ರಾಶಿಕಾ ಕಣ್ಣು ಸ್ಪಂದನಾ ಮೇಲೆ – ಹೊಟ್ಟೆಕಿಚ್ಚಿಗೆ ಅವಕಾಶ ಕಳೆದುಕೊಂಡರಾ ರಾಶಿಕಾ ಶೆಟ್ಟಿ..!

ಬಿಗ್‌ಬಾಸ್ ಮನೆಯಲ್ಲಿ ಸೇಫ್ ಆಗಲು ಅವಕಾಶ ಸಿಗುವುದೇ ಕಡಿಮೆ. ಅಂಥಾದ್ರಲ್ಲಿ ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಂಡರೆ ಅವರಷ್ಟು ದಡ್ಡರು ಇನ್ನೊಬ್ಬರಿಲ್ಲ. ಇದೀಗ ರಾಶಿಕಾ ಶೆಟ್ಟಿ ದಡ್ಡತನ ತೋರಿಸಿ ಕೈಗೆ ಸಿಕ್ಕ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಶಿಕಾಗೆ ಕೂಗಾಟವೇ ಮುಳುವಾಯ್ತಾ? – ಸಿಕ್ಕ ಅವಕಾಶವನ್ನೂ ಕಳೆದುಕೊಂಡ್ರಾ?
ಬಿಗ್‌ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಕಿರುಚಾಡುವುದು, ಅವಾಕಾಶ ಸಿಗ್ತಿಲ್ಲ ಅಂತಾ ಕಣ್ಣೀರು ಹಾಕುವುದನ್ನ ಎಲ್ಲರೂ ನೋಡಿದ್ದೀರಾ. ಇದೀಗ ಕೈಗೆ ಸಿಕ್ಕ ಅವಕಾಶವನ್ನು ಅವರೇ ಹಾಳುಮಾಡಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಇದು ರಾಶಿಕಾ ಅಹಂಕಾರವೋ, ದಡ್ಡತನವೋ.. ಅಂತೂ ಕೈಗೆ ಬಂದ ಅವಕಾಶ ಕೈ ತಪ್ಪಿಹೋಗಿದೆ. ರಾಶಿಕಾ ಶೆಟ್ಟಿ ಅವರು ಈ ವಾರ ಉತ್ತಮವಾಗಿ ಆಟ ಆಡಿದರು. ಅವರ ತಂಡ ಗೆದ್ದಿತು. ಈ ವೇಳೆ ತಮ್ಮನ್ನು ತಾವು ನಾಮಿನೇಷನ್ನಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ, ಇದಕ್ಕೆ ರಕ್ಷಿತಾ ಶೆಟ್ಟಿ ಅವಕಾಶ ಕೊಡಲಿಲ್ಲ. ಅವರು ಹಠ ಬಿದ್ದು, ಸುಧಿಯನ್ನು ಸೇವ್ ಮಾಡಬೇಕು ಎಂದರು. ಅವಕಾಶ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಪ್ಪಿಕೊಂಡರು. ಆ ಬಳಿಕ ಮತ್ತೊಂದು ಟಾಸ್ಕ್ ಗೆದ್ದಾಗ ರಾಶಿಕಾ ಅವರನ್ನು ನಾಮಿನೇಷನ್ನಿಂದ ಬಚಾವ್ ಮಾಡಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದರು. ಈ ರೀತಿ ಸೇವ್ ಮಾಡಿದಾಗ ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಮುಂದೆ ಬರುವ ಆಟದ ದೃಷ್ಟಿಯಿಂದ ಅಭಿಯನ್ನು ನಾಮಿನೇಟ್ ಮಾಡಬೇಕು ಎಂಬುದು ತಂಡದ ನಿರ್ಧಾರ ಆಗಿತ್ತು. ಆದರೆ, ಇದಕ್ಕೆ ರಾಶಿಕಾ ಒಪ್ಪಿಗೆ ಸೂಚಿಸಲೇ ಇಲ್ಲ. ರಾಶಿಕಾ, ಸ್ಪಂದನಾ ನಾಮಿನೇಟ್ ಆಗಬೇಕು ಎಂದು ಹಠ ಹಿಡಿದರು. ಅವರನ್ನು ನಾಮಿನೇಟ್ ಮಾಡಿ ತಂಡಕ್ಕೆ ಸೇರಿಸಿಕೊಂಡರೆ ಟೀಂ ಬಲ ಕಡಿಮೆ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ ಆಗಿತ್ತು. ಆದರೆ, ರಾಶಿಕಾ ಮಾತ್ರ ಹಠ ಬಿಡಲೇ ಇಲ್ಲ. ಕೊನೆಗೂ ಒಮ್ಮತದ ನಿರ್ಧಾರಕ್ಕೆ ಬರಲೇ ಇಲ್ಲ. ಹೀಗಾಗಿ ರಾಶಿಕಾಗೆ ಸಿಕ್ಕ ದೊಡ್ಡ ಅವಕಾಶ ಕೈ ತಪ್ಪಿಹೋಗಿದೆ.
ಈ ಬಗ್ಗೆ ಬಿಗ್ ಬಾಸ್ ಕೂಡಾ ಮನದಟ್ಟು ಮಾಡಿದರು. ನೀವೆಷ್ಟು ದೊಡ್ಡ ಅವಕಾಶ ಕಳೆದುಕೊಂಡಿದ್ದೀರಿ ಎಂಬ ಪರಿಜ್ಞಾನ ನಿಮಗೆ ಇಲ್ಲ ಎಂದು ಬಿಗ್ ಬಾಸ್ ಹೇಳಿದರು. ರಾಶಿಕಾಗೆ ಸ್ಪಂದನಾ ಮೇಲೆ ಸಿಟ್ಟೋ, ಹೊಟ್ಟೆಯುರಿಯೋ ಅದೇನೇ ಇರಲಿ, ಕೈಗೆ ಬಂದ ಅವಕಾಶವನ್ನು ದಡ್ಡತನದಿಂದ ತಪ್ಪಿಸಿಕೊಂಡಿದ್ದಂತೂ ನಿಜ.

ನೋಡಿರಿ

