ಮತ್ತೆ ಕ್ರೈಂ ಪಾರ್ಟ್ನರ್‌ ಜೊತೆ ಸೇರಿದ ಜಾಹ್ನವಿ! – ಮುಂದುವರಿತು ಹಳೇ ಚಾಳಿ.. ಕಿಚ್ಚನ ಕ್ಲಾಸ್‌ ಫಿಕ್ಸ್!‌

ಮತ್ತೆ ಕ್ರೈಂ ಪಾರ್ಟ್ನರ್‌ ಜೊತೆ ಸೇರಿದ ಜಾಹ್ನವಿ! – ಮುಂದುವರಿತು ಹಳೇ ಚಾಳಿ.. ಕಿಚ್ಚನ ಕ್ಲಾಸ್‌ ಫಿಕ್ಸ್!‌

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಗೆ ಜಾಹ್ನವಿ ಕ್ರೈಮ್‌ ಪಾರ್ಟ್ನರ್.‌ ಇಬ್ಬರು ಸೇರಿ ಮನೆಯವರನ್ನ ಟಾರ್ಗೆಟ್‌ ಮಾಡೋದು, ಕೆಟ್ಟದಾಗಿ ಕಮೆಂಟ್‌ ಮಾಡೋದು ಕಾಮನ್‌ ಆಗಿದೆ. ಮೊನ್ನೆಯಷ್ಟೇ ಅವರಿಬ್ಬರ ಗೆಳೆತನ ಮುರಿದುಬಿದ್ದಿತ್ತು. ಇವರು ಕಿತ್ತಾಡಿಕೊಂಡಿರೋ ಸ್ಟೈಲ್‌ ಗೆ ಇನ್ನು ಯಾವತ್ತೂ ಮಾತನಾಡಲ್ಲ ಅಂತ ಎಲ್ಲರು ಅಂದ್ಕೊಂಡಿದ್ರು. ಆದ್ರೀಗ ಇವರಿಬ್ಬರು ಮತ್ತೆ ಜೊತೆಯಾಗಿದ್ದಾರೆ. ಇದೀಗ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾರೆ.

ಇದನ್ನೂ ಓದಿ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ! – 89ನೇ ವಯಸ್ಸಿನಲ್ಲಿ ತಮ್ಮ ಬದುಕಿನ ಯಾನ ಮುಗಿಸಿದ ಚನ್ನೇಗೌಡ

ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಆರಂಭದಿಂದಲೂ ಸಖತ್‌ ಕ್ಲೋಸ್.‌ ಅಶ್ವಿನಿ ಗೌಡ ಹಾಗೂ ಜಾನ್ವಿ ಒಟ್ಟಾಗಿ ಸೇರಿಕೊಂಡು ಮಾಡಿದ ಕೆಲ ಕೆಟ್ಟ ಕೆಲಸಗಳಿಂದ ಇಬ್ಬರೂ ಹೊರ ಜಗತ್ತಿಗೆ ನೆಗೆಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಕೆಲವೇ ವಾರಗಳಲ್ಲಿ ಇವರ ಗೆಳೆತನ ಬ್ರೇಕ್ ಆಗಿತ್ತು. ಇಬ್ಬರೂ ಕಿತ್ತಾಡಿಕೊಂಡರು. ಅಶ್ವಿನಿ ನೆರಳಿನಿಂದ ಹೊರ ಬರುತ್ತಿದ್ದಂತೆ ಜಾನ್ವಿ ಬದಲಾದರು. ಅವರಿಗೆ ಕೆಲ ವಾರ ಸುದೀಪ್ ಕ್ಲಾಸ್​ ತಪ್ಪಿತು. ಆದ್ರೆ ಜಗಳ ಮಾಡಿಕೊಳ್ಳೋದು ಕೂಡ ಇವರಿಬ್ಬರ ಪ್ಲ್ಯಾನ್‌ ಆಗಿತ್ತು. ಮೊನ್ನೆಯಷ್ಟೇ ಇದನ್ನ ಅಶ್ವಿನಿ ಎಲ್ಲರ ಮುಂದೆ ರಿವೀಲ್‌ ಮಾಡಿದ್ರು.  ನಾವಿಬ್ಬರೂ ಬೇರೆ ಆದಂತೆ ನಟಿಸೋಣ ಎಂದು ಮೈಕ್ ಇಲ್ಲದೆ ಚರ್ಚಿಸಿದ್ದೆವು ಎಂದು ಹೇಳಿದ್ರು. ಈ ವಿಚಾರಕ್ಕೆ ಕಿಚ್ಚನ ಕ್ಲಾಸ್‌ ಪಕ್ಕಾ ಆಗಿದೆ. ಆದ್ರೀಗ ಮತ್ತೆ ಇವರಿಬ್ಬರು ಒಂದಾಗಿದ್ದಾರೆ. ಇಬ್ಬರೂ ಮಾತುಕತೆ ಆಡಿಕೊಂಡು ಸಂಬಂಧ ಸರಿ ಮಾಡಿಕೊಂಡಿದ್ದಾರೆ. ಆದರೆ, ಈಗ ಅಶ್ವಿನಿ ಜೊತೆ ಮತ್ತೆ ಸೇರುತ್ತಿದ್ದಂತೆ ಅವರು ಹಳೆಯ ಫಾರ್ಮ್​ಗೆ ಮರಳಿದಂತೆ.

ಇದೀಗ ಅಶ್ವಿನಿ ಜೊತೆ ಸೇರ್ಕೊಳ್ತಿದ್ದಂತೆ ಜಾಹ್ನವಿ, ಸುಧಿ ಜೊತೆ ಸೇರಿಕೊಂಡು ಮನೆಯವರಿಗೆ ಇಟ್ಟ ಹಾಲನ್ನು ಕದ್ದಿದ್ದಾರೆ. ಅಷ್ಟೇ ಅಲ್ಲದೇ ಕದ್ದ ಆರೋಪವನ್ನ ಗಿಲ್ಲಿ ಮೇಲೆ ಹೊರಿಸಿದ್ದಾರೆ. ಮನೆಯವರಿಗೆ ಎಂದು ಮೀಸಲಿಟ್ಟ ಮೇಲೆ ಅದರಲ್ಲಿ ಎಲ್ಲರ ಪಾಲೂ ಇರುತ್ತದೆ. ಆದರೆ, ತಮಗಷ್ಟೇ ಸಿಗಬೇಕು ಎಂದು ಬಯಸೋದು ತಪ್ಪಾಗುತ್ತದೆ. ಈ ಕಾರಣಕ್ಕೆ ಸುದೀಪ್ ವೀಕೆಂಡ್​ನಲ್ಲಿ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮತ್ತೊಂದ್ಕಡೆ ನಿನ್ನೆ ನಡೆದ ಟಾಸ್ಕ್‌ ವೇಳೆ ಅಶ್ವಿನಿ ಹಾಗೂ ಜಾಹ್ನವಿ ರಕ್ಷಿತಾಗೆ ಖತರ್ನಾಕ್‌ ಐಡಿಯಾ ಕೊಟ್ಟಿದ್ದಾರೆ. ಟಾಸ್ಕ್‌ ಆಡುವಾಗ ಕಾವ್ಯಗೆ ಒದಿಯುವಂತೆ ಸೂಚಿಸಿದ್ದಾರೆ. ಇದೀಗ ಈ ವಿಚಾರವಾಗಿಯೂ ಕಿಚ್ಚ ಕ್ಲಾಸ್‌ ತೆಗೆದುಕೊಳ್ಳಲೇಬೇಕು ಎಂದು ವೀಕ್ಷಕರು ಒತ್ತಾಯಿಸುತ್ತಾರೆ. ಆಟ ಗೆಲ್ಲಬೇಕು ಹೌದು.. ಆದ್ರೆ ಈ ಆಟವನ್ನ ಹಾಳು ಮಾಡೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಿಲ್ಲಿ ನಟ ಅವರು ಜಾನ್ವಿಗೆ ಛೀಮಾರಿ ಹಾಕಿದ್ದಾರೆ. ಇಷ್ಟೆಲ್ಲ ಆದ ಬಳಿಕವೂ ಮತ್ತೆ ಅಶ್ವಿನಿ ಅವರ ಜೊತೆಯೇ ಹೋಗುತ್ತಿದ್ದೀರಲ್ಲ. ನಾನಾಗಿದ್ದರೆ ಅವರ ಗೆಳೆತನ ಮುರಿದುಕೊಂಡು ಈಚೆ ಬರುತ್ತಿದ್ದೆಎಂದು ಗಿಲ್ಲಿ ಹೇಳಿದ್ದಾರೆ. ಇದಕ್ಕೆ ಜಾನ್ವಿ ಅವರು ನಕ್ಕಿದ್ದಾರೆ. ಈ ಮೂಲಕ ತಾವು ಬದಲಾಗೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಂತೆ ಇದೆ.

Shwetha M