ಫ್ಲೈಓವರ್ ಪಿಲ್ಲರ್ ಪಿಲ್ಲರ್ ಹತ್ತಿ ಕುಳಿತ ಭೂಪ! – ಮಲಗೋಕೆ ಬೇರೆ ಜಾಗನೇ ಸಿಕ್ಕಿಲ್ವಾ?

ರಸ್ತೆ ಬದಿ, ಬಸ್‌ಸ್ಟ್ಯಾಂಡ್‌ಗಳಲ್ಲಿ ನಾವು ಮಲಗೋದನ್ನ ನೋಡಿದ್ದೇವೆ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಲಕ್ಷಣಕಾರಿ ದೃಶ್ಯವೊಂದು ಕಂಡುಬಂದಿದೆ. ವ್ಯಕ್ತಿಯೊಬ್ಬ ಜಾಲಹಳ್ಳಿ ಕ್ರಾಸ್‌ನಲ್ಲಿ ಮೆಟ್ರೋ ಪಿಲ್ಲರ್ ಮೇಲೆ ಹತ್ತಿ ಆರಾಮವಾಗಿ ಮಲಗಿಕೊಂಡಿದ್ದಾನೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಡೇಟಿಂಗ್‌ಗೆ ಕರೆದು ಲಾಡ್ಜ್‌ಗೆ ಕರ್ಕೊಂಡು ಹೋದ ಸುಂದರಿ! – ರೂಮ್‌ಗೆ ಬರ್ತಿದ್ದಂತೆ ಯುವಕನಿಗೆ ಕಾದಿತ್ತು ಶಾಕ್!
ಜಾಲಹಳ್ಳಿಯಲ್ಲಿ ಹಾದುಹೋಗಿರುವ ತುಮಕೂರು ರಸ್ತೆಯ ದೊಡ್ಡ ಫ್ಲೈಓವರ್‌ನ ಕಂಬ ಹಾಗೂ ಮೇಲಿನ ರಸ್ತೆಯ ನಡುವಿನ ಕಿರಿದಾದ ಜಾಗದಲ್ಲಿ ವ್ಯಕ್ತಿಯೊಬ್ಬ ಆರಾಮಾಗಿ ಮಲಗಿರುವುದು ಕಂಡುಬಂದಿದೆ. ಬಳಿಕ ಆತ ಎದ್ದು ಕುಳಿತು ಜನಗಳನ್ನು ನೋಡುತ್ತಿರುವುದು ಕಂಡುಬಂದಿದೆ. ಜನ ಇದನ್ನು ನಂಬಲಾಗದವರಂತೆ ಸುತ್ತಲೂ ಜಮಾಯಿಸಿ ವೀಕ್ಷಿಸಿದ್ದಾರೆ. ಸೇತುವೆಯ ಸ್ಲ್ಯಾಬ್ ಮತ್ತು ಕಂಬದ ನಡುವೆ ಇರುವ ಈ ಸ್ಥಳದಲ್ಲಿ ಬಗ್ಗಿ ಹರಿದಾಡುವುದು ಬಿಟ್ಟರೆ ಇನ್ನೇನೂ ಮಾಡಲು ಸಾಧ್ಯವಿಲ್ಲ. ಪಾರಿವಾಳಗಳು ಮಾತ್ರ ಇರಬಹುದಾದ ಜಾಗದಲ್ಲಿ ಈತ ಹೇಗೆ ಬಂದ? ಆ ವ್ಯಕ್ತಿ ಅಷ್ಟೊಂದು ಎತ್ತರದ ಜಾಗಕ್ಕೆ ಯಾವುದೇ ಏಣಿಯಂಥ ಆಧಾರವಲ್ಲದೆ ಹೇಗೆ ಹತ್ತಿದ, ಅಲ್ಲಿ ಹೇಗೆ ಇದ್ದಾನೆ ಎಂಬುದು ಆಶ್ಚರ್ಯಕರವಾಗಿದೆ. ಆದ್ರೆ ಆತ ತನ್ನ ಸುತ್ತಮುತ್ತ ಇಷ್ಟು ಜನ ಸೇರಿದ್ರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.
“ಇದು ಹತಾಶೆಯೋ ನಿರ್ಲಕ್ಷ್ಯವೋ? ಜಾಲಹಳ್ಳಿ ಕ್ರಾಸ್‌ನಲ್ಲಿ ಫ್ಲೈಓವರ್ ಪಿಲ್ಲರ್ ಒಳಗೆ ಮಲಗಿದ್ದ ವ್ಯಕ್ತಿ ಕಂಡುಬಂದಿರುವುದು ನಗರ ಬಡತನದ ಕಠೋರ ವಾಸ್ತವವನ್ನು ಎತ್ತಿ ತೋರಿಸುತ್ತದೆ” ಎಂಬ ಕ್ಯಾಪ್ಷನ್ ಹಾಕಿ ಒಬ್ಬರು ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಪೀಣ್ಯ ಠಾಣೆಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದ್ದಾರೆ. ತನಿಖೆಯ ನಂತರ ವಿಚಾರ ಏನೆಂಬುದು ಗೊತ್ತಾಗಲಿದೆ.
Desperation or Neglect? Man Found Sleeping Inside Flyover Pillar at Jalahalli Cross Highlights Harsh Reality of Urban Poverty
A shocking incident was reported from Jalahalli Cross, where a man was found sleeping inside a hollow section of a flyover pillar. The bizarre sight… pic.twitter.com/s6EWWLnqcO
— Karnataka Portfolio (@karnatakaportf) November 11, 2025

ನೋಡಿರಿ

