ ಮೇಲೆ ಎಫೆಕ್ಟ್ ಆಗುತ್ತೆ. ರಿಸಲ್ಟ್ ಮೇಲೆ ಪರಿಣಾಮ ಬೀರುತ್ತೆ. ಆಲ್ರೆಡಿ ಗೌತಮ್ ಗಂಭೀರ್ ವಿರುದ್ಧ ಟೀಕೆಗಳು ಶುರುವಾಗಿದೆ.

ನೋಡಿರಿ

