ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ನಟಿ ನಯನತಾರಾ ದಂಪತಿ – ದೇಗುಲದಲ್ಲಿ ಸರ್ಪ ಸಂಸ್ಕಾರ ಪೂಜೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತೊಬ್ಬರು ಸ್ಟಾರ್ ದಂಪತಿ ಆಗಮಿಸಿ ಹರಕೆ ನೆರವೇರಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತವಾಗಿರುವ ನಟಿ ನಯನತಾರಾ ಅವರು ಪತಿ, ನಿರ್ದೇಶಕ ವಿಘ್ನೇಷ್ ಶಿವನ್ ಅವರೊಟ್ಟಿಗೆ ಕುಕ್ಕೆಗೆ ಆಗಮಿಸಿದ್ದರು. ಇತ್ತೀಚೆಗಷ್ಟೇ ಬಾಲಿವುಡ್ ಸ್ಟಾರ್ ದಂಪತಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಭೇಟಿ ನೀಡಿದ್ದರು,
ಇದನ್ನೂ ಓದಿ:ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ – ಜಿಕೆವಿಕೆಯಲ್ಲಿ ಇವತ್ತಿನಿಂದ ಕೃಷಿ ಕಲರವ
ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬುಧವಾರ ಆಗಮಿಸಿದ್ದರು. ದೇವಸ್ಥಾನಕ್ಕೆ ಆಗಮಿಸಿದ ನಟಿ ನಯನತಾರಾ ಸರ್ಪ ಸಂಸ್ಕಾರ ಪೂಜೆಯನ್ನು ನೆರವೇರಿಸಿದರು. ಈ ವೇಳೆ ದೇವಾಲಯದ ಪ್ರಮುಖ ಅರ್ಚಕರು ಪೂಜೆಯನ್ನು ನೆರವೇರಿಸಿಕೊಟ್ಟರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿಗೆ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಿದರು.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಸರ್ಪ ಸಂಸ್ಕಾರ ಸೇವೆ ಮಾಡಿಸಿದ್ದು ಹೌದು. ಇದು ಅವರ ಹರಕೆ ಸೇವೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ವಿಚಾರಕ್ಕಾಗಿ ಈ ಸೇವೆ ಮಾಡಿದ್ದಾರೆ ಅನ್ನೋದು ತಿಳಿದುಬಂದಿಲ್ಲ. ಈ ವಿಚಾರದ ಬಗ್ಗೆ ಸ್ಟಾರ್ ದಂಪತಿ ಕೂಡಾ ಏನೂ ಹೇಳಿಕೊಂಡಿಲ್ಲ.

ನೋಡಿರಿ

