ಅಶ್ವಿನಿಯಿಂದ ಕಾಕ್ರೋಚ್ ಡಮ್ಮಿ ಆದ್ರಾ? – Elimination ಬೆನ್ನಲ್ಲೇ ಸುಧಿ ಪತ್ನಿ ಗರಂ!

ಬಿಗ್‌ಬಾಸ್ ಕನ್ನಡ ಸೀಸನ್ 12 ರಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಎದುರಾಗ್ತಿದೆ. ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗ್ತಿದೆ. ಈ ವಾರ ಟಾಪ್ 5 ನಲ್ಲಿ ಬರ್ತಾರೆ ಅಂದ್ಕೊಂಡಿದ್ದ ಸ್ಪರ್ಧಿ ಕಾಕ್ರೋಚ್ ಸುಧಿ ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಸುಧಿ ಪತ್ನಿ ಇಬ್ಬರ ಒಟನಾಟದಿಂದಲೇ ಸುಧಿ ಇಷ್ಟು ಬೇಗ ಹೊರಬರಲು ಕಾರಣ ಅಂತ ಹೇಳಿದ್ದಾರೆ. ಅಷ್ಟಕ್ಕೂ ಕಾಕ್ರೋಚ್ ಸುಧಿ ಎಲಿಮಿನೇಟ್ ಆಗಲು ಅಶ್ವಿನಿ ಹಾಗೂ ಜಾಹ್ನವಿ ಕಾರಣ ಆದ್ರಾ? ಇವರಿಬ್ಬರಿಂದಲೇ ಸುಧಿ ದೊಡ್ಮನೆಯಲ್ಲಿ ಡಮ್ಮಿ ಆದ್ರಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಪ್ರತಿಭಟನೆ ವೇಳೆ ಕಬ್ಬಿನ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಪ್ರಕರಣ – 10 ರೈತರು ವಶಕ್ಕೆ
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಕಾಕ್ರೋಚ್ ಸುಧಿ ಟಫ್ ಸ್ಪರ್ಧಿ ಎನಿಸಿಕೊಂಡಿದ್ರು. ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾ ವೀಕ್ಷಕರು ಆರಂಭದಿಂದಲೇ ಅಂದ್ಕೊಂಡಿದ್ರು. ಮೊದಲ ಮೂರು ವಾರ ಚೆನ್ನಾಗಿ ಆಟವಾಡಿದ್ದ ಕಾಕ್ರೋಚ್ ಮಿನಿ ಫಿನಾಲೆ ವಿನ್ನರ್ ಕೂಡ ಆಗಿದ್ರು. ಇದ್ರಿಂದಾಗಿ ಸುಧಿ ವಿಶೇಷ ಅಧಿಕಾರ ಕೂಡ ಪಡೆದುಕೊಂಡಿದ್ರು. ಈ ಮೂರು ವಾರಕ್ಕೆ ಫೈನಲ್ಸ್ ಗೆಲ್ಲುವ ಮೂಲಕ ತಾನ್ನೊಬ್ಬ ಸ್ಟ್ರಾಂಗ್ ಕಟೆಂಡರ್ ಎಂದು ಪ್ರೂವ್ ಮಾಡಿದ್ದರು. ಆದ್ರೆ ಯಾವಾಗ ಸುಧಿ ಅಶ್ವಿನಿ ಗ್ಯಾಂಗ್ ಜೊತೆ ಸೇರ್ಕೊಂಡ್ರೋ ಅಲ್ಲಿಂದಲೇ ಸುಧಿ ಆಟವನ್ನೇ ಮರೆತಂತೆ ಕಾಣ್ತಿತ್ತು. ಅಶ್ವಿನಿ ಹಾಗೂ ಜಾಹ್ನವಿ ಜೊತೆ ಸೇರಿದ್ಮೇಲೆ ನೆಗೆಟಿವ್ ಶೇಡ್‌ನಲ್ಲೇ ಕಾಣಿಸಿಕೊಂಡಿದ್ರು. ಆದಾದ ಬಳಿಕ ಅಷ್ಟು ಆ್ಯಕ್ಟೀವ್ ಆಗಿರದ ಕಾಕ್ರೋಚ್ ಸುಧಿ ಸದ್ದಿಲ್ಲದೇ ಮೂಲೆ ಗುಂಪಾದರು.
ಇನ್ನು ಕಾಕ್ರೋಚ್ ಸುಧಿ ಆಟ ಮರೆತು ಹಲವು ಬಾರಿ ನಾಮಿನೇಟ್ ಆದಾಗಲೂ ಕಿಚ್ಚ ಸುದೀಪ್ ವಾರದ ಕೊನೆಯಲ್ಲಿ ಅವರನ್ನ ಎಚ್ಚರಿಸುತ್ತಲೇ ಬಂದಿದ್ರು. ತಮ್ಮ ಆಟವನ್ನ ಸರಿಪಡಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡಿ ಎಂದು ಕಿವಿಮಾತು ಕೂಡ ಹೇಳಿದ್ರು. ಆದ್ರೂ ಎಚ್ಚೆತ್ತುಕೊಳ್ಳದ ಸುದೀ ಆದೇ ಆಟವನ್ನ ಮುಂದುವರಿಸಿದ್ರು. ಅಷ್ಟೇ ಅಲ್ಲ ಫಿಸಿಕಲ್ ಟಾಸ್ಕ್ ವೇಳೆಯೂ ಸುಧಿ ಇಂಜುರಿ ಇದೆ ಅನ್ನೋ ಕಾರಣಕ್ಕೆ ಆಟವನ್ನ ಜಾಸ್ತಿ ಎಫರ್ಟ್ ಹಾಕ್ತಿರ್ಲಿಲ್ಲ. ಇದ್ರಿಂದಾಗೇ ಇಷ್ಟು ಬೇಗ ದೊಡ್ಮನೆಯಿಂದ ಆಚೆ ಬರುವಂತೆ ಆಗಿದೆ.
ಇನ್ನು ಕಾಕ್ರೋಚ್ ಸುಧಿ ದೊಡ್ಮನೆಯಿಂದ ಆಚೆ ಬರ್ತಿದ್ದಂತೆ ಸುಧಿ ಅವರ ಹೆಂಡತಿ ಬೇಸರ ವ್ಯಕ್ತಪಡಿಸಿದರು. ಕಿಚ್ಚ ಸುದೀಪ್ ಸುಧಿ ಎಲಿಮಿನೇಟ್ ಆಗಲು ಕಾರಣವೇನು ಅಂತ ಕೇಳಿದ್ದಕ್ಕೆ, ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜೊತೆಯಲ್ಲಿ ಹೆಚ್ಚು ಸಮಯ ಕಳೆದರು. ಇದು ಅವರಿಗೆ ನೆಗೆಟಿವ್ ಆಯ್ತು ಎಂದು ಅಂತಾ ಹೇಳಿದ್ರು. ಅಶ್ವಿನಿ ಗೌಡ ಮತ್ತು ಜಾನ್ವಿ ಗುಂಪಿನಿಂದ ಹೊರಗೆ ಬಂದು ಆಟ ಆಡಬೇಕಿತ್ತು. ಆ ಗುಂಪಿನಿಂದ ಹೊರ ಬಂದು ಆಟವಾಡಿದ್ರೆ ಇನ್ನೊಂದಿಷ್ಟು ದಿನ ಬಿಗ್‌ಬಾಸ್ ಮನೆಯಲ್ಲಿರ್ತಿದ್ರು. ಅವರಲ್ಲಿ ಇನ್ನು ಹೆಚ್ಚು ಸಾಮರ್ಥ್ಯವಿತ್ತು ಎಂದಿದ್ದಾರೆ.
ಒಟ್ಟಾರೆ, ಸ್ಟ್ರಾಂಗ್ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಕಾಕ್ರೋಚ್ ಸುಧಿ, ತಮ್ಮ ಕೇರ್‌ಲೆಸ್‌ನಿಂದಾಗಿ ಎಲಿಮಿನೇಟ್ ಆಗಿದ್ದಾರೆ. ಒಬ್ಬ ಸ್ಟ್ರಾಂಗ್ ಸ್ಪರ್ಧಿ ಹೊರ ಹೋಗಿದ್ದು ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಕೊಟ್ಟಂತಾಗಿದೆ. ಇನ್ನಾದ್ರೂ ಉಳಿದ ಸ್ಪರ್ಧಿಗಳು ತಮ್ಮ ಗುಂಪಿನಿಂದ ಹೊರ ಬಂದು ಆಟ ಶುರುಮಾಡ್ತಾರಾ ಅಂತಾ ಕಾದುನೋಡ್ಬೇಕು.

ನೋಡಿರಿ

