ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ – ಜಿಕೆವಿಕೆಯಲ್ಲಿ ಇವತ್ತಿನಿಂದ ಕೃಷಿ ಕಲರವ

ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ – ಜಿಕೆವಿಕೆಯಲ್ಲಿ ಇವತ್ತಿನಿಂದ ಕೃಷಿ ಕಲರವ

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನವೆಂಬರ್ 13 ರಿಂದ 16 ರವರೆಗೆ ನಡೆಯಲಿರುವ ಕೃಷಿ ಮೇಳ ನಡೆಯಲಿದೆ. ಇವತ್ತಿನಿಂದ (ಗುರುವಾರ) ನಡೆಯುವ ಕೃಷಿಮೇಳಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ರೈತರು ಆಗಮಿಸುತ್ತಿದ್ದಾರೆ. ವೀಕೆಂಡ್‌ನಲ್ಲಿ ಜನಪ್ರವಾಹವೇ ಹರಿದುಬರಲಿದೆ. ಈ ಬಾರಿ ಕೃಷಿಮೇಳ ವಿಶೇಷತೆಯೇನು ಅನ್ನೋದರ ವರದಿ ಇಲ್ಲಿದೆ.

ಇದನ್ನೂ ಓದಿ:ಬೆಲ್ಲ Vs ಸಕ್ಕರೆ.. ಮಕ್ಕಳ ಆರೋಗ್ಯಕ್ಕೆ ಯಾವುದು ಬೆಸ್ಟ್?

ಸಮೃದ್ಧ ಕೃಷಿ ವಿಕಸಿತ ಭಾರತ-ನೆಲ, ಜಲ, ಬೆಳೆ ಘೋಷವಾಕ್ಯದಡಿ ಕೃಷಿಮೇಳದ ಕಲರವ ಇವತ್ತಿನಿಂದ ಶುರುವಾಗಿದೆ. ನವೆಂಬರ್ 13ರಿಂದ 16ರವರೆಗೆ ನಾಲ್ಕು ದಿನಗಳವರೆಗೆ ಕೃಷಿಮೇಳ ನಡೆಯಲಿದೆ. ಕೃಷಿಮೇಳದಲ್ಲಿ ಐದು ಹೊಸ ಬೆಳೆ ತಳಿಗಳು, ಆಧುನಿಕ ಕೃಷಿ ಪದ್ಧತಿಗಳು, ಯಂತ್ರೋಪಕರಣಗಳು, ಮತ್ತು ಪಶುಸಂಗೋಪನೆ ಮಾಹಿತಿ ಲಭ್ಯವಿರಲಿದೆ.ಬಹೂಪಯೋಗಿ ಆಕರ್ಷಕ ಮತ್ತು ದುಬಾರಿ ಬೆಲೆಯ ಜಾನುವಾರುಗಳು, ವಿನೂತನ ತಳಿಗಳು, ಸಣ್ಣ ಮತ್ತು ಬೃಹತ್‌ ಯಂತ್ರೋಪಕರಣಗಳು ಮೇಳದ ಪ್ರಮುಖ ಆಕರ್ಷಣೆಗಳು.

ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ಮೇಳ ನಡೆಯಲಿದೆ. ಈ ಬಾರಿ ಸೂರ್ಯಕಾಂತಿ, ಮೇವಿನ ಜೋಳ, ಅರಿಶಿಣ, ಹರಳು ಸೇರಿದಂತೆ ಐದು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಬೆಳೆಗಳನ್ನು ತಾಕುಗಳಲ್ಲಿ ಬೆಳೆಸಲಾಗಿದೆ. ಜೊತೆಗೆ, ಹಲವು ಕೃಷಿ ಬೆಳೆಗಳು ಹೂ-ಕಾಯಿ, ತೆನೆಗಳಿಂದ ನಳನಳಿಸುತ್ತಿವೆ. ಹುಚ್ಚೆಳ್ಳು, ಸಿರಿಧಾನ್ಯಗಳು, ಏರೋಬಿಕ್‌ ಭತ್ತ, ಅವರೆ, ಮುಸುಕಿನ ಜೋಳ, ಹರಳು, ತರಕಾರಿ ಸೊಪ್ಪು ಹೀಗೆ ಹಲವು ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಕಣ್ತುಂಬಿಕೊಳ್ಳಬಹುದು.

”ಸುಧಾರಿತ ಕೃಷಿ ಪದ್ಧತಿಗಳು, ನೂತನ ತಳಿಗಳು, ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ, ಮಣ್ಣುರಹಿತ ಕೃಷಿ, ಔಷಧೀಯ ಮತ್ತು ಸುಗಂಧದ್ರವ್ಯ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ, ಸಮಗ್ರ ಬೇಸಾಯ ಪದ್ಧತಿಗಳು, ರೇಷ್ಮೆ ಕೃಷಿ, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯಗಳು, ಕೀಟ ಹತೋಟಿ, ಪೋಷಕಾಂಶಗಳ ನಿರ್ವಹಣೆ, ಮಾರುಕಟ್ಟೆ ನೈಪುಣ್ಯತೆ, ಮಣ್ಣು ಪರೀಕ್ಷೆ, ಹನಿ ಮತ್ತು ತುಂತುರು ನೀರಾವರಿ, ಮಳೆ ನೀರಿನ ಕೊಯ್ಲು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ಯಂತ್ರೋಪಕರಣಗಳು, ಪಶು ಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಮೀನು ಸಾಕಾಣಿಕೆ, ಕೃಷಿ ಪ್ರವಾಸೋದ್ಯಮ, ರೈತರಿಗಾಗಿ ರೈತರಿಂದ ಚರ್ಚೆ ಹಾಗೂ ರೈತರಿಗೆ ತಜ್ಞರಿಂದ ಸಲಹೆಯಂತಹ ಹಲವು ಬಗೆಯ ಆಕರ್ಷಣೆಗಳು, ಪ್ರಾತ್ಯಕ್ಷಿಕೆಗಳು ಹಾಗೂ ಮಾಹಿತಿಯು ಕೃಷಿ ಮೇಳದಲ್ಲಿ ಲಭ್ಯವಿರಲಿದೆ, ಎಂದು ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ರಘುಪ್ರಸಾದ್‌ ತಿಳಿಸಿದರು.

ಹೆಚ್ಚು ಇಳುವರಿ ನೀಡುವ ಜೋಳ, ಸೂರ್ಯಕಾಂತಿಯ ತಳಿಗಳನ್ನೂ ಕೃಷಿ ವಿವಿ ಸಂಶೋಧಿಸಿದೆ. ಮಧ್ಯಮ ಎತ್ತರದ ಮಧ್ಯಮಾವಧಿಯ ಜೋಳದ ಸಿಎನ್‌ಜಿಎಸ್‌-1 ತಳಿಯನ್ನು ಸಂಶೋಧಿಸಿದ್ದು, 100 ರಿಂದ 105 ದಿನಗಳಲ್ಲಿಕಟಾವಿಗೆ ಬರಲಿದೆ. 84 ರಿಂದ 86 ದಿನಗಳಲ್ಲಿಕಟಾವಿಗೆ ಬರುವ ಸೂರ್ಯಕಾಂತಿಯ ಕೆಬಿಎಸ್‌ಎಚ್‌-88 ತಳಿಯನ್ನು ಲೋಕಾರ್ಪಣೆ ಮಾಡುತ್ತಿದ್ದು, ಹೆಕ್ಟೇರ್‌ಗೆ 22 ರಿಂದ 24 ಕ್ವಿಂಟಾಲ್‌ ಇಳುವರಿ ಬರಲಿದ್ದು, ಎಣ್ಣೆಯೂ ಅಧಿಕವಾಗಿ ಬರಲಿದೆ ಎಂದು ಕೃಷಿ ವಿವಿ ತಿಳಿಸಿದೆ. ಔಷಧೀಯ ಗುಣದ ಅರಿಶಿಣ ಕಪ್ಪು ಅರಿಶಿಣದ ಸಿಎಚ್‌ಎನ್‌ಬಿಟಿ-1 ತಳಿಯು ಔಷಧೀಯ ಗುಣಗಳನ್ನು ಒಳಗೊಂಡಿದೆ. ನೀಲಿ ತಿರುಳನ್ನು ಹೊಂದಿರುವುದು ಇದರ ವಿಶೇಷವಾಗಿದೆ. ಕೃಷಿ ಮೇಳದಲ್ಲಿಈ ತಳಿಗಳು ನೋಡುಗರನ್ನು ಸೆಳೆಯಲಿವೆ. ಮಣ್ಣು ರಹಿತ ಕೃಷಿ, ಸಾವಯವ ಕೃಷಿಗಳು ವಿಶೇಷವಾಗಿ ಗಮನಸೆಳೆಯಲಿವೆ

Sulekha