ರಕ್ಷಿತಾ ಆಟಕ್ಕೆ ಮನೆಮಂದಿ ಶಾಕ್‌! – ರಕ್ಷು ಆಟದ ಬಗ್ಗೆ ಅಪಸ್ವರ ತೆಗೆದ ಕಾವ್ಯಾ

ರಕ್ಷಿತಾ ಆಟಕ್ಕೆ ಮನೆಮಂದಿ ಶಾಕ್‌! – ರಕ್ಷು ಆಟದ ಬಗ್ಗೆ ಅಪಸ್ವರ ತೆಗೆದ ಕಾವ್ಯಾ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮೊದಲ ದಿನದಿಂದಲೇ ಟಾರ್ಗೆಟ್‌ ಸ್ಪರ್ಧಿ. ಸಣ್ಣವಳು ಎಂಬ ಕಾರಣಕ್ಕೆ ಕೆಲವರು ಆಕೆಯನ್ನ ಲೈಟ್‌ ಆಗಿ ತೆಗೆದುಕೊಂಡಿದ್ದೂ ಇದೆ. ಆದ್ರೀಗ ರಕ್ಷಿತಾ ಚೆಕ್‌ಮೇಟ್‌ ಆಟಕ್ಕೆ ಮನೆಮಂದಿ ಶಾಕ್‌ ಆಗಿದ್ದಾರೆ. ಇದೀಗ ಕಾವ್ಯ ಶೈವ ರಕ್ಷಿತಾ ಆಟದ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಇದನ್ನೂ ಓದಿ: ಈಡೇರಿದ ಕಬ್ಬು ಬೆಳೆಗಾರರ ಬೇಡಿಕೆ! – ಮುಧೋಳದಲ್ಲಿ ರೈತರ ಹೋರಾಟ ಸುಖಾಂತ್ಯ!

ಹೌದು.. ಬಿಗ್‌ ಬಾಸ್‌ ಮನೆಯಲ್ಲಿ ಕಿರಿಯ ಸ್ಪರ್ಧಿ ಎಂದರೆ ಅದು ರಕ್ಷಿತಾ ಶೆಟ್ಟಿ. ಆಕೆಗೆ ಇನ್ನೂ 24 ವರ್ಷ. ಆದ್ರೂ ದೊಡ್ಮನೆಯಲ್ಲಿ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಆದ್ರೆ ಈ ವಾರ ರಕ್ಷಿತಾ ಶೆಟ್ಟಿ ಕೆಲವು ತಪ್ಪುಗಳನ್ನು ಮಾಡಿದ್ರು. ರಘುನ ನಾಮಿನೇಟ್ ಮಾಡಬೇಕು ಎಂದು ಹಠ ಹಿಡಿದರು. ಆ ಬಳಿಕ ಇದು ತಪ್ಪು ನಿರ್ಧಾರ ಎಂಬುದು ಅವರಿಗೆ ಅರಿವಾಗಿತ್ತು. ಈ ಅರಿವು ಮಾಡಿಸಿದ್ದು ಕಾವ್ಯಾ ಅವರೇ. ಆದ್ರೀಗ ರಕ್ಷಿತಾ ಆಟ ನೋಡಿ ಕಾವ್ಯ ಶೈವ ಶಾಕ್‌ ಆಗಿದ್ದಾರೆ. ಆಕೆಯ ಆಟದ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

ಸ್ಪಂದನಾ ಹಾಗೂ ಕಾವ್ಯಾ ಅವರು ಎದುರುಬದುರು ಕುಳಿತು ಕೆಲವು ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಈ ವೇಳೆ ಸ್ಪಂದನಾ ಅವರು, ‘ರಕ್ಷಿತಾ ಮಾಡಿದ್ದು ಸರಿ ಎಂದು ನಿನಗೆ ಅನಿಸುತ್ತಿದೆಯೇ’ ಎಂದು ಕೇಳಿದರು. ಇದಕ್ಕೆ ಕಾವ್ಯಾ ಉತ್ತರಿಸಿದರು. ಅವರ ಮಾತುಗಳಲ್ಲಿ ಅಸಮಾಧಾನ ಸ್ಪಷ್ಟವಾಗಿ ಕಾಣಿಸುತ್ತಾ ಇತ್ತು.

‘ತಪ್ಪು ನಿರ್ಧಾರ ತೆಗೆದುಕೊಂಡಾಗ ಪ್ರಬುದ್ಧತೆ ಇಲ್ಲ ಪಾಪ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅವಳು ಸರಿಯಾದ ನಿರ್ಧಾರ ತೆಗೆದುಕೊಂಡಾಗ ಚಿಕ್ಕವಳಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡಳು ಎಂದು ಆಗುತ್ತಿದೆ. ಈ ಕಾರಣಕ್ಕೆ ಅವಳು ಯಾರ ಬಳಿಯೂ ವಯಸ್ಸು ಹೇಳುತ್ತಾ ಇರಲಿಲ್ಲ. ಸುದೀಪ್ ಅವರು ಕೇಳಿದ ಮೇಲೆ ವಯಸ್ಸು ಹೇಳಿದಳು’ ಎಂದಿದ್ದಾರೆ ಕಾವ್ಯಾ.

‘ಎಲ್ಲಾ ಪರಿಸ್ಥಿತಿಗಳು ಅವಳ ಪರವಾಗಿಯೇ ಇದೆ’ ಎಂದರು ಕಾವ್ಯಾ. ‘ಅವಳು ಸ್ಟ್ರೆಟಜಿ ಮಾಡುತ್ತಿಲ್ಲ, ಹೊರಗೆ ಇರುವ ರೀತಿಯೇ ಇದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವೇ ಆಗುತ್ತಿಲ್ಲ’ ಎಂದು ಸ್ಪಂದನಾ ಹೇಳಿದರು. ಈ ವಿಷಯ ವೀಕೆಂಡ್​ನಲ್ಲಿ ಚರ್ಚೆಗೆ ಬರೋ ಸಾಧ್ಯತೆ ಇದೆ.

Shwetha M