ಗೇಲ್ ಗೆದ್ದಿಲ್ಲ.. ABD, KLಗೂ ಸಿಕ್ಕಿಲ್ಲ – ದಾಖಲೆ ರನ್ಸ್ ಇದ್ರೂ ಕಪ್ ZERO
IPL ಟ್ರೋಫಿ ಗೆಲ್ಲದ ಸೂಪರ್ ಸ್ಟಾರ್ಸ್

ಇಂಟರ್ನ್ಯಾಷನಲ್ ಮ್ಯಾಚ್ಗಳಿಗೂ ಇಲ್ಲದಷ್ಟು ಫ್ಯಾನ್ಸ್ ಕ್ರೇಜ್ ಈಗ ಐಪಿಎಲ್ ಪಂದ್ಯಗಳಿಗಿರುತ್ತೆ. ಪ್ಲೇಆಫ್ಸ್, ಫೈನಲ್ಸ್ ಅಂತಾ ಬಂದ್ರೆ ದಾಖಲೆ ಮಟ್ಟದಲ್ಲಿ ವ್ಯೂಸ್ ಪಡೆಯುತ್ತೆ. ಜಗತ್ತಿನ ಸೂಪರ್ ಸ್ಟಾರ್ಸ್ ಪ್ಲೇಯರ್ಸ್ ಕೂಡ ಐಪಿಎಲ್ನಲ್ಲಿ ಆಡೋದ್ರಿಂದ ಅದ್ರ ಲೆವೆಲ್ಲೇ ಬೇರೆ. ವರ್ಷದಿಂದ ವರ್ಷಕ್ಕೆ ಅದ್ರ ವ್ಯಾಲ್ಯೂ ರೈಸ್ ಆಗ್ತಾನೇ ಇದೆ. ಹೀಗಿದ್ರೂ ಐಪಿಎಲ್ನಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ನೀಡಿಯೂ ಕೆಲ ದಿಗ್ಗಜ ಆಟಗಾರರಿಗೆ ಇದುವರೆಗೂ ಟ್ರೋಫಿಗೆ ಮುತ್ತಿಡೋ ಅದೃಷ್ಟನೇ ಸಿಕ್ಕಿಲ್ಲ.
ಇದನ್ನೂ ಓದಿ : ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ – ಆರ್.ಅಶೋಕ್ ಟಾಂಗ್
ವರ್ಲ್ಡ್ ಕ್ರಿಕೆಟ್ನಲ್ಲಿ ಐಸಿಸಿ ಟ್ರೋಫಿಗಳನ್ನ ಗೆಲ್ಲೋದು ಎಷ್ಟು ಪ್ರತಿಷ್ಠೆನೋ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರೋದು ಅಷ್ಟೇ ಚಾಲೆಂಜಿಂಗ್. ಯಾಕಂದ್ರೆ ಜಗತ್ತಿನ ದಿ ಮೋಸ್ಟ್ ಡೇಂಜರಸ್ ಪ್ಲೇಯರ್ಸ್ ಎಲ್ರೂ ಐಪಿಎಲ್ನಲ್ಲೇ ಬೇರೆಬೇರೆ ಟೀಮ್ಗಳಲ್ಲಿ ಆಡ್ತಾರೆ. ಌಂಡ್ ಟಫೆಸ್ಟ್ ಫೈಟ್ ಇರುತ್ತೆ. ಸೋ ಅದ್ಭುತ ಪ್ರದರ್ಶನ ನೀಡಿದ್ರೆ ಮಾತ್ರನೇ ಇಲ್ಲಿ ಸರ್ವೈವ್ ಆಗೋಕೆ ಸಾಧ್ಯವಾಗೋದು. ಹೀಗಿದ್ರೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿಯೂ ಕೆಲವರಿಗೆ ಟ್ರೋಫಿ ಕನಸು ಕನಸಾಗಿಯೇ ಉಳಿದಿದೆ. ಅದ್ರಲ್ಲೂ ಈ ಐವರು ಆಟಗಾರರು ಕಪ್ ಗೆಲ್ಲೋಕೆ ಮೋಸ್ಟ್ ಡಿಸರ್ವಿಂಗ್ ಇದ್ರೂ ಅದೃಷ್ಟ ಕೂಡಿ ಬಂದಿಲ್ಲ. ಅದ್ರಲ್ಲಿ ನಂಬರ್ 1 ನಮ್ಮ ಕನ್ನಡಿಗ ಕೆಎಲ್ ರಾಹುಲ್.
5 ಫ್ರಾಂಚೈಸಿಗಳ ಪರ ಆಡಿದ್ರೂ ಟ್ರೋಫಿ ವಂಚಿತ ರಾಹುಲ್!
ಮಾರ್ಡ್ರೆನ್ ಕ್ರಿಕೆಟ್ನಲ್ಲಿ ಕನ್ಸಿಸ್ಟೆನ್ಸಿ ಌಂಡ್ ಸ್ಟೈಲಿಶ್ ಬ್ಯಾಟ್ಸ್ಮನ್ ಗಳಲ್ಲಿ ಕೆಎಲ್ ರಾಹುಲ್ ಟಾಪ್ ಲಿಸ್ಟ್ನಲ್ಲೇ ಇರ್ತಾರೆ. 2013 ರಲ್ಲಿ 10 ಲಕ್ಷ ರೂಪಾಯಿ ಸಂಭಾವನೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ರು. ಅಲ್ಲಿಂದ ಈಚೆಗೆ ವರ್ಷದಿಂದ ವರ್ಷಕ್ಕೆ ಅವ್ರ ಪರ್ಫಾಮೆನ್ಸ್ ಬೆಟರ್ ಆಗ್ತಾನೇ ಹೋಗ್ತಿದೆ. ರಾಹುಲ್ ಇದುವರೆಗೆ ಐದು ಐಪಿಎಲ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಹಾಗೇ ನಾಯಕನಾಗಿ ತಂಡವನ್ನ ಅದ್ಭುತವಾಗಿ ಲೀಡ್ ಮಾಡಿದ್ದಾರೆ. ಹೀಗಿದ್ರೂ ಇದುವರೆಗೂ ಯಾವುದೇ ತಂಡದ ಪರವೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಈವರೆಗೂ ಐಪಿಎಲ್ನಲ್ಲಿ 145 ಪಂದ್ಯಗಳಲ್ಲಿ ಆಡಿರೋ ರಾಹುಲ್ 46.21 ರ ಸರಾಸರಿಯಲ್ಲಿ 5,222 ರನ್ ಗಳಿಸಿದ್ದಾರೆ. 136.03 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಸಾರ್ವಕಾಲಿಕ ಟಾಪ್ ಸ್ಕೋರರ್ಗಳ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ.
ಟ್ರೋಫಿ ಗೆಲ್ಲದೆಯೇ ನಿವೃತ್ತಿ ಹೇಳಿದ ಎಬಿಡಿ!
ಎಬಿ ಡಿವಿಲಿಯರ್ಸ್. ಈ ಹೆಸ್ರನ್ನಂತೂ ಭಾರತೀಯರು ಮರೆಯೋಕೆ ಚಾನ್ಸೇ ಇಲ್ಲ. ಸೌತ್ ಆಫ್ರಿಕಾ ಮೂಲದ ಆಟಗಾರನಾಗಿದ್ರೂ ತಮ್ಮ ಮನೆ ಮಗನಂತೆಯೇ ಪ್ರೀತಿಸಿದ್ದಾರೆ. ಅದ್ರಲ್ಲೂ ಆರ್ಸಿಬಿ ಅಭಿಮಾನಿಗಳ ಪಾಲಿಗಂತೂ ಎಬಿಡಿ ಅಂದ್ರೆ ಆಪತ್ಪಾಂಧವ. ವಿಶ್ವ ಕ್ರಿಕೆಟ್ನ ಮಿಸ್ಟರ್ 360 ಬ್ಯಾಟರ್ ಎಂದೇ ಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್, ಐಪಿಎಲ್ನ ಐಕಾನಿಕ್ ಪ್ಲೇಯರ್ ಆಗಿದ್ದಾರೆ. 2008 ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ ಎಬಿಡಿ ಆ ನಂತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸುದೀರ್ಘ ಪಂದ್ಯಗಳನ್ನ ಆಡಿದ್ರು. ಅದ್ಭುತ ಪ್ರದರ್ಶನದ ಹೊರತಾಗಿಯೂ ಒಮ್ಮೆಯೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. 2021ರವರೆಗೂ ಐಪಿಎಲ್ನಲ್ಲಿ ಆಡಿದ್ದ ಎಬಿಡಿ ಟ್ರೋಫಿ ಗೆಲ್ಲದೆಯೇ ತಮ್ಮ ಕರಿಯರ್ನ ಎಂಡ್ ಮಾಡಿದ್ರು. ಒಟ್ಟಾರೆಯಾಗಿ 184 ಪಂದ್ಯಗಳಲ್ಲಿ 39.71 ರ ಸರಾಸರಿಯಲ್ಲಿ 5162 ರನ್ ಗಳಿಸಿದರು. ಹಾಗೇ ಹೈಯೆಸ್ಟ್ ಸ್ಕೋರರ್ಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ.
ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಗೂ ದಕ್ಕದ ಕಪ್!
ಇನ್ನು ಆರ್ಸಿಬಿ ಫ್ಯಾನ್ಸ್ ಅತೀ ಹೆಚ್ಚು ಇಷ್ಟ ಪಡೋ ಮತ್ತೊಬ್ಬ ಆಟಗಾರ ಕ್ರಿಸ್ ಗೇಲ್. ಯೂನಿವರ್ಸ್ ಬಾಸ್ ಅಂತಾನೇ ಕರೆಸಿಕೊಳ್ಳೋ ಗೇಲ್ ಬಿಗ್ ಹಿಟ್ಗಳಿಂದಲೇ ಮನೆ ಮಾತಾದವ್ರು. ಈಗ್ಲೂ ಐಪಿಎಲ್ನಲ್ಲಿ ಗೇಲ್ ಬರೆದಿರೋ ಕೆಲ ದಾಖಲೆಗಳನ್ನ ಯಾರಿಂದಲೂ ಬ್ರೇಕ್ ಮಾಡೋಕೆ ಆಗಿಲ್ಲ. ಕೆಕೆಆರ್, ಪಂಜಾಬ್, ಡೆಲ್ಲಿ, ಮುಂಬೈ, ಗುಜರಾತ್ ಹಾಗೇ ಬೆಂಗಳೂರು ಪರ ಪಂದ್ಯಗಳನ್ನ ಆಡಿದ್ರು. ಆದ್ರೆ 6 ತಂಡಗಳ ಪರ ಆಡಿದ್ರೂ ಎಲ್ಲಿಯೂ ಕಪ್ ಗೆಲ್ಲೋಕೆ ಸಾಧ್ಯವಾಗಲಿದೆ. 2013 ರಲ್ಲಿ 30 ಎಸೆತಗಳಲ್ಲಿ ಶತಕ ಗಳಿಸಿದ ಗೇಲ್ ಐಪಿಎಲ್ನಲ್ಲಿ ಅತ್ಯಂತ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ. ಹಾಗೇ ಒಂದೇ ಮ್ಯಾಚಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಅಜೇಯ 175 ರನ್ಗಳ ವೈಯಕ್ತಿಕ ಸ್ಕೋರ್ ಇದೆ. ಹಾಗೇ ಇದೇ ಪಂದ್ಯದಲ್ಲಿ 17 ಸಿಕ್ಸರ್ ಬಾರಿಸಿದ್ರು. ಈ ರೆಕಾರ್ಡ್ಗಳನ್ನ ಇಂದಿಗೂ ಯಾರಿಂದಲೂ ಬ್ರೇಕ್ ಮಾಡೋಕೆ ಆಗಿಲ್ಲ. ಒಟ್ಟಾರೆಯಾಗಿ 142 ಪಂದ್ಯಗಳಲ್ಲಿ 4,965 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಹೈಯೆಸ್ಟ್ ರನ್ ಸ್ಕೋರರ್ಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಬಟ್ ಕಪ್ ಅನ್ನೋದು ಕನಸಾಗೇ ಉಳಿದಿದೆ.
ಸಂಜು ಸ್ಯಾಮ್ಸನ್ ಗೂ ಸಿಕ್ಕಿಲ್ಲ ಐಪಿಎಲ್ ಟ್ರೋಫಿ!
ಇನ್ನು ಐಪಿಎಲ್ನ ಮತ್ತೊಬ್ಬ ಸ್ಟಾರ್ ಬ್ಯಾಟರ್ ಌಂಡ್ ಕ್ಯಾಪ್ಟನ್ ಸಂಜು ಸ್ಯಾಮ್ಸಸ್. 2013 ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಲ ಪಂದ್ಯಗಳನ್ನ ಆಡಿದ್ದ ಸಂಜು ಬಳಿಕ ಮತ್ತೆ ಆರ್ಆರ್ಗೆ ಮರಳಿದ್ರು. ಌಂಡ್ 2021 ರಿಂದ ನಾಯಕನಾಗಿ ಲೀಡ್ ಮಾಡ್ತಿದ್ದಾರೆ. ಐಪಿಎಲ್ನಲ್ಲಿ ಈವರೆಗೂ 176 ಪಂದ್ಯಗಳಲ್ಲಿ ಆಡಿರೋ ಸ್ಯಾಮ್ಸನ್ 4,704 ರನ್ ಗಳಿಸಿದ್ದಾರೆ. ಲೀಗ್ನ ಇತಿಹಾಸದಲ್ಲಿ 14ನೇ ಟಾಪ್ ಮೋಸ್ಟ್ ರನ್ ಸ್ಕೋರರ್ ಆಗಿದ್ದಾರೆ. ಬಟ್ ಟ್ರೋಫಿ ಅನ್ನೋದು ಸಂಜು ಪಾಲಿಗೂ ಇನ್ನೂ ಮರೀಚಿಕೆಯಾಗಿದೆ.
ಸಂಭಾವನೆಯಲ್ಲಿ ದಾಖಲೆ ಬರೆದ ಪಂತ್ ಗೂ ಸಿಕ್ಕಿಲ್ಲ ಕಪ್!
ಇನ್ನು ಟೀಂ ಇಂಡಿಯಾ ಹಾಗೇ ಐಪಿಎಲ್ನ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ರದ್ದೂ ಸೇಮ್ ಸಿಚುಯೇಷನ್. ನಿರ್ಭೀತ ಬ್ಯಾಟಿಂಗ್ಗೆ ಹೆಸರುವಾಸಿಯಾದ ರಿಷಭ್ ಪಂತ್ 2016 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಇನ್ನು 2025 ರಲ್ಲಿ ಎಲ್ಎಸ್ಜಿ ಫ್ರಾಂಚೈಸಿ ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಐಪಿಎಲ್ ಆಟಗಾರ ಎನಿಸಿಕೊಂಡಿದ್ದಾರೆ. ಈವರೆಗೂ ಐಪಿಎಲ್ನಲ್ಲಿ ಪಂತ್ 125 ಪಂದ್ಯಗಳಲ್ಲಿ 3553 ರನ್ ಗಳಿಸಿದ್ದಾರೆ, ಆದರೆ ಐಪಿಎಲ್ ಪ್ರಶಸ್ತಿ ಮಾತ್ರ ಇನ್ನೂ ದಕ್ಕಿಲ್ಲ. ಇವ್ರೆಲ್ಲರೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯೋಕೆ ಸರ್ವಸಮರ್ಥರೂ ಆಗಿದ್ದಾರೆ. ಬಟ್ ಎಬಿಡಿ ಌಂಡ್ ಕ್ರಿಸ್ ಗೇಲ್ ನಿವೃತ್ತಿ ಘೋಷಿಸಿದ್ದು 2025ರಲ್ಲಿ ಆರ್ಸಿಬಿ ಕಪ್ ಗೆದ್ದಾಗ ತಂಡದ ಜೊತೆಗೇ ಇದ್ದು ಸೆಲೆಬ್ರೇಟ್ ಮಾಡಿದ್ರು. ಆದ್ರೆ ರಾಹುಲ್, ಪಂತ್ ಮತ್ತು ಸಂಜು ಇನ್ನೂ ಒಂದಷ್ಟು ವರ್ಷಗಳ ಐಪಿಎಲ್ ಆಡೋದಂತೂ ಪಕ್ಕಾ.

ನೋಡಿರಿ

