ಗಿಲ್ಲಿಗೆ ರಘುನೇ Pillow.. ಟ್ರೆಂಡ್ ಆಯ್ತು Tom & Jerry ಫೈಟ್! – ಕ್ವಾಟ್ಲೆ ಕೊಟ್ರೂ ಗಿಲ್ಲಿನೇ ಇಷ್ಟ!

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಮನರಂಜನೆ ಎಷ್ಟಿದೆಯೋ.. ಫೈಟ್-ಕುತಂತ್ರ, ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವ ಪ್ರಮಾಣವೂ ಅಷ್ಟೇ ಇದೆ. ಟ್ರೋಫಿ ಮೇಲೆ ಕಣ್ಣಿಟ್ಟ ಸ್ಪರ್ಧಿಗಳು ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡಿ ಕುಗ್ಗಿಸೋದಿಕ್ಕೆ ಟ್ರೈ ಮಾಡ್ತಿದ್ದಾರೆ. ಇವೆಲ್ಲದ್ರ ಮಧ್ಯೆ ಕ್ಯೂಟ್ ಫ್ರೆಂಡ್‌ಶಿಪ್ ಒಂದು ಬಿಲ್ಡ್ ಆಗಿದೆ… ಟಾಮ್ ಆಂಡ್ ಜೆರ್ರಿ ತರ ಕಿತ್ತಾಟ.. ಕ್ವಾಟ್ಲೆ ಕೊಟ್ರೂ ಮಜಾ ತಗೊಳ್ಳೋ ಪಾರ್ಟ್ನರ್.. ಈ ಕಿಲಾಡಿ ಜೋಡಿ ವೀಕ್ಷಕರ ಫ್ರೇವರೇಟ್.. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇವರಿಬ್ಬರದ್ದೇ ಹವಾ.. ಎಸ್ ಆ ಕಿಲಾಡಿ ಜೋಡಿ ರಘು ಮತ್ತು ಗಿಲ್ಲಿ.
ಇದನ್ನೂ ಓದಿ: ಬವುಮಾಗೆ ಕುಬ್ಜ ಎಂದು ಅವಮಾನ – ಬ್ಯಾನ್ ಆಗ್ತಾರಾ ಬುಮ್ರಾ?
ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಹೈಲೈಟ್ ಆಗ್ತಿರೋದು ಅಂದ್ರೆ ಗಿಲ್ಲಿ.. ಇಲ್ಲಿ ಪಂಚಿಂಗ್ ಡೈಲಾಗ್ಸ್.. ತಮಾಷೆಯಾಗೇ ಕೊಡೊ ಕೌಂಟರ್ ಎಲ್ಲವೂ ವೀಕ್ಷಕರಿಗೆ ಸಖತ್ ಇಷ್ಟ.. ಗಿಲ್ಲಿ ಕಾವ್ಯ ಜೊತೆಗೆ ಸಖತ್ ಕ್ಲೋಸ್.. ಎಷ್ಟು ಹೊತ್ತಿಗೂ ಕಾವು ಕಾವು ಅಂತ ಗಿಲ್ಲಿ ಕಾವ್ಯ ಜೊತೆಗೆ ಇರ್ತಾರೆ. ಇವರಿಬ್ಬರ ಪ್ಯೂರ್ ಫ್ರೆಂಡ್‌ಶಿಪ್ ಕನ್ನಡ ಜನತೆಯ ಮನಗೆದ್ದಿದೆ. ಕಾವ್ಯ ಜೊತೆ ಈಗ ಗಿಲ್ಲಿಗೆ ಹೊಸ ಫ್ರೆಂಡ್ ಸಿಕ್ಕಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟ ರಘುಗೆ ಗಿಲ್ಲಿ ತುಂಬಾ ಕ್ಲೋಸ್ ಆಗಿದ್ದಾರೆ. ಗಿಲ್ಲಿಗೆ ಈಗ ರಘುನೇ ಪಿಲ್ಲೋ ಆಗಿದ್ದಾರೆ. ರಘು ಎಲ್ಲಿ ಹೋದ್ರೂ ಅವ್ರ ಹಿಂದೆಯೇ ಸುತ್ತುತಾ ಇರ್ತಾರೆ ಗಿಲ್ಲಿ.
ರಘು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡುವಾಗಲೇ ಕಿಚ್ಚ ಸುದೀಪ್ ಬಳಿ ಗಿಲ್ಲಿ ನನಗೆ ತುಂಬಾ ಇಷ್ಟ ಅಂತಾ ಹೇಳಿದ್ರು. ದೊಡ್ಮನೆಗೆ ಬಂದ್ಮೇಲೂ ಗಿಲ್ಲಿ ಜೊತೆಗೆ ರಘು ಹೆಚ್ಚು ಕ್ಲೋಸ್ ಆಗಿದ್ದಾರೆ. ಆಟ ಅಂತಾ ಬಂದಾಗ ಆಟ.. ಉಳಿದ ಟೈಮ್‌ನಲ್ಲಿ ತುಂಟಾಟ.. ಇವರಿಬ್ಬರನ್ನ ನೋಡಿದ್ರೆ ಟಾಮ್ ಆಂಡ್ ಜೆರ್ರಿನಾ ನೋಡಿದ ತರ ಆಗುತ್ತೆ ವೀಕ್ಷಕರು ಕೂಡ ಹೇಳ್ತಿದ್ದಾರೆ. ಯಾಕಂದ್ರೆ ರಘುಗೆ ರೋದನೆ ಕೊಡೊದಂದ್ರೆ ಗಿಲ್ಲಿಗೆ ಇಷ್ಟ. ಇದ್ರಿಂದ ಮಗು ಮನಸ್ಸಿನ ರಘು ಕೂಡ ಸಖತ್ ಮಜಾ ತಗೊತಾರೆ. ರಘು ಏನಾದ್ರೂ ಸೀರಿಯಸ್ ಆಗಿ ಕೆಲ್ಸ ಮಾಡ್ತಾ ಇದ್ರೂ ಗಿಲ್ಲಿ ಬಂದು ತರ್ಲೆ ಮಾಡ್ತಾನೇ ಇರ್ತಾರೆ. ಬಂದು ಹೊಡಿಲಾ ಅನ್ನೋತರ ಸಿಗ್ನಲ್ ಕೊಡ್ತಾರೆ.. ರಘು ಗುರಾಯಿಸ್ಕೊಂಡು ಹತ್ತಿರ ಬರ್ತಿದ್ದಂತೆ ಅಣ್ಣ.. ಬೇಡಣ್ಣ.. ಕಾಲಿಗೆ ಬೀಳೀನಿ.. ಬಿಟ್ಬಿಡು ಅಂತ ಕೈ ಮುಗಿತಾರೆ.. ಇದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.
ಇನ್ನು ಗಿಲ್ಲಿ ಏನ್ ಮಾಡಿದ್ರೂ ರಘು ಸಿಟ್ಟಾಗೋದೆ ಇಲ್ಲ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ, ಬಿಬಿ ಕಾಲೇಜ್ ಟಾಸ್ಕ್.. ಗಿಲ್ಲಿ ಬಿಬಿ ಕಾಲೇಜ್ ಪ್ರಿನ್ಸಿಪಲ್ ಆಗಿದ್ದಾಗ, ಗಿಲ್ಲಿ ಕೊಟ್ಟ ರೋದನೆ ಅಷ್ಟಿಷ್ಟಲ್ಲ.. ರೆಸ್ಪೆಕ್ಟ್ ಅಂದ್ರೆ ಏನು ಅಂತ ರಘು ಕೇಳ್ತಿದ್ದಂತೆ ಗಿಲ್ಲಿ ರಘುವನ್ನೇ ಎಕ್ಸಾಂಪಲ್ ಕೊಟ್ಟು ಮಾತನಾಡಿದ್ರು. ಅಷ್ಟೆ ಅಲ್ಲ ರಘು ಪನಿಶ್ಮೆಂಟ್ ಕೊಟ್ಟಾಗಲು, ಗಿಲ್ಲಿ ಅದನ್ನ ಎಂಜಾಯ್ ಮಾಡಿದ್ರು. ನಾಯಿ ಹೊಡೆಯೋಕೆ ಬೇಕು ಒಂದು ಕೋಲು.. ಅಂತ ಹಾಡು ಹೇಳಿದ್ರು. ತನ್ನನ್ನ ಗಿಲ್ಲಿ ಆಡ್ಕೊಂಡ್ರೂ ರಘು ಒಂಚೂರು ಬೈದಿಲ್ಲ. ಒಳಗೊಳಗೆ ನಗ್ತಾರೆ.
ಇನ್ನು ದೊಡ್ಮನೆಯಲ್ಲಿ ರಘು ಗಿಲ್ಲಿಗೆ ಪಿಲ್ಲೊ ಅಂತಾ ಹೇಳಿದ್ರೆ ತಪ್ಪಾಗಲ್ಲ. ರಘು ಎಲ್ಲಿ ಹೋಗಿ ಕೂತ್ರೂ ಅಲ್ಲಿಗೆ ಗಿಲ್ಲಿ ಬಂದೇ ಬರ್ತಾರೆ. ಹೋಗಿ ರಘು ಮೇಲೆ ಮಲ್ಕೊತ್ತಾರೆ. ಬೇರೆ ಯಾರಾದ್ರೂ ರಘು ಪಕ್ಕ ಕೂತಿದ್ರೆ, ಅವರನ್ನ ಆಚೆ ಹೋಗಲು ಕಳ್ಸಿ ರಘು ಪಕ್ಕ ಕೂರ್ತಾರೆ. ಅವರ ಹೆಗಲ ಮೇಲೆ ತಲೆ ಇಟ್ಕೊಂಡೇ ಮಾತಾಡ್ತಾರೆ. ಗಿಲ್ಲಿಯನ್ನ ರಘು ತಳ್ಳಿದ್ರೂ ಮತ್ತೆ ಬಂದು ಕೂರ್ತಾರೆ. ಇದೀಗ ಈ ಜೋಡಿ ವೀಕ್ಷಕರಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಟ್ರೆಂಡ್ ಸೆಟ್ ಮಾಡಿದೆ. ಇವರಿಬ್ಬರ ಸಾಕಷ್ಟು ಫನ್ನಿ ವಿಡಿಯೋಗಳು ವೈರಲ್ ಆಗ್ತಿವೆ.

ನೋಡಿರಿ

