ಡೇಟಿಂಗ್‌ಗೆ ಕರೆದು ಲಾಡ್ಜ್‌ಗೆ ಕರ್ಕೊಂಡು ಹೋದ ಸುಂದರಿ! – ರೂಮ್‌ಗೆ ಬರ್ತಿದ್ದಂತೆ ಯುವಕನಿಗೆ ಕಾದಿತ್ತು ಶಾಕ್!

ಈಗೀಗ ಡೇಟಿಂಗ್ ಆಪ್‌ಗಳದ್ದೇ ಕಾರುಬಾರು.. ಆಪ್‌ನಲ್ಲಿ ಪರಿಚಯವಾದ ನಾಲ್ಕೇ ದಿನಕ್ಕೆ ಪ್ರೀತಿ ಅಂತಾ ಹೇಳಿಕೊಂಡು ತಿರುಗಾಡುತ್ತಾರೆ. ಹುಡುಗಿ ಅಂದ ನೋಡಿ ಹುಡುಗರು ಮರುಳಾಗುತ್ತಾರೆ. ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಹುಡುಗಿಯರ ಬಣ್ಣದ ಮಾತು ನಂಬೋ ಮುನ್ನ ಎಚ್ಚರ. ಸ್ಪಲ್ಪ ಯಾಮಾರಿದ್ರೂ ಇರೋದನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯನ್ನ ನಂಬಿ ಚಿನ್ನ, ದುಡ್ಡು ಕಳ್ಕೊಂಡಿದ್ದಾರೆ.
ಇದನ್ನೂ ಓದಿ: ರಾಶಿಕಾಗೆ ಕೂಗಾಟವೇ ಮುಳುವಾಯ್ತಾ? – ಸಿಕ್ಕ ಅವಕಾಶವನ್ನೂ ಕಳೆದುಕೊಂಡ್ರಾ?
ಡೇಟಿಂಗ್ ಆಪ್‌ಗಳಲ್ಲಿ ಹಣ ಕಟ್ಟಿ ರಿಜಿಸ್ಟರ್ ಮಾಡ್ಕೊಂಡ್ರೆ ಹುಡುಗನದ್ದೋ ಹುಡುಗಿಯದ್ದೋ ನಂಬರ್ ಸಿಗುತ್ತೆ. ಅಮೇಲೆ ಶುರುವಾಗೋದೇ ಅಸಲಿ ಆಟ. ಕೆಲ ಘಟನೆಗಳಲ್ಲಿ ಹೆಣ್ಣುಮಕ್ಕಳು ಯಾಮಾರಿದ್ರೆ, ಇನ್ನೂ ಕೆಲ ಪ್ರಕರಣಗಳ್ಳಲ್ಲಿ ಗಂಡುಹೈಕಳನ್ನೇ ಯಾಮಾರಿಸುವ ಖತರ್ನಾಕ್ ಮಹಿಳೆಯರು ಇರ್ತಾರೆ. ಇದೀಗ ಬೆಂಗಳೂರಿನ ಇಂದಿರಾನಗರ ವ್ಯಕ್ತಿಯೊಬ್ಬರು ಸರಿಯಾಗೇ ಯಾಮಾರಿದ್ದಾರೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಾಯಗಾತಿ ನಂಬಿ ಲಾಡ್ಜ್‌ಗೆ ಹೋಗಿದ್ದ ಯುವಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ಕಳೆದುಕೊಂಡಿದ್ದಾರೆ.
ಸ್ಥಳೀಯ ಯುವಕನಿಗೆ Happn app ಡೇಟಿಂಗ್ ಆಪ್‌ನಲ್ಲಿ 2 ತಿಂಗಳ ಹಿಂದೆ ಕವಿಪ್ರಿಯಾ ಹೆಸರಿನ ಮಾಯಗಾತಿ ಪರಿಚಯವಾಗಿದ್ದಾಳೆ. ನವೆಂಬರ್ 1ರಂದು ಇಬ್ಬರೂ ಇಂದಿರಾನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು. ಎಣ್ಣೆ ಪಾರ್ಟಿ ಕೂಡ ಮಾಡಿದ್ದರು. ಎಣ್ಣೆ ಪಾರ್ಟಿ ಬಳಿಕ ಕವಿಪ್ರಿಯಾ ಯುವಕನನ್ನ ಲಾಡ್ಜ್‌ಗೆ ಕರೆದೊಯ್ದಿದ್ದಾಳೆ. ಮಧ್ಯರಾತ್ರಿ ತಾನೇ ಊಟ ಆರ್ಡರ್ ಮಾಡಿ ತರಿಸಿಕೊಂಡಿದ್ದಾಳೆ. ನಂತರ ಕವಿಪ್ರಿಯಾ ಕೊಟ್ಟ ನೀರು ಕುಡಿದ ಯುವಕ ಪ್ರಜ್ಞೆ ತಪ್ಪಿದ್ದಾನೆ. ಬೆಳಗ್ಗೆ ಕಣ್ಣು ಬಿಟ್ಟು ನೋಡಿದ್ರೆ ಆಕೆಯೂ ಇರಲಿಲ್ಲ. ತನ್ನ ಬಳಿ ಇದ್ದ ಚಿನ್ನ, ಹಣ ಎಲ್ಲವೂ ನಾಪತ್ತೆಗಿದೆ. ದುಬಾರಿ ಹೆಡ್ ಸೆಟ್, 28 ಗ್ರಾಂ. ಚಿನ್ನದ ಸರ, 30 ಗ್ರಾಂ ಚಿನ್ನದ ಕೈ ಬಳೆ, 10 ಸಾವಿರ ರೂ. ನಗದು ಸೇರಿ ಒಟ್ಟು 6.89 ಲಕ್ಷದ ವಸ್ತುಗಳು ನಾಪತ್ತೆಯಾಗಿದೆ. ಸದ್ಯ ಹಣ, ಚಿನ್ನ ಕಳೆದುಕೊಂಡ ಯುವಕ ಘಟನೆ ಸಂಬಂಧ ಇಂದಿರಾನಗರದ ಠಾಣೆಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಗಾಗಿ ಶೋಧ ಆರಂಭಿಸಿದ್ದಾರೆ.

ನೋಡಿರಿ

