ವಧು-ವರನಿಗೆ ಆಶೀರ್ವದಿಸಲು ಮದುವೆ ಮಂಟಪಕ್ಕೆ ಬಂದ ತಿರುಪತಿ ತಿಮ್ಮಪ್ಪ!

ಈಗೇನಿದ್ರೂ ಡೆಸ್ಟಿನೇಷನ್ ವೆಡ್ಡಿಂಗ್. ತಾವು ಅಂದುಕೊಂಡಂತೆ ಮದುವೆ ನಡಿಲೇಬೇಕು ಅನ್ನೋ ಮನಸ್ಥಿತಿ. ಹೀಗಾಗಿ ದಿನ ಕಳೆದಂತೆ ಮದುವೆ ವೈಭವ ಹೆಚ್ಚಾಗ್ತಾನೇ ಇದೆ. ನಾವೇನು ಕಮ್ಮಿನಾ ಎನ್ನುವಂತೆ ಹೊಸ ಹೊಸ ಕಾನ್ಸೆಪ್ಟ್, ಭಿನ್ನ ಪದ್ಧತಿಗಳನ್ನು ಮದುವೆಯಲ್ಲಿ ಕಾಣಬಹುದು. ಇದೀಗ ಇಲ್ಲೊಂದು ಕಡೆ ಮದುವೆ ಮಂಟಪಕ್ಕೆ ಸಾಕ್ಷಾತ್ ಶ್ರೀನಿವಾಸನೇ ಬಂದು ವಧು, ವರರಿಗೆ ಆಶಿರ್ವಾದ ಮಾಡಿದ್ದಾರೆ. ಇದ್ರ ವಿಡಿಯೋ ವೈರಲ್ ಆಗ್ತಿದೆ.
ಇದನ್ನೂ ಓದಿ: ಮಗುವಂತೆ ಶ್ವಾನವನ್ನ ಹೆಗಲ ಮೇಲೆ ಕೂರಿಸಿಕೊಂಡು ಊರೂರು ಸುತ್ತಿದ ಯುವಕ!
ಹಿಂದೆಲ್ಲ ಮದುವೆ ಸಿಂಪಲ್ ಆದ್ರೂ ಪರವಾಗಿಲ್ಲ. ವಧು, ವರರಿಗೆ ದೇವರ ಅನುಗ್ರಹ ಇದ್ರೆ ಸಾಕು ಎಂದು ಹಿರಿಯರು ಹೇಳ್ತಿದ್ರು. ಆದ್ರೆ ಬೆಂಗಳೂರಿನಲ್ಲಿ ನಡೆದ ಮದುವೆ ಒಂದರಲ್ಲಿ ಮಂಟಪಕ್ಕೆ ವಧು, ವರರಿಗೆ ಆಶಿರ್ವಾದ ಮಾಡಲು ತಿರುಪತಿ ತಿಮ್ಮಪ್ಪನೇ ಬಂದಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದೆ.
ವೈರಲ್ ಆದ ವಿಡಿಯೋದಲ್ಲಿ, ವಧು – ವರರು ವೇದಿಕೆ ಮೇಲಿದ್ದಾರೆ. ಅವರ ಹಿಂದೆ ಸಂಬಂಧಿಕರು ನಿಂತಿದ್ದಾರೆ. ಸುಂದರವಾಗಿ ಅಲಂಕಾರಗೊಂಡ ವೇದಿಕೆ ಮೇಲೆ ಹೊಗೆ ಬರೋದನ್ನು ಕಾಣ್ಬಹುದು. ಆ ನಂತ್ರ ನಿಧಾನವಾಗಿ ವೆಂಕಟೇಶ್ವರ ಸ್ವಾಮಿ ನಡೆದು ಬರ್ತಾನೆ. ಇದನ್ನು ನೋಡಿದ ವಧು – ವರರು ಮಂಡಿಯೂರಿ ಕುಳಿತು ನಮಸ್ಕಾರ ಮಾಡ್ತಾರೆ. ಅವರ ಬಳಿ ಬರುವ ವೆಂಕಟೇಶ್ವರ ಸ್ವಾಮಿ, ಹೂವನ್ನು ವಧು ವರರ ತಲೆಯ ಮೇಲೆ ಹಾಕಿ ಆಶೀರ್ವಾದ ನೀಡುತ್ತಾರೆ. ತಲೆಯ ಮೇಲೆ ಕಿರೀಟ, ಬಂಗಾರದ ಆಭರಣ, ಉಡುಪನ್ನು ನೋಡಿದ್ರೆ ನಿಜವಾಗಿಯೂ ವೆಂಕಟೇಶ್ವರ ಸ್ವಾಮಿಯೇ ಇಳಿದು ಬಂದಂತಿದೆ. ಹೂವಿನ ಆಶೀರ್ವಾದ ಆಗ್ತಿದ್ದಂತೆ ಪಟಾಕಿ ಸದ್ದನ್ನು ನೀವು ಕೇಳ್ಬಹುದು. ಒಟ್ಟಿನಲ್ಲಿ ಮದುವೆ ಮನೆಗೆ ಸ್ವತಃ ದೇವರೇ ಬಂದು ಆಶೀರ್ವಾದ ನೀಡಿದ್ದಾನೆ ಎನ್ನವು ಕಲ್ಪನೆಯನ್ನು ಅಲ್ಲಿ ಮೂಡಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಾಸ್ಯದ ಡೈಲಾಗ್ ಜೊತೆ ಪೋಸ್ಟ್ ಮಾಡಲಾಗಿದೆ. ನಾವು : ನಾವು ಸರಳ ಮದುವೆ ಬಯಸುತ್ತೇವೆ. ಪಾಲಕರು : ದೇವರ ಆಶೀರ್ವಾದದ ಜೊತೆ ಸರಳ ವಿವಾಹ. ಈ ಮಧ್ಯೆ ದೇವರ ಆಶೀರ್ವಾದ ಅಂತ ಶೀರ್ಷಿಕೆ ಹಾಕಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿದ ಕೆಲವರು ಇದನ್ನು ವಿರೋಧಿಸಿದ್ದಾರೆ. ಸಂಪ್ರದಾಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ದೇವರ ಬಟ್ಟೆ ಧರಿಸಿದ್ರೆ, ವೇಷ ಹಾಕಿದ್ರೆ ಅವರು ದೇವರಾಗಲು ಸಾಧ್ಯವಿಲ್ಲ. ಹಿರಿಯರಿಗೆ ಕಿರಿಯ ವ್ಯಕ್ತಿ ಆಶೀರ್ವಾದ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
View this post on Instagram

ನೋಡಿರಿ

