ದೆಹಲಿ ಕಾರು ಬ್ಲಾ*ಸ್ಟ್ ಕೇಸ್ – ಸ್ಪೋ*ಟದ ರೂವಾರಿ ಉಮರ್ ಮನೆ ಧ್ವಂಸ!

ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಪೋಟ ಪ್ರಕರಣದ ತನಿಖೆ ಚುರುಕುಕೊಂಡಿದ್ದು, ಒಂದೊಂದೇ ರಹಸ್ಯಗಳು ರಿವೀಲ್ ಆಗ್ತಿದೆ. ಇದೀಗ ತನಿಖೆ ವೇಳೆ ಕಾರು ಸ್ಪೋಟದ ರೂವಾರಿ ಉಮರ್ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಉಗ್ರ ಉಮರ್ನ ಮನೆಯನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಮತ ಎಣಿಕೆ ಆರಂಭ – ಎನ್ಡಿಎಗೆ ಭಾರೀ ಮುನ್ನಡೆ
ದೆಹಲಿಯಲ್ಲಿ ನಡೆದ ಕಾರು ಸ್ಪೋಟದ ವೇಳೆ ಉಮರ್ ಸಾವನ್ನಪ್ಪಿದ್ದಾನೆ. ಈ ಬೆನ್ನಲ್ಲೇ ಅಧಿಕಾರಿಗಳು ಡಾ.ಉಮರ್ ನಬಿ ತಾಯಿಯ ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್ಎಗೆ ಉಮರ್ ತಾಯಿ ಡಿಎನ್ಎ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿದ್ದ ಉಗ್ರ ಉಮರ್ನ ಮನೆಯನ್ನು ಶುಕ್ರವಾರ ನೆಲಸಮಗೊಳಿಸಿದ್ದಾರೆ. ಈ ಮೂಲಕ ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುವವರಿಗೆ ಇಲ್ಲಿ ಜಾಗವಿಲ್ಲ ಎಂಬುವುದನ್ನು ತೋರಿಸಿವೆ. ಇದಕ್ಕೂ ಮೊದಲು ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿಯೂ ಕೃತ್ಯದಲ್ಲಿ ಭಾಗಿಯಾದವರ ಮನೆಯನ್ನು ಧ್ವಂಸಗೊಳಿಸಲಾಗಿತ್ತು.
ಸೋಮವಾರ (ನ.10) ದೆಹಲಿ ಕೆಂಪು ಕೋಟೆಯಲ್ಲಿ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ ಒಟ್ಟು 13 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟಕ್ಕೂ ಮುನ್ನ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಹುಂಡೈ ಐ20 ಕಾರಿನಲ್ಲಿ ಉಮರ್ ಇರುವುದು ಕಂಡುಬಂದಿತ್ತು.

ನೋಡಿರಿ

