ಜಡ್ಡು ಜ್ವಾಲೆಗೆ SA ಧೂಳೀಪಟ – ಕೊಲ್ಕತ್ತಾ ಪಿಚ್.. ಬೌಲರ್ಸ್ ಕಿಂಗ್
3ನೇ ದಿನವೇ ಟೆಸ್ಟ್ ಗೆಲ್ಲುತ್ತಾ ಭಾರತ?

ಜಡ್ಡು ಜ್ವಾಲೆಗೆ SA ಧೂಳೀಪಟ – ಕೊಲ್ಕತ್ತಾ ಪಿಚ್.. ಬೌಲರ್ಸ್ ಕಿಂಗ್3ನೇ ದಿನವೇ ಟೆಸ್ಟ್ ಗೆಲ್ಲುತ್ತಾ ಭಾರತ?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ನೋಡ್ದಾಗ ಟೀಂ ಇಂಡಿಯಾ ಕಂಪ್ಲೀಟ್ ಡಾಮಿನೇಷನ್ ಮಾಡಿದೆ. ಜಸ್ಟ್ 159 ರನ್​ಗಳಿಗೆ ಟೆಂಬಾ ಬವುಮಾ ಪಡೆಯನ್ನ ಆಲೌಟ್ ಮಾಡಿದೆ. ಹೀಗಾಗಿ ಫಸ್ಟ್ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಬಿಗ್ ಲೀಡ್ ಪಡೆಯೋದು ಗ್ಯಾರಂಟಿ ಅಂತಾನೇ ಪ್ರೆಡಿಕ್ಟ್ ಮಾಡ್ಲಾಗ್ತಿತ್ತು. ಆದ್ರೆ ಭಾರತದ ಬ್ಯಾಟಿಂಗ್ ಶುರುವಾದ್ಮೇಲೆ ಸೀನೇ ಉಲ್ಟಾ. ಲೋ ಸ್ಕೋರಿಂಗ್ ಪಿಚ್ ನಲ್ಲಿ ದಕ್ಷಿಣ ಆಫ್ರಿಕಾ ಬೌಲರ್ಸ್ ಕೂಡ ಗೇಮ್​ನ ಕಂಟ್ರೋಲ್​ಗೆ ತಗೊಂಡ್ರು. ಭಾರತ ಕೂಡ ಬೇಗನೇ ಆಲೌಟ್ ಆಯ್ತು.

ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರೋ ಮೊದಲ ಟೆಸ್ಟ್ ಮ್ಯಾಚ್​ನ ಮೊದಲ ಇನ್ನಿಂಗ್ಸ್​ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ 159 ರನ್​ಗಳಿಗೆ ಆಲೌಟ್ ಆಗಿತ್ತು. ಕಡಿಮೆ ಸ್ಕೋರ್ ಬೆನ್ನತ್ತಿದ್ದ ಭಾರತ ಬಿಗ್ ಸ್ಕೋರ್ ಕಲೆ ಹಾಕಿ ಉತ್ತಮ ಲೀಡ್ ಪಡೆಯೋ ನಿರೀಕ್ಷೆಯಲ್ಲಿತ್ತು. ಆದ್ರೆ ಈ ಪಿಚ್​ನಲ್ಲಿ ಬೌಲರ್​​ಗಳದ್ದೇ ಪಾರುಪತ್ಯ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಭಾರತ ಕೂಡ ಜಸ್ಟ್ 30 ರನ್​ಗಳ ಲೀಡ್​ನೊಂದಿಗೆ ಅಂದ್ರೆ 189 ರನ್​ಗಳಿಗೆ ಆಲೌಟ್ ಆಯ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡ್ಸಿದ್ರು.

ಇದನ್ನೂ ಓದಿ : ಬವುಮಾಗೆ ಕುಬ್ಜ ಎಂದು ಅವಮಾನ – ಬ್ಯಾನ್ ಆಗ್ತಾರಾ ಬುಮ್ರಾ?

ಫಸ್ಟ್ ಇನ್ನಿಂಗ್ಸ್ ನಲ್ಲಿ ಯಾರಿಂದಲೂ ಬರ್ಲಿಲ್ಲ ಅರ್ಧಶತಕ!

ಮೊದಲ ದಿನದಾಟದ ಬ್ಯಾಟಿಂಗ್​ನಲ್ಲಿ 37 ರನ್​ಗಳಿಸಿ 1 ವಿಕೆಟ್ ಕಳ್ಕೊಂಡಿದ್ದ ಭಾರತದ ಪರ ಎರಡನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರು. ಇಬ್ಬರೂ ಕೂಡ 57 ರನ್​ಗಳ ಜೊತೆಯಾಟ ನಡೆಸಿದರು. ಆದ್ರೆ 29 ರನ್ ಗಳಿಸಿ ಕಾನ್ಫಿಡೆಂಟಾಗಿ ಕಾಣ್ತಿದ್ದ ಸುಂದರ್ ಹಾರ್ಮರ್​ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗಿಲ್ 4 ರನ್ ಗಳಿಸಿ ರಿಟೈರ್ಡ್ ಹರ್ಟ್ ಆದ್ರು. ಅಲ್ಲಿಂದ ಈಚೆಗೆ ಭಾರತದ ಬ್ಯಾಟಿಂಗ್ ಮೇಲೇಳಲೇ ಇಲ್ಲ. ರಾಹುಲ್ 119 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದ್ರೆ, ರಿಷಭ್ ಪಂತ್ 24 ಎಸೆತಗಳಲ್ಲಿ 27 ರನ್​, ಜಡೇಜಾ 45 ಎಸೆತಗಳಲ್ಲಿ 27 ರನ್, ಧ್ರುವ್ ಜುರೆಲ್ 14 ಎಸೆತಗಳಲ್ಲಿ 14 ರನ್, ಅಕ್ಷರ್ ಪಟೇಲ್ 45 ಎಸೆತಗಳಲ್ಲಿ 16, ಕುಲ್ದೀಪ್ ಯಾದವ್ 1, ಸಿರಾಜ್ 1 ರನ್​ಗಳಿಸಿ ಔಟ್ ಆದರು. 62.2 ಓವರ್​ಗಳಲ್ಲಿ 189 ರನ್ ಗಳಿಸಿ ಭಾರತ ಆಲೌಟ್ ಆಯ್ತು. ಭಾರತದ ಪರ ರಾಹುಲ್ 39 ರನ್ಸ್ ಗಳಿಸಿದ್ದೇ ಇಂಡಿವಿಶ್ಯುಯಲ್ ಹೈಯೆಸ್ಟ್ ಸ್ಕೋರ್ ಆಯ್ತು. ಇಂಟ್ರೆಸ್ಟಿಂಗ್ ಅಂದ್ರೆ ಫಸ್ಟ್ ಇನ್ನಿಂಗ್​​ಗಲ್ಲಿ ದಕ್ಷಿಣ ಆಫ್ರಿಕಾ ಪರ ಆಗ್ಲಿ ಭಾರತದ ಪರ ಆಗ್ಲಿ ಯಾವುದೇ ಬ್ಯಾಟರ್​ನಿಂದಲೂ ಅರ್ಧಶತಕನೂ ಬರ್ಲಿಲ್ಲ. 40ಪ್ಲಸ್ ರನ್ಸೇ ಬಂದಿಲ್ಲ. ಇನ್ನು ಫಸ್ಟ್ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಪರ ಸಿಮೋನ್ ಹಾರ್ಮರ್ 30 ರನ್​ಗಳಿಗೆ 4 ವಿಕೆಟ್, ಮಾರ್ಕೊ ಜಾನ್ಸನ್ 35ಕ್ಕೆ3, ಕಾರ್ಬಿನ್ ಬಾಷ್ 32ಕ್ಕೆ1, ಕೇಶವ್ ಮಹಾರಾಜ್ 32ಕ್ಕೆ1 ವಿಕೆಟ್ ಪಡೆದು ಭಾರತವನ್ನ ಕಟ್ಟಿಹಾಕಿದ್ರು.  ಹೀಗಾಗಿ ಎರಡನೇ ದಿನದಾಟದ ಎರಡನೇ ಸೆಷನ್​ನಲ್ಲೇ ಸೌತ್ ಆಫ್ರಿಕಾ ಎರಡನೇ ಇನ್ನಿಂಗ್ಸ್​ ಆರಂಭಿಸಿತು.

ಭಾರತಕ್ಕೆ ಕುಲ್ದೀಪ್ ಬ್ರೇಕ್ ಥ್ರ್ಯೂ.. ಜಡ್ಡು ಜ್ವಾಲೆ!

30 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಪರ ಏಡಂ ಮಾರ್ಕ್ರಂ ಹಾಗೇ ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ರು. ಇಬ್ಬರ ಪಾರ್ಟ್ನರ್ ಶಿಪ್​ ಸ್ಲೋ ಆಗೇ ಬಿಲ್ಡ್ ಆಗ್ತಿತ್ತು. ಎರಡನೇ ಸೆಷನ್​ನ ಕೊನೇ ಓವರ್​ ವೇಳೆ ಕುಲ್ದೀಪ್ ಯಾದವ್ ಭಾರತಕ್ಕೆ ಬ್ರೇಕ್ ಥ್ರ್ಯೂ ತಂದುಕೊಟ್ರು. ಟೀ ಬ್ರೇಕ್​ಗೆ ಲಾಸ್ಟ್ ಓವರ್​ನಲ್ಲಿ ಕುಲ್ದೀಪ್ ರಿಯಾನ್ ರಿಕಲ್ಟನ್ ಅವ್ರ ವಿಕೆಟ್ ತೆಗೆದ್ರು. 23 ಎಸೆತಗಳಲ್ಲಿ 11 ರನ್ ಗಳಿಸಿದ್ದ ರಿಕಲ್ಟನ್ ಕುಲ್ದೀಪ್ ಔಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ರು. ಸೋ 18 ರನ್​ಗಳಿಗೆ ಮೊದಲ ವಿಕೆಟ್ ಕಳ್ಕೊಳ್ತು. ಌಂಡ್ ಟೀ ಬ್ರೇಕ್​ನಿಂದ ಬಂದ್ಮೇಲೆ ರವೀಂದ್ರ ಜಡೇಜಾ ಅಟ್ಯಾಕ್​ಗೆ ಸೌತ್ ಆಫ್ರಿಕಾ ಬ್ಯಾಟರ್ಸ್ ಪೆವಿಲಿಯನ್ ಪರೇಡ್ ನಡ್ಸಿದ್ರು. 4 ರನ್​ಗಳಿಗೆ ಌಡಂ ಮಾರ್ಕ್ರಂ ವಿಕೆಟ್ ಒಪ್ಪಿಸಿದ್ರೆ ವಿಯಾನ್ ಮುಲ್ಡರ್ 11 ರನ್ಸ್​ಗೆ ಇನ್ನಿಂಗ್ಸ್ ಮುಗಿಸಿದ್ರು. ಟೋನಿ ಡಿ ಜೋರ್ಜಿ 2 ರನ್ಸ್​ಗೆ ಸುಸ್ತಾದ್ರು. ತಂಡದ ಮೊತ್ತು 40 ರನ್ಸ್ ಆಗುವಷ್ಟ್ರಲ್ಲೇ ನಾಲ್ಕು ವಿಕೆಟ್ ಕಳ್ಕೊಂಡಿತ್ತು ಸೌತ್ ಆಫ್ರಿಕಾ. ಹಾಗೇ ನೆಕ್ಸ್​​ಟ್ ಟ್ರಿಸ್ಟನ್ ಸ್ಟಬ್ಸ್ ಮತ್ತು ನಾಯಕ ಟೆಂಬಾ ಬವುಮಾ 20 ರನ್​ಗಳ ಜೊತೆಯಾಟ ನೀಡಿ ಉತ್ತಮವಾಗಿ ಕಾಣ್ತಿದ್ರು. ಈ ಟೈಮಲ್ಲಿ ಜಡ್ಡು ಒನ್ಸ್ ಅಗೇನ್ ಪಾರ್ಟ್ನರ್ಶಿಪ್ ಬ್ರೇಕ್ ಮಾಡಿದ್ರು. 5 ರನ್ ಗಳಿಸಿದ್ದ ಟ್ರಿಸ್ಟನ್ ಸ್ಟಬ್ಸ್ ಜಡ್ಡು ಬೌಲಿಂಗ್​ನಲ್ಲಿ ಬೌಲ್ಡ್ ಆದ್ರು. 60 ರನ್ಸ್​ಗೆ 5 ವಿಕೆಟ್ ಉರುಳಿತ್ತು. ಇನ್ನು ನೆಕ್ಸ್​ಟ್ 75 ರನ್ಸ್ ಆಗ್ತಿದ್ದಂತೆ 6ನೇ ವಿಕೆಟ್ ಢಮಾರ್. 9 ರನ್ ಗಳಿಸಿದ್ದ ಕೈಲೆ ವೆರೆಯ್ನೆ ವಿಕೆಟ್ ಒಪ್ಪಿಸಿದ್ರು. ಈ ಸಲ ಅಕ್ಷರ್ ಪಟೇಲ್ ಬೌಲ್ಡ್ ಮಾಡಿದ್ರು. ಌಂಡ್ ನೆಕ್ಸ್​ ಬಾಲ್​ನಲ್ಲೇ ಮಾರ್ಕೋ ಜಾನ್ಸೆನ್ ಗೋಲ್ಡನ್ ಡಕ್ ಅಂತಾ ಅಂಪೈರ್ ಕೂಡ ಔಟ್ ಕೊಟ್ಟಿದ್ರು. ಬಟ್ ಸೌತ್ ಆಫ್ರಿಕಾ ಡಿಆರ್​ಎಸ್ ತಗೊಂಡಿದ್ದು ಸ್ಟಂಪ್ಸ್ ಮಿಸ್ ಆಗಿ ನಾಟೌಟ್ ಅಂತಾ ಬಂತು. ಹೀಗೆ ಒಂದ್ಕಡೆ ಸಾಲು ಸಾಲು ವಿಕೆಟ್ ಬೀಳ್ತಿದ್ರೆ ಅತ್ತ ನಾಯಕ ಟೆಂಬಾ ಬವುಮಾ ಜಾವಾಬ್ದಾರಿಯುತವಾಗಿ ಬ್ಯಾಟ್ ಬೀಸ್ತಿದ್ರು. ಬಟ್ ತಂಡದ ಸ್ಕೋರ್ 91 ಇದ್ದಾಗ 7ನೇ ವಿಕೆಟ್ ಕಳ್ಕೊಂಡ್ರು. 13 ರನ್ ಗಳಿಸಿದ್ದ ಮಾರ್ಕೋ ಜಾನ್ಸೆನ್ ಕುಲ್ದೀಪ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ರು. ಸದ್ಯ ಎರಡನೇ ದಿನದಾಟದ ಅಂತ್ಯಕ್ಕೆ ಸೌತ್ ಆಫ್ರಿಕಾ 93 ರನ್​ಗಳಿಗೆ 7 ವಿಕೆಟ್ ಕಳ್ಕೊಂಡಿದೆ. ಬವುಮಾ 29 ರನ್ಸ್, ಕಾರ್ಬಿನ್ ಬಾಷ್ 1 ರನ್​ನೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಸೌತ್ ಆಫ್ರಿಕಾ 63 ರನ್​ಗಳಿಂದ ಲೀಡ್ ಪಡೆದಿದೆ. ಇನ್ನು ಭಾರತದ ಪರ ಜಡ್ಡು ನಾಲ್ಕು ವಿಕೆಟ್ ತೆಗೆದ್ರೆ ಕುಲ್ದೀಪ್ 2 ಹಾಗೇ ಅಕ್ಷರ್ 1 ವಿಕೆಟ್ ತೆಗೆದ್ರು.

ಇನ್ನು ಈ ಪಂದ್ಯದಲ್ಲಿ ಭಾರತಕ್ಕೆ ಒಂದು ಮೈನಸ್ ಏನಂದ್ರೆ ನಾಯಕ ಶುಭ್​ಮನ್ ಗಿಲ್ ಇಂಜುರಿ. ಫಸ್ಟ್ ಇನ್ನಿಂಗ್ಸ್​ನಲ್ಲಿ ಜಸ್ಟ್ ಮೂರು ಬಾಲ್ ಫೇಸ್ ಮಾಡಿ 1 ಫೋರ್ ಹೊಡ್ದಿದ್ದ ಶುಭ್​ಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಮೈದಾನದಿಂದಲೇ ಹೊರ ನಡೆದ್ರು. ರಿಟೈರ್ಡ್ ಹರ್ಟ್ ಆಗಿದ್ದ ಗಿಲ್ ಬ್ಯಾಟಿಂಗ್​ಗೆ ಬರ್ಲೇ ಇಲ್ಲ. ಸದ್ಯ ಪಂದ್ಯವನ್ನ ಉಪನಾಯಕ ರಿಷಭ್ ಪಂತ್ ಮುನ್ನಡೆಸ್ತಿದ್ದಾರೆ. ಎರಡನೇ ಇನ್ನಿಂಗ್ಸ್ ವೇಳೆಗೂ ಗಿಲ್ ಕುತ್ತಿಗೆ ನೋವು ಕಡಿಮೆಯಾಗದಿದ್ರೆ ಭಾರತದ ಪರ 10 ಪ್ಲೇಯರ್ಸ್ ಅಷ್ಟೇ ಬ್ಯಾಟ್ ಬೀಸ್ಬೇಕಾಗುತ್ತೆ. ಫೀಲ್ಡರ್ ಎಕ್ಸ್​ಟ್ರಾ ಕೊಟ್ರೂ ಕೂಡ ಬ್ಯಾಟಿಂಗ್​ಗೆ ಅವಕಾಶ ಇರೋದಿಲ್ಲ. ಸದ್ಯಕ್ಕೆ ಸೌತ್ ಆಫ್ರಿಕಾ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಂಡಿರೋದ್ರಿಂದ ಬಿಗ್ ಟಾರ್ಗೆಟ್ ಇರಲ್ಲ. ಹಾಗಂತ ಈ ಪಿಚ್​ನಲ್ಲಿ ರನ್ಸ್ ಕಲೆ ಹಾಕೋದು ಭಾರತಕ್ಕೂ ಕೂಡ ಸವಾಲಿದೆ.

Shantha Kumari