ರೂಲ್ಸ್ ಬ್ರೇಕ್ ಮಾಡಿದ ಅಶ್ವಿನಿಗೆ ಬಿಗ್ಬಾಸ್ ಶಿಕ್ಷೆ! – ಕಾಲು ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ!

ಬಿಗ್ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಅಶ್ವಿನಿ ಗೌಡ ಗಿಲ್ಲಿಯನ್ನ ಟಾರ್ಗೆಟ್ ಮಾಡಿಕೊಂಡು ಬಂದಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಗಿಲ್ಲಿ ಜೊತೆ ಜಗಳಕ್ಕೆ ನಿಲ್ಲುತ್ತಾರೆ. ಆದ್ರೆ ಗಿಲ್ಲಿ ಕಾಮಿಡಿ ಡೈಲಾಗ್ ಮೂಲಕವೇ ಉರಿಸೋದ್ರಲ್ಲಿ ಎಲ್ಲಿದ ಕೈ.. ಇದೀಗ ಪದೇ ಪದೇ ಪದೆ ನಿಯಮ ಉಲ್ಲಂಘಿಸಿದ ಅಶ್ವಿನಿ ಬಿಗ್ಬಾಸ್ ಶಿಕ್ಷೆ ಕೊಟ್ಟಿದ್ದಾರೆ. ಇದನ್ನೂ ಕೂಡ ಅಡ್ವಾಂಟೇಜ್ ಆಗಿ ತೆಗೆದುಕೊಂಡ ಗಿಲ್ಲಿ, ಅಶ್ವಿನಿ ಗೌಡಗೆ ಸರಿಯಾಗೇ ಉರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಸುಟ್ಟರೆ ಒಂದು ಲಕ್ಷ ಫೈನ್.. 5 ವರ್ಷ ಜೈಲು!
ಇಂದಿನ ಪ್ರೋಮೋದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿವಂತೆ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಸೂಚಿಸಿದ್ದಾರೆ. ಆದರೆ ಗಿಲ್ಲಿ ಕೊಟ್ಟ ಕಾರಣ ಮಾತ್ರ ಖಡಕ್ ಆಗಿತ್ತು. ಅಶ್ವಿನಿ ಅವರಿಗೆ ನಾಮಿನೇಶನ್ ಮೇಲೆಯೂ ಸೀರಿಯೆಸ್ನೆಸ್ ಇಲ್ಲ. ರೂಲ್ಸ್ ಮೇಲೂ ಸೀರಿಯೆಸ್ನೆಸ್ ಇಲ್ಲ. ಕಠಿಣವಾದ ಶಿಕ್ಷೆ ಬಿಗ್ ಬಾಸ್ ಕೊಡಬೇಕು ಎಂದಿದ್ದಾರೆ. ಬಿಗ್ ಬಾಸ್ ಕೂಡ ಅದರಂತೆ, ಮನೆಯ ಸದಸ್ಯರ ಮುಂದೆ ಬಸ್ಕಿ ಹೊಡೆದು, ಇನ್ನುಮಂದೆ ಬಿಗ್ಬಾಸ್ನ ನಿಯಮಗಳನ್ನು ಮುರಿಯುವುದಿಲ್ಲ ಎಂದು ಹೇಳಬೇಕು ಎಂದು ಶಿಕ್ಷೆ ಕೊಟ್ಟಿದ್ದಾರೆ. ಬಿಗ್ ಬಾಸ್ ಹೇಳಿದಂತೆ ಅಶ್ವಿನಿ ಗೌಡ ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ಆದ್ರೆ ಗಿಲ್ಲಿ ಇದನ್ನ ಅಡ್ವಾಂಟೇಜ್ ಆಗಿ ತೆಗೆದುಕೊಂಡಿದ್ದು, ಅಶ್ವಿನಿಗೆ ಸರಿಯಾಗೇ ಉರಿಸಿದ್ದಾರೆ. ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಕೋಪಗೊಂಡಿದ್ದಾರೆ.
ಅಶ್ವಿನಿ ಗೌಡ ಕ್ಷಮೆ ಕೇಳುತ್ತಾ ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದಾರೆ. ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿದೆ. ತೀರಾ ಓವರ್ ಆಗಿ ಆಡಬೇಡ. ನಿನ್ನ ಧಿಮಾಕು ನಿನ್ನ ಹತ್ತಿರ ಇಟ್ಕೋ. ನಿನ್ನ ವ್ಯಕ್ತಿತ್ವ ಗೊತ್ತಾಗತ್ತೆ, ನನ್ನದಲ್ಲ ಎಂದು ಗಿಲ್ಲಿಗೆ ಆವಾಜ್ ಹಾಕಿದ್ದಾರೆ.

ನೋಡಿರಿ

