ರಾಶಿಕಾಗೆ ಕೂಗಾಟವೇ ಮುಳುವಾಯ್ತಾ? – ಸಿಕ್ಕ ಅವಕಾಶವನ್ನೂ ಕಳೆದುಕೊಂಡ್ರಾ?

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಈ ವಾರ ಮಾಳು ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಬೆನ್ನಲ್ಲೇ ರಾಶಿಕಾ, ದ್ರುವಂತ್, ಸುಧಿ, ರಕ್ಷಿತಾ, ಅಶ್ವಿನಿ ಹಾಗೂ ಜಾಹ್ನವಿಯನ್ನು ಈ ವಾರ ನಾಮಿನೇಟ್ ಮಾಡಿದ್ದಾರೆ. ನಾಮಿನೇಟ್‌ನಿಂದ ಪಾರಾಗಲು ಬಿಗ್‌ಬಾಸ್ ನಿನ್ನೆ ಟಾಸ್ಕ್ ಕೂಡ ಕೊಟ್ಟಿದ್ದು, ರಾಶಿಕಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಟಾಸ್ಕ್‌ನಲ್ಲಿ ಗೆದ್ರೂ ರಾಶಿಕಾ ಈಗ ಮಾತಿನಿಂದ ಸಿಕ್ಕ ಚಾನ್ಸ್ ಕೂಡ ಮಿಸ್ ಆದಂತೆ ಕಾಣುತ್ತಿದೆ.
ಇದನ್ನೂ ಓದಿ: ತಿಮರೋಡಿ ಗ್ಯಾಂಗ್ ಗೆ ಮತ್ತೆ ಬಂಧನದ ಭೀತಿ! – ಎಸ್‌ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ಹೌದು, ಬಿಗ್ ಬಾಸ್ ಟಾಸ್ಕ್‌ನಲ್ಲಿ ಗೆದ್ದ ನಾಮಿನೇಟೆಡ್ ತಂಡ ಈಗ ತಮ್ಮಲ್ಲಿ ಒಬ್ಬರನ್ನು ಸೇಫ್ ಮಾಡಿ ಸೇಫ್ ಇರೋ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡುವ ಅವಕಾಶವನ್ನು ನೀಡಲಾಗಿತ್ತು. ಟಾಸ್ಕ್‌ನಲ್ಲಿ ರಾಶಿಕಾ ಚೆನ್ನಾಗಿ ಆಟ ಆಡಿರೋದ್ರಿಂದ ತಾನು ಸೇಫ್ ಆಗುತ್ತೇನೆ ಅಂದುಕೊಂಡಿದ್ರು. ಅಶ್ವಿನಿ ಹಾಗೂ ಉಳಿದವರು ರಾಶಿಕಾ ಹೆಸರನ್ನ ತೆಗೆದುಕೊಳ್ತಿದ್ದಂತೆ ಕಾಕ್ರೋಚ್ ಸುಧಿಯೂ ತಾವು ಸೇಫ್ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಇವರಿಬ್ಬರ ನಡುವೆ ವೋಟಿಂಗ್ ನಡೆದಾಗ ಎಲ್ಲರೂ ರಾಶಿಕಾರನ್ನು ಬೆಂಬಲಿಸಿದ್ರೆ, ರಕ್ಷಿತಾ ಮಾತ್ರ ಸುಧಿಗೆ ಸಪೋರ್ಟ್ ಮಾಡಿದ್ದಾರೆ.
ಇದು ರಾಶಿಕಾ ಹಾಗೂ ರಕ್ಷಿತಾ ನಡುವೆ ಜಗಳಕ್ಕೆ ಕಾರಣವಾಗಿದೆ. ಇಂಥ ಒಬ್ಬರು ವಿಷಕಾರಿ ತಂಡದಲ್ಲಿದ್ರೆ ಯಾರು ಸೇಫ್ ಆಗೋಕಾಗಲ್ಲ ಎಂದು ರಾಶಿಕಾ ಕಿಡಿಕಾರಿದ್ದಾರೆ. ಮಾತ್ರವಲ್ಲ ಕಳೆದ ನಾಲ್ಕು ವಾರದಿಂದ ತಾನು ನಾಮಿನೇಟೆಡ್ ಆಗಿರೋದ್ರಿಂದ ಈ ವಾರವಾದ್ರೂ ತನಗೆ ಸೇಫ್ ಆಗೋ ಅವಕಾಶ ಕೊಡಬೇಕು ಎಂದಿದ್ದಾರೆ. ಇದಕ್ಕೆ ಉತ್ತರಿಸಿರೋ ರಕ್ಷಿತಾ ತಾನೂ ಅಷ್ಟೂ ವಾರಗಳಿಂದ ನಾಮಿನೇಟ್ ಆಗೇ ಇರೋದ್ರಿಂದ ಆ ಕಾರಣಕ್ಕೆ ಸೇಫ್ ಮಾಡೋದು ಸರಿಯಲ್ಲ ಎಂದು ವಾದಿಸಿದ್ದಾರೆ.
ರಕ್ಷಿತಾ ನಾಮಿನೇಟೆಡ್ ತಂಡದಲ್ಲಿದ್ರೂ ಅವರಿಗೆ ಟಾಸ್ಕ್ ವಿಷ್ಯ ಬಂದಾಗ ಆಟ ಆಡುವ ಅವಕಾಶವನ್ನೇ ನೀಡಿರಲಿಲ್ಲ. ಅದೇ ಅವರ ಈ ನಿರ್ಧಾರಕ್ಕೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ತಂಡ ಯಾರನ್ನ ಆಯ್ಕೆ ಮಾಡಿಕೊಂಡಿದೆ. ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಆಯ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ನೋಡಿರಿ

