ಆಕಸ್ಮಿಕ ಸ್ಫೋ*ಟವಾದ್ರೂ ಟಾರ್ಗೆಟ್ ಏನಿತ್ತು? ಚಿಕ್ಕ ಮಿಸ್ಟೇಕ್‌ನಿಂದ ದೊಡ್ಡ ಪ್ಲ್ಯಾನ್ ಹಾಳು!
ಫೇಲ್ ಆಗಿದ್ದು ಎಲ್ಲಿ ಬಾ*ಬರ್ ಉಮರ್?

ಆಕಸ್ಮಿಕ ಸ್ಫೋ*ಟವಾದ್ರೂ ಟಾರ್ಗೆಟ್ ಏನಿತ್ತು? ಚಿಕ್ಕ ಮಿಸ್ಟೇಕ್‌ನಿಂದ ದೊಡ್ಡ ಪ್ಲ್ಯಾನ್ ಹಾಳು!ಫೇಲ್ ಆಗಿದ್ದು ಎಲ್ಲಿ ಬಾ*ಬರ್ ಉಮರ್?

ಸೋಮವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ನೆತ್ತರೋಕುಳಿ ಹರಿದಿರೋದು ನಿಮ್ಗೆಲ್ಲಾ ಗೊತ್ತಿದೆ.. ಬಟ್ ವಿಷ್ಯ ಏನಪ್ಪ ಅಂದ್ರೆ ಈ ಒಂದು ಸ್ಫೋ*ಟ ಬೇಕಂತ ಆಗಿದ್ದು ಅಲ್ಲ, ಇದು ಆಕಸ್ಮಿಕವಾಗಿ ಆಗಿದ್ದು ಅನ್ನೋ ಪ್ರಾಥಮಿಕ ವರದಿ ಬಂದಿದೆ.. ಹಾಗಂತ ಇದು ಕಾರಿನ ಗ್ಯಾಸ್ ಟ್ಯಾಂಕ್ ಬ್ಲಾಸ್ಟ್ ಆಗಿದ್ದು ಅಲ್ಲ, ಶಾರ್ಟ್‌ಸೆರ್ಕ್ಯೂಟ್ ಆಗಿದ್ದು ಅಲ್ಲ.. ಕಾರಿನಲ್ಲಿ ಬ್ಲಾಸ್ಟ್ ಆಗಿದ್ದು ಸ್ಪೋಟಕನೇ, ಆದ್ರೆ ಅದು ಬೇಕಂತ ಮಾಡಿದ್ದು ಅಲ್ಲ.. ಹಾಗಂತ ಇದು ಉಗ್ರ ಕೃತ್ಯ ಅಲ್ವಾ ಅನ್ನೋ ಪ್ರಶ್ನೆ ಎಳುತ್ತೆ ..ಅದ್ದಕ್ಕೆ ಉತ್ತರ ಇದು ಉಗ್ರ ಕೃತ್ಯವೇ.

ಕೇಂಪು ಕೋಟೆ ಬಳಿ ಆಗಿದ್ದು ಪ್ಲ್ಯಾನ್ ಮಾಡಿ ಮಾಡಿದ ಬ್ಲಾಸ್ಟ್ ಅಲ್ಲ.  ನಮ್ಮ ರಾಜ್ಯದಲ್ಲಿ 2023ರಲ್ಲಿ ಒಂದು ಕುಕ್ಕರ್ ಬಾಂಬ್ ಆಟೋದಲ್ಲಿ ಬ್ಲಾಸ್ಟ್ ಆಗಿತ್ತು. ಅಲ್ಲು ಕೂಡ ಆಕಸ್ಮಿಕ ಬ್ಲಾಸ್ಟ್ ಆಗಿತ್ತು. ಆಕಸ್ಮಿಕ ಬಯೋತ್ಪಾದಕರ ಟಾರ್ಗೆಟ್ ಮಿಸ್ಸ್ ಆಗಿತ್ತು ಅಷ್ಟೇ. ಅಂದ್ರೆ ದಕ್ಷಿಣ ಕನ್ನಡದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸೋಕೆ ಪ್ಲ್ಯಾನ್ ಮಾಡಲಾಗಿತ್ತು. ಬಟ್ ಅಂದು ಟೆಕ್ನಿಕಲ್ ಪ್ರಾಬ್ಲಂನಿಂದ ಆಟೋದಲ್ಲಿ ಬ್ಲಾಸ್ಟ್ ಆಗಿತ್ತು. ಹಾಗೇ ಈಗ ದೆಹಲಿಯಲ್ಲಿ ಆಗಿರುವುದು.. ಬೇರೆ ಕಡೆ ಸ್ಫೋಟ ಮಾಡೋಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ಅದು ಆಕಸ್ಮಿಕವಾಗಿ ಮತ್ತೊಂದು ಕಡೆ ಬ್ಲಾಸ್ಟ್ ಆಗಿತ್ತು. ಈಗ ದೆಹಲಿಯಲ್ಲಿ ಆಗಿರುವುದು ಕೂಡ ಅದೇ ರೀತಿ.

ಭಯದಿಂದ ಕಾರಿನಲ್ಲಿ ಬ್ಲಾಸ್ಟ್‌ ಆಯ್ತಾ?

ದೆಹಲಿಯಲ್ಲಿ ಆಗಿರೋ ಸ್ಫೋ*ಟ ಆತ್ಮ*ಹತ್ಯಾ ದಾಳಿಯಲ್ಲ ಅನ್ನೋದು ಮೆಲ್ನೋಟಕ್ಕೆ ಗೊತ್ತಾಗ್ತಿದೆ.. ಉ*ಗ್ರರು ಸ್ಫೋಟಕಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಿದಾಗ ಮಾಡಿದ ಒಂದು ಮಿಸ್ಟೇಕ್ ಇದ್ದಕ್ಕೆ ಕಾರಣ ಎನ್ನಲಾಗ್ತಿದೆ. ಒಂದು ವೇಳೆ ಈ ಬ್ಲಾಸ್ಟ್ ಆಗಿಲ್ಲ ಅಂದ್ರೆ ಬೇರೆ ಕಡೆ ಅದೇ ಬ್ಲಾಸ್ಟ್ ಇನ್ನೂ ನೂರಾರು ಜನರ ಪ್ರಾಣವನ್ನ ಬಲಿ ಪಡೆಯುತಿತ್ತು ಅನ್ನೋದು ಸತ್ಯ..

ಅಂದಹಾಗೇ ಹರ್ಯಾಣದ ಫರಿದಾಬಾದ್ ನ ಮನೆಯೊಂದರ ಮೇಲೆ ಕೆಲ ದಿನಗಳ ಹಿಂದೆ ಕೇಂದ್ರದ ತನಿಖಾ ದಳಗಳು ದಾಳಿ ನಡೆಸಿದ್ರು. ಇಲ್ಲಿ  2,900 ಕೆಜಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ರು..  ಪುಲ್ವಾಮದಲ್ಲೂ ಕೂಡ ಸಾಕಷ್ಟು ಪ್ರಾಣಮದಲ್ಲಿ ಸ್ಫೋಟ*ಕವನ್ನ ವಶಕ್ಕೆ ಪಡೆದಿದ್ರು.. ಇದು   ದೆಹಲಿಯಲ್ಲಿದ್ದ ಶಂಕಿತ ಉಗ್ರ ಡಾ. ಉಮರ್ ಮೊಹಮ್ಮದ್ ನಬಿಗೆ ಮತ್ತು ಅವನ ಗ್ಯಾಂಗ್ ಭಯ ಹುಟ್ಟಿಸಿದೆ.. ನಮ್ಮ ಮೇಲೆ ದಾಳಿ ಮಾಡಿ ನಮ್ಮನ್ನ ಅರೆಸ್ಟ್ ಮಾಡಿದ್ರೆ ಹೇಗೆ ಅಂತ ತಮ್ಮಲ್ಲಿದ್ದ ಸ್ಫೋಟಕಗಳನ್ನು ಬೇರೆ ಕಡೆ ತಗೊಂಡು ಹೋಗಿ ಸೇಫ್ ಆಗಿ ಇಡೋಕೆ ಟ್ರೈ ಮಾಡಿದ್ದಾರೆ. ಅದಕ್ಕಾಗಿಯೇ, ಅವರು ಸೋಮವಾರ ದೆಹಲಿಯ ಸಾಕಷ್ಟು ಭಾಗಗಳಲ್ಲಿ ಅಲೆದಾಡಿದ್ದಾರೆ. ಅದೇ ಪ್ರಯತ್ನದಲ್ಲಿದ್ದಾಗಲೇ ಅದು ಸ್ಫೋಟಗೊಂಡಿದೆ ಅನ್ನೋದು ತಜ್ಞರ ಊಹೇ.. ಹೀಗೆ ಊಹೇ ಮಾಡೋಕೆ ಕಾರಣ ಕೂಡ ಉಂಟು. ಒಂದು ವೇಳೆ ಇದು ಆತ್ಮಹತ್ಯಾ ದಾಳಿ ಆಗಿದ್ರೆ ಜನ ಇರೋ ರಸ್ತೆಯಲ್ಲೋ,   ಜನ ಜಾಸ್ತಿ ಇರೋ ಕಟ್ಟಡದ ಬಳಿ ಸ್ಫೋಟ ಮಾಡ್ತಾ ಇದ್ದ.. ಇವರು ಟಾರ್ಗೆಟ್ ಕೂಡ ಹತ್ತಿಪ್ಪತ್ತು ಜನ ಆಗಿರಲ್ಲ.. ನೂರಾರು ಜನ ಆಗಿರ್ತಾರೆ.  ಇಲ್ಲಿ ಏನ್ ಆಗಿದೆ ಅಂದ್ರೆ ರಸ್ತೆಯ ಮಧ್ಯದಲ್ಲಿ ಕಾರನ್ನು ಬ್ರೇಕ್ ಹಾಕಿ ನಿಲ್ಲಿಸಿದಾಗ ಕಾರಿನಲ್ಲಿದ್ದ ಸ್ಫೋಟ*ಕದ ವೈರ್ ಗಳು ಅಥವಾ ಮತ್ಯಾವುದೋ ಭಾಗವು ಒಂದಕ್ಕೊಂದ ತಾಗಿ ಸ್ಫೋಟವಾಗಿರುವಂತೆ ಕಾಣುತ್ತಿದೆ ಅಂತ  ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗೇ ನಮಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟ ಆಗುತ್ತೆ ಹಾಗೇ

ಬಾ*ಬ್ ತಯಾರಿಸುವಲ್ಲಿ ಫೇಲ್ ಆದ ಉಮರ್‌?

ಇನ್ನೊಂದು ಮಾಹಿತಿ ಏನಪ್ಪ ಅಂದ್ರೆ ಉಮರ್ ತಪ್ಪು ಮಾಡಿದ್ನಾ ಅನ್ನೋದು.. ರೈಡ್ ಆಗ್ತಾ ಇದೆ, ನಾನು ಹೇಗಾದ್ರೂ ಮಾಡಿ ಬ್ಲಾಸ್ಟ್ ಮಾಡಬೇಕು ಅನ್ನೋ ಆತುರದಲ್ಲಿ ಡಾ. ಉಮರ್ ಮಹಮ್ಮದ್ ತಾನೇ ಸ್ವತಃ ಈ ಬಾಂಬ್ ತಯಾರಿಸಿದ್ದಾನೆ ಅನ್ಸುತ್ತೆ.. ಆದರೆ,ಅವನ ಅದ್ರಲ್ಲ ಎಕ್ಸ್ ಪರ್ಟ್ ಅಲ್ಲ ಅನ್ಸುತ್ತೆ.. ಬಾ*ಬ್‌ನ ಹೇಗ್ ಬೇಕೋ ಹಾಗೇ  ಜೋಡಿಸಿದ್ದಾನೆ ಅನ್ಸುತ್ತೆ..  3 ಗಂಟೆ  ಕಾರಿನಲ್ಲಿ ಕುತ್ತು ಅದೇ ಕೆಲಸವನ್ನ ಮಾಡಿದ್ದಾನೆ ಇರಬೇಕು.. ಸರಿಯಾಗಿ ಜೋಡಿಸಿದ ಕಾರಣ ಬಾಂಬ್ ನ ಯಾವುದೋ ಒಂದು ಕಡೆ ಲೂಸ್ ಕನೆಕ್ಷನ್ ಆಗಿ ಕೆಂಪು ಕೋಟೆ ಮೆಟ್ರೋ ಸ್ಟೇಷನ್ ಬಳಿಯ ಸಿಗ್ನಲ್ ಹತ್ತಿರ ಬಂದಾಗ ವೈರ್ ಗಳು ತಾಗಿನೋ ಅಥವಾ ಯಾವುದೋ  ಟೆಕ್ನಿಕಲ್ ಪ್ರಾಬ್ಲಂನಿಂದ ಸ್ಫೋಟ ಆಗಿದೆ ಅನ್ನೋ ವರದಿ ಕೂಡ ಆಗಿದೆ. ಬಟ್ ಇಲ್ಲಿ ಒಂದು ಅಂತೂ ಸತ್ಯ ಅವನು ಅಲ್ಲಿ ಸ್ಫೋಟ ಮಾಡಬೇಕು ಅಂತ ಇಲ್ಲದಿದ್ರೂ ಬೇರೆ ಕಡೆ ಮಾಡಲೇ ಅಂತಲೇ ಅವನು ಪ್ಲ್ಯಾನ್ ಮಾಡಿದ್ದು, ಬಟ್ ಅದು ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ತರ ಆಗಿದೆ ಅಷ್ಟೇ..

ಇನ್ನೂ  ಘಟನೆಯಾಗಿ ಎರಡು ದಿನ ಆಗಿದ್ರೂ ಯಾವುದೇ ಉಗ್ರ ಸಂಘಟನೆಗಳು ಇದರ ಹೊಣೆ ಹೊತ್ತಿಲ್ಲ. ಇದೂ ಸಹ ಇದು ಆತ್ಮಹತ್ಯಾ ದಾಳಿಯಲ್ಲ, ಆಕಸ್ಮಿಕ ಸ್ಫೋಟ ಅನ್ನೋದ್ದಕ್ಕೆ ಒಂದಷ್ಟು  ಪುಷ್ಠಿ ನೀಡಿದೆ. ಇದೆಲ್ಲಾ ಕೂಡ ತಜ್ಞರ ಅಭಿಪ್ರಾಯ ಅಷ್ಟೇ.. ಇದ್ರ ಬಗ್ಗೆ ತನಿಖೆ  ನಡೆಯುತ್ತಿದ್ದು ಕೇಂದ್ರ ಸರ್ಕಾರವಾಗಲೀ, ತನಿಖಾಧಿಕಾರಿಗಳಾಗಲೀ ಯಾರೂ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ಮುಂಬೈ ದಾಳಿಯ ಮಾದರಿಯಲ್ಲಿ ಸರಣಿ ದಾಳಿಗೆ ಪ್ಲ್ಯಾನ್

6/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿಯಲ್ಲಿ ಸರಣಿ ದಾಳಿ ನಡೆಸಲು ಭಯೋತ್ಪಾದಕರು ಬಯಸಿದ್ರಂತೆ..  ಕೆಂಪು ಕೋಟೆ, ಇಂಡಿಯಾ ಗೇಟ್, ಗೌರಿ ಶಂಕರ್ ದೇವಾಲಯ ಸೇರಿದಂತೆ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಪ್ರಮುಖ ಸ್ಥಳಗಳು ಇವರ ಟಾರ್ಗೆಟ್ ಆಗಿತ್ತು..  ಇನ್ನು ಇದು ಇವತ್ತು ನಿನ್ನೆಯ ಪ್ಲ್ಯಾನ್ ಅಲ್ಲ, ಜನವರಿಯಿಂದ ಈ ಪಿತೂರಿ ನಡೆಯುತ್ತಿತ್ತು. ದೆಹಲಿಯಲ್ಲಿ ಮಾತ್ರವಲ್ಲದೆ ಗುರುಗ್ರಾಮ್ ಮತ್ತು ಫರಿದಾಬಾದ್‌ ಕೂಡ ಟಾರ್ಗೆಟ್ ಆಗಿತ್ತು. ಈ ಗುಂಪು 200 ಶಕ್ತಿಶಾಲಿ  ಐಇಡಿಗಳನ್ನ ಅಂದ್ರೆ  ಬಾಂಬ್‌ಗಳನ್ನು ಸಿದ್ಧಪಡಿಸುತ್ತಿತ್ತು ಅನ್ನೋ ಬೆಚ್ಚಿ ಬೀಳಿಸುವ ಮಾಹಿತಿ ಕೂಡ ಹೊರ ಬಿದ್ದಿದೆ.

 

Kishor KV